ಧಾರವಾಡ: ಧಾರವಾಡ ಆಕಾಶವಾಣಿ ಸಿಬ್ಬಂದಿ ಕಳೆದ 25 ವಾರಗಳಿಂದ ನಡೆಸಿಕೊಂಡು ಬಂದಿರುವ ಸ್ವತ್ಛತಾ ಕಾರ್ಯ ಮತ್ತು ಶ್ರಮದಾನ ಇತರ ನೌಕರರಿಗೆ ಮಾದರಿಯಾಗಿದೆ ಎಂದು ಜಿಪಂ ಸಿಇಒ ಸ್ನೇಹಲ್ ಹೇಳಿದರು.
ನಗರದ ಆಕಾಶವಾಣಿ ಕೇಂದ್ರದಲ್ಲಿ ನಮ್ಮ ನಡೆ ಸ್ವತ್ಛತೆ ಕಡೆ ಎಂಬ 25 ವಾರಗಳ ಶ್ರಮದಾನದ ರಜತ ಸಪ್ತಾಹ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ 25 ವಾರಗಳಿಂದ ಪ್ರತಿ ಬುಧವಾರ ನಮ್ಮ ನಡೆ ಸ್ವತ್ಛತೆ ಕಡೆ
ಶ್ರಮದಾನ ಕಾರ್ಯಕ್ರಮ ಹಾಕಿಕೊಂಡು ಸಂಜೆ 5ರಿಂದ 6ಗಂಟೆವರೆಗೆ ಆಕಾಶವಾಣಿ ಕೇಂದ್ರದ ಅಧಿಕಾರಿಗಳ ವರ್ಗ ಹಾಗೂ ಸಿಬ್ಬಂದಿ ವರ್ಗಗಳು ಸೇರಿ ಒಟ್ಟು 72 ಜನರು ಸ್ವಯಂ ಪ್ರೇರಣೆಯಿಂದ ಆಕಾಶವಾಣಿ ಕೇಂದ್ರದ ಆವರಣ ಸ್ವತ್ಛಗೊಳಿಸುತ್ತ ಬಂದಿದ್ದಾರೆ.
ಇದು ಎಲ್ಲರಿಗೂ ಮಾದರಿಯಾಗಿದೆ. ಎಂದರು. ಮನುಷ್ಯನಿಗೆ ಉಸಿರಾಡುವ ಗಾಳಿ ಎಷ್ಟು ಮುಖ್ಯವೋ ಅಷ್ಟೇ ರೇಡಿಯೋ ಕೇಳುಗರಿಗೆ ಆಕಾಶವಾಣಿ ಬಿತ್ತರಿಸುವ ವಿಷಯಗಳು ಮುಖ್ಯ ಎಂದರು. ನಿಲಯ ಸಹಾಯಕ ನಿರ್ದೇಶಕ ಸತೀಶ ಪರ್ವತಿಕರ ಮಾತನಾಡಿ,
ಧಾರವಾಡ ಆಕಾಶವಾಣಿ ಕೇಂದ್ರವು 57 ವಸಂತಗಳನ್ನು ಕಂಡಿದ್ದು ಇದುವರೆಗೆ 3.5 ಕೋಟಿ ಜನರು ಕನ್ನಡ ಸುದ್ದಿ ಸಮಾಚಾರ ಕೇಳುತ್ತಾರೆ. ವಿವಿಧ ರಂಗದಲ್ಲಿ ಸರಣಿ ಕಾರ್ಯಕ್ರಮ ಬಿತ್ತರಿಸಲಾಗುತ್ತಿದೆ ಎಂದರು. ತಾಂತ್ರಿಕ ನಿರ್ದೇಶಕ ಜೀವನ ಶೆಟ್ಟಿ ಇದ್ದರು. ಮಾಯಾ ರಾಮನ್ ಸ್ವಾಗತಿಸಿದರು. ದಿವಾಕರ ಹೆಗಡೆ ವಂದಿಸಿದರು.