ಕಾರ್ಯ ಕೈಗೊಳ್ಳುವ ಮೂಲಕ ಚಡಚಣ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣವನ್ನಾಗಿ ಪರಿವರ್ತಿಸುವುದು
ನನ್ನ ಗುರಿಯಾಗಿದೆ ಎಂದು ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ ಹೇಳಿದರು.
Advertisement
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಲಾಗುವ ಪ್ರವಾಸಿ ಮಂದಿರಕ್ಕೆ ರವಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ, ಶುದ್ಧ ಕುಡಿಯುವ ನೀರು, ಕಾಂಕ್ರೀಟ್ ರಸ್ತೆ, ಬೀದಿ ದೀಪ ಅಳವಡಿಸುವುದು ಸೇರಿದಂತೆ ಪಟ್ಟಣಕ್ಕೆ ಬೇಕಾಗುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು. ಪಟ್ಟಣವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ಮಹಾಲಕ್ಷ್ಮೀ ಕೆರೆ ಹತ್ತಿರ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ, ಸಮೀಪದ ಟಾಕಳಿ ಗ್ರಾಮದ ಭೀಮಾ ನದಿಯಿಂದ ಪಟ್ಟಣದ ಕೆರೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 60 ಕೋಟಿ ರೂ., ಬೋರಿ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಅಗಲೀಕರಣಕ್ಕೆ 12 ಕೋಟಿ ರೂ. ಹಾಗೂ ವಿಶೇಷ ಪ್ಯಾಕೇಜಅಡಿ 15 ಕೋಟಿ ರೂ. ಮಂಜೂರಾಗಿದೆ ಎಂದರು.
Related Articles
ಎಸ್. ಮಕಾನದಾರ, ಭೀಮಾಶಂಕರ ವಾಳಿಖೀಂಡಿ, ದಾನಮ್ಮಗೌಡತಿ ಪಾಟೀಲ, ರಾಜಶೇಖರ ಕೋಳಿ, ಚಂದು ಶಿಂಧೆ, ಪ್ರವೀಣ ಕಲ್ಯಾಣಶೆಟ್ಟಿ, ರಾಮ ಮಾಲಾಪುರ, ಕಲ್ಮೇಶ ವಾಘಮೋರೆ, ಸಿದ್ದು ಸೋಲಾಪುರ, ಲೋಕೊಪಯೋಗಿ ಇಲಾಖೆ ಅಧಿಕಾರಿಗಳಾದ ಆರ್.ಆರ್. ಕತ್ತಿ, ಪಿ.ಎಸ್. ಹೊಟ್ಟಿ, ಎಸ್.ಎಂ. ಪಾಟೀಲ, ಪಪಂ ಮುಖ್ಯಾಧಿಕಾರಿ ಶಿವಾನಂದ ಪೂಜಾರ ಇದ್ದರು.
Advertisement