Advertisement

ಕ್ಲಬ್‌ ಆಸ್ತಿ ಕಬಳಿಕೆಗೆ ಹುನ್ನಾರ ಆರೋಪ: ಲೋಕಾಕ್ಕೆ ದೂರು

12:13 PM Nov 19, 2017 | |

ಹುಬ್ಬಳ್ಳಿ: ಧಾರವಾಡದ ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಸಂಘಗಳ ನೋಂದಣಾಧಿಕಾರಿ ಸಾವಿತ್ರಿ ಕಡಿ ಹಾಗೂ ಇನ್ನಿತರರು ಹುಬ್ಬಳ್ಳಿ ಸೋಷಿಯಲ್‌ ಕ್ಲಬ್‌ನ ಬೈಲಾ ತಿದ್ದುಪಡಿ ಮಾಡುವ ಮೂಲಕ ಕ್ಲಬ್‌ನ ಆಸ್ತಿ ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ಲೋಕಾಯುಕ್ತರಿಗೆ ದೂರು ಕೊಟ್ಟಿದ್ದಾರೆ.

Advertisement

1900 ಪೂರ್ವದಲ್ಲಿಯೇ ಹುಬ್ಬಳ್ಳಿಯ ವಕೀಲರು ಹುಬ್ಬಳ್ಳಿ ಸೋಷಿಯಲ್‌ ಕ್ಲಬ್‌ ಹುಟ್ಟುಹಾಕಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಈ ಕ್ಲಬ್‌ಗ ಸ್ಥಳ, ಕಟ್ಟಡವಿರಲಿಲ್ಲ. ಕಾರಣ ರಾಮರಾವ ಚಿಟಗುಪ್ಪಿ ಅವರ ಕುಟುಂಬದವರು ಅವರ ಸವಿನೆನಪಿಗಾಗಿ ನಗರದ ನ್ಯಾಯಾಲಯ ಸಂಕೀರ್ಣಕ್ಕೆ ಹೊಂದಿಕೊಂಡಿರುವ ಸಿಟಿಎಸ್‌ ನಂ. 494,

ಕ್ಷೇತ್ರ 2564ಚ. ಯಾರ್ಡ್‌ ಜಮೀನನ್ನು ಕ್ಲಬ್‌ನ ಕಟ್ಟಡಕ್ಕಾಗಿ 14-6-1900ರಂದು ದಾನ ಕೊಟ್ಟಿದ್ದರು. 1984-85ರಲ್ಲಿ ಈ ಕ್ಲಬ್‌ ನೋಂದಣಿ ಆಗಿ ಆಡಳಿತ ಮಂಡಳಿ ರಚಿಸಲಾಗಿತ್ತು. 8 ಜನರಲ್ಲಿ 6 ಜನರು ವಕೀಲರಿದ್ದರು. ಈ ಕ್ಲಬ್‌ನ ಬೈಲಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರನ್ನು ಸದಸ್ಯರನ್ನಾಗಿ ಪಡೆದುಕೊಳ್ಳಬೇಕು ಎಂಬ ನಿಯಮ ರಚಿಸಿ, ವಕೀಲರ ಹಿಡಿತದಲ್ಲಿ ಕ್ಲಬ್‌ ನಡೆಯಬೇಕೆಂಬ ನಿಯಮವಿತ್ತು.

ಆದರೆ ಇತ್ತೀಚೆಗೆ ಕೆಲವರು ದುರುದ್ದೇಶದಿಂದ ಕೋಟ್ಯಂತರ ರೂ. ಬೆಲೆಯುಳ್ಳ ಆಸ್ತಿ  ಕಬಳಿಸಲು ಹುನ್ನಾರ ನಡೆಸಿದ್ದಾರೆ. ಬೈಲಾ ತಿದ್ದುಪಡಿ ಮಾಡಿ ಅಜೀವ ಸದಸ್ಯತ್ವ ಶುಲ್ಕವನ್ನು 500 ರೂ. ಬದಲು 50 ಸಾವಿರ ರೂ. ಗೆ ಹೆಚ್ಚಿಸಿದ್ದಾರೆ. ಆ ಮೂಲಕ ವಕೀಲರು ಸದಸ್ಯತ್ವ ಪಡೆಯದ ಹಾಗೆ ಮಾಡಿ ಆಸ್ತಿ ಕಬಳಿಸುವ ಹುನ್ನಾರ ಕಂಡುಬರುತ್ತಿದೆ.

ಸಹಕಾರ ಸಂಘಗಳ ಉಪನಿಬಂಧಕರು ಕಾನೂನುಬಾಹಿರವಾಗಿ ಬೈಲಾ ತಿದ್ದುಪಡಿಗೆ ಅವಕಾಶಕೊಟ್ಟು ಕರ್ತವ್ಯಲೋಪ ಎಸಗಿದ್ದಾರೆ. ಹುಬ್ಬಳ್ಳಿ ಸೋಷಿಯಲ್‌ ಕ್ಲಬ್‌ನ ವ್ಯವಹಾರಗಳ ಕುರಿತು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಪ್ರಕಾರ ಶಾಸನಬದ್ಧ ವಿಚಾರಣಾಧಿಕಾರಿಗಳು ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿಗಳು 18-4-2013ರಲ್ಲಿ ವಿಚಾರಣಾ ವರದಿ ಸಲ್ಲಿಸಿ ಲೋಕಾಯುಕ್ತರಿಂದ ತನಿಖೆ ಕೈಗೊಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದ್ದಾರೆ.

Advertisement

ಅಲ್ಲದೆ ಕ್ಲಬ್‌ಗೆ ಸಂಬಂಧಿಸಿದ ದಾಖಲೆ ಹಾಗೂ ರಜಿಸ್ಟಾರ್‌ಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸುವಲ್ಲಿ ಕ್ಲಬ್‌ನ ಕಾರ್ಯದರ್ಶಿ ವಿಫಲವಾಗಿದ್ದಾರೆ ಎಂದು ತಿಳಿಸಿದ್ದರೂ ಅವರ ವಿರುದ್ಧ ಸಹಕಾರ ಸಂಘಗಳ ಉಪನಿಬಂಧಕರು ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ಎಸಗಿದ್ದಾರೆ. 

ಶಾಸನಬದ್ಧ ವಿಚಾರಣಾಧಿಕಾರಿಗಳ ವರದಿ ಮುಚ್ಚಿಟ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಆದ್ದರಿಂದ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಶೋಕ  ಅಣವೇಕರ ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next