Advertisement
ರಾಜ್ಯ ಕಾರ್ಯಕಾರಿಣಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಪಕ್ಷಗಳಲ್ಲಿ ಅಸಮಾಧಾನ, ಗೊಂದಲ ಉಂಟಾಗಿ ಸಮಾಧಾನ ಮಾಡುವುದಲ್ಲೇ ಕಾಲ ಕಳೆಯಲಾಗುತ್ತಿದೆ. ಜನರ ಸಮಸ್ಯೆಗೆ ಸ್ಪಂದನೆ ಮಾಡಲು ಯಾರಿಗೂ ಸಮಯವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪವಿತ್ರ ಹಜ್ ಭವನಕ್ಕೆ ಮತಾಂಧ ಟಿಪ್ಪು ಹೆಸರು ಇಡುವುದಕ್ಕೆ ನಮ್ಮ ವಿರೋಧವಿದ್ದು, ರಾಜ್ಯ ಕಾರ್ಯಕಾರಿಣಿಯಲ್ಲಿ ಈ ಕುರಿತು ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ರಾಜ್ಯ ವಕ್ತಾರರಾದ ಅಶ್ವಥ್‌ನಾರಾಯಣ, ಸಹ ವಕ್ತಾರರಾದಎಸ್.ಪ್ರಕಾಶ್, ಎ.ಎಚ್.ಆನಂದ್, ಮಾಜಿ ಉಪ ಮೇಯರ್ ಹರೀಶ್ ಉಪಸ್ಥಿತರಿದ್ದರು.