ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹುಂಡೈ ಕಂಪನಿ, ಐ20 ಸರಣಿಯ 2020ರ ಮಾಲಿಕೆಯನ್ನು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಮತ್ತಷ್ಟು ಫೀಚರ್‌ನೊಂದಿಗೆ ಈ ಕಾರು ಮಾರುಕಟ್ಟೆಗೆ ಪ್ರವೇಶಿಸಿದೆ. ವಿಶಾಲ ಭಾರತಕ್ಕೆ ಒಂದೇ ಬೆಲೆ ಎಂಬ ಉದ್ಘೋಷದೊಂದಿಗೆ ಇದನ್ನು ಲಾಂಚ್
ಮಾಡಲಾಗಿದ್ದು,ಕಾರಿನ ಎಕ್ಸ್ ಶೋ ರೂಂ ದರ6.79 ಲಕ್ಷ ರೂ.ನಿಂದ ಆರಂಭಗೊಳ್ಳಲಿದೆ. ಅಷ್ಟೇ ಅಲ್ಲ, ಅ.28ರಿಂದಲೇ ಈ ಕಾರಿನ ಬುಕಿಂಗ್ ಆರಂಭವಾಗಿದ್ದು, ನ.6ರ ವೇಳೆಗೆ10 ಸಾವಿರಕ್ಕೂ ಹೆಚ್ಚು ಬುಕಿಂಗ್ ಬಂದಿದೆ.
ಈ ಕಾರು ಕೂಡ ಮ್ಯಾಗ್ನ, ಸ್ಫೋರ್ಟ್ಸ್, ಆಸ್ತ ಮತ್ತು ಆಸ್ತ (ಓ)ನಲ್ಲಿ ಸಿಗಲಿದೆ. ಡಿಜಿಟಲ್ ಇನ್ ಸ್ಟ್ರೆಮೆಂಟ್ ಪ್ಯಾನಲ್, ಪುಷ್ ಬಟನ್ ಸ್ಟಾರ್ಟ್/ಸ್ಟಾಪ್,ಸ್ಟೀರಿಂಗ್
ಮೌಂಟೆಡ್ ಕಂಟ್ರೋಲ್, ಆಟೋ ಮ್ಯಾಟಿಕ್ ಎಸಿ, ಬ್ಲೂ ಆಂಬಿಯಂಟ್ ಲೈಟಿಂಗ್, 10.25 ಎಂಜಿನ್ ಇನ್ಫೋಟೈನ್ ಮೆಂಟ್, ಬ್ಲೂ ಲಿಂಕ್ ಕನೆಕ್ಟಿವಿಟಿ ಸ್ಯೂಟ್
ಮತ್ತು ಇನ್ನೂ 50 ಇತರೆ ಫೀಚರ್‌ಗಳನ್ನು ಒಳಗೊಂಡಿದೆ.
ಹಾಗೆಯೇ ಬಾಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಟೈರ್ ಪ್ರಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್ ಕೂಡ ಇದೆ. ಸುರಕ್ಷತೆ ವಿಚಾರದಲ್ಲಿ ಡ್ನೂಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ರಿವರ್ಸ್ ಪಾರ್ಕಿಂಗ್ ಸಿಸ್ಟಮ್ ಇದೆ.
ಟಾಪ್ ಎಂಡ್‌ನಲ್ಲಿ ಆರು ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾದ ವ್ಯವಸ್ಥೆ ಇದೆ. ಈ ಕಾರನ್ನು ಲೈಟ್ ವೈಟ್ ಕೆ ಫಾರ್ಮ್ ನಲ್ಲಿ ರೂಪಿಸಲಾಗಿದೆ. ನೋಡಲು ಒಂದಷ್ಟು ದೊಡ್ಡದಾಗಿಯೂ ಕಾಣುತ್ತದೆ. ಜತೆಗೆ ಝಡ್ ಶೇಪ್ಡ್ ಟೈಲ್ ಲ್ಯಾಂಪ್, ಆಂಗುಲರ್ ಬ್ಲ್ಯಾಕ್ಡ್- ಔಟ್ ಮತ್ತು ಕಾಂಪ್ಯಾಕ್ಟ್ಎಲ್‌ಇಡಿ ಹೆಡ್ ಲ್ಯಾಂಪ್ ವಿಶೇಷತೆ ಇದೆ.