Advertisement

“ಈಗಲೂ ಆಡಳಿತ ನಮ್ಮ ಕೈಯ್ಯಲ್ಲೇ ಇದೆ’: ಉದ್ಯೋಗಿಗಳಿಗೆ ಟ್ವಿಟರ್‌ ಸಿಇಒ ಧೈರ್ಯ

10:01 AM Apr 27, 2022 | Team Udayavani |

ನ್ಯೂಯಾರ್ಕ್‌:”ಸದ್ಯಕ್ಕೆ ನಿಶ್ಚಿಂತೆ ಯಿಂದಿರಿ. ಈ ಮಾರಾಟ ವ್ಯವಹಾರ ಪೂರ್ಣಗೊಳ್ಳು ವುದಕ್ಕೆ ಮೂರರಿಂದ ಆರು ತಿಂಗಳ ಕಾಲ ಹಿಡಿಯಬಹುದು. ಕನಿಷ್ಠ ಅಲ್ಲಿಯವರೆ ಗಾದರೂ ಕಂಪೆನಿಯ ಆಡಳಿತ ನಮ್ಮ ಕೈಯ್ಯಲಿದೆ. ಕಂಪೆನಿಯು ಎಂದಿನಂತೆ ಕೆಲಸ ಮಾಡುತ್ತದೆ”.

Advertisement

ಅಮೆರಿಕದ ದೈತ್ಯ ಉದ್ಯಮಿ ಎಲಾನ್‌ ಮಸ್ಕ್ ಅವರಿಗೆ ಟ್ವಿಟರ್‌ ಸಂಸ್ಥೆ ಮಾರಾಟ ವಾದ ಹಿನ್ನೆಲೆಯಲ್ಲಿ ದಿಗ್ಭ್ರಾಂತ ರಾಗಿರುವ ಟ್ವಿಟರ್‌ ಸಿಬಂದಿಗೆ, ಟ್ವಿಟರ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಪರಾಗ್‌ ಅಗರ್ವಾಲ್‌ ಹೇಳಿದ ಮಾತುಗಳಿವು. ಈ ಮೂಲಕ ಅವರು, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.

ಟ್ವಿಟರ್‌ ಸಂಸ್ಥೆ ಮಾರಾಟವಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆ, ಕಂಪೆನಿಯ ಉದ್ಯೋ ಗಿಗಳ ಜತೆಗೆ ಸಭೆ ನಡೆಸಿದರು. “ಕಂಪೆನಿ ಮಾರಾಟದ ವರ್ತಮಾನ ನಿಮ್ಮಲ್ಲಿ (ಉದ್ಯೋಗಿಗಳಿಗೆ) ನಾನಾ ರೀತಿಯ ಭಾವನೆಗಳನ್ನು ಹುಟ್ಟುಹಾಕಿರಬಹುದು.

“ಟ್ವಿಟರ್‌ನ ಮುಂದಿನ ದಾರಿ ಹೇಗಿರುತ್ತೋ ಏನೋ ಎಂಬುದು ಸದ್ಯಕ್ಕೆ ಹೇಳ ಲಾಗದು. ಆದರೆ, ಮಾರಾಟ ಪ್ರಕ್ರಿಯೆ ಪೂರ್ಣ ವಾಗುವವರೆಗೆ ನಾವು ನಿಶ್ಚಿಂತೆಯಿಂದ ಕೆಲಸ ಮಾಡಬೇಕು ಎಂದಿದ್ದಾರೆ.

ಮಾಜಿ ಸಿಇಒ ಬೆಂಬಲ: ಟ್ವಿಟರ್‌ ಕಂಪೆನಿ ಮಾರಾಟವಾಗಿರುವುದನ್ನು ಟ್ವಿಟರ್‌ನ ಮಾಜಿ ಸಿಇಒ ಜ್ಯಾಕ್‌ ಡೋರ್ಸಿ ಬೆಂಬಲಿಸಿ ದ್ದಾರೆ. ಸಾಮಾಜಿಕ ಮಾಧ್ಯ ಮ ವೊಂದು ದೈತ್ಯ ಕಂಪೆನಿಯಾಗಿ ಬೆಳೆದು ನಿಂತಾಗ ಅದ ಕ್ಕೊಬ್ಬ ಸೂಕ್ತ ಸಾರಥಿ ಸಿಗಬೇಕು. ಎಲಾನ್‌ ಮಸ್ಕ್ ರವರ ಸಾರಥ್ಯ ಆ ಕಂಪೆನಿಗೆ ಸಿಕ್ಕಿರುವುದು ಸ್ವಾಗತಾರ್ಹ ಎಂದಿದ್ದಾರೆ.

Advertisement

ಟ್ವಿಟರ್‌ಗೆ ಜಮೀಲಾ ಗುಡ್‌ಬೈ
ಟ್ವಿಟರ್‌ ಸಂಸ್ಥೆ ಮಸ್ಕ್ರವರಿಗೆ ಮಾರಾಟವಾದ ಸುದ್ದಿ ಕೇಳುತ್ತಿದ್ದಂತೆ ಹಾಲಿವುಡ್‌ನ‌ ಹೆಸರಾಂತ ನಟಿ ಜಮೀಲಾ ಜಮಿಲ್‌ ಟ್ವಿಟರ್‌ನಿಂದ ಆಚೆ ನಡೆದಿದ್ದಾರೆ.

ಈ ಕುರಿತಂತೆ ತಾವು ಮಾಡಿರುವ ಕಡೆಯ ಟ್ವೀಟ್‌ನಲ್ಲಿ, “ಟ್ವಿಟರ್‌ ಸಂಸ್ಥೆಯು, ಮಸ್ಕ್ರವರ ಕೈಗೆ ಹೋಯಿ ತೆಂದರೆ, ಅಲ್ಲಿನ್ನು ಮನಸ್ಸಿನ ಮಾತನ್ನು ಮುಕ್ತವಾಗಿ ಹಂಚಿಕೊಳ್ಳುವ ಸ್ವಾತಂತ್ರ್ಯಕ್ಕೆ ತೆರೆ ಬೀಳಲಿದೆ. ಮುಂದೆ ಟ್ವಿಟರ್‌ನಲ್ಲಿ ಕೇವಲ ಧರ್ಮಾಂಧತೆ ಹಾಗೂ ಮಹಿಳಾ ದ್ವೇಷಕ್ಕೆ ಸಂಬಂಧಿಸಿದ ಟ್ವೀಟ್‌ಗಳೇ ತುಳುಕಾಡಬಹುದು. ಹಾಗಾಗಿ ನಾನು ಟ್ವಿಟರ್‌ ಅನ್ನು ಬಿಡಲು ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ಇದು ನನ್ನ ಕಡೆಯ ಟ್ವೀಟ್‌ ಆಗಿದೆ” ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next