ಹುನಗುಂದ: ಗುರು ಶಿಷ್ಯರ ಸಂಬಂಧ ಸದಾ ಕಾಲ ಅಮರವಾದುದು ಎಂದು ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಜಿ. ಮಿರ್ಜಿ ಹೇಳಿದರು.
ಸಾಧಕರಿಗೆ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು. ಅಂದಾಗ ಮಾತ್ರ ಸಾಧನೆಯ ಹಾದಿ ಸರಳವಾಗುತ್ತದೆ. ಸದಾ ಪ್ರಯತ್ನದ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಿದಾಗ ಗುರುವಿಗೆ ಕೊಡಬೇಕಾದ ಗೌರವ ಮತ್ತು ತಂದೆ ತಾಯಿಗಳಿಗೆ ನೀಡಬೇಕಾದ ಸೇವೆಯನ್ನು ಎಂದು ಮರೆಯಬಾರದು. ಮಗುವಿದ್ದಾಗ ಮೊದಲು ಸಂಸ್ಕಾರದ ಪಾಠ ಹೇಳಿದ ತಾಯಿ, ನಂತರ ಸಮಾಜದಲ್ಲಿ ಬದುಕಲು ಕಲಿಸಿದ ಶಿಕ್ಷಕ ಒಂದು ನಾಣ್ಯದ ಎರಡು ಮುಖ್ಯಗಳಿದಂತೆ ಎಂದರು.
ನಾವು ಉನ್ನತ ಸರ್ಕಾರಿ ಹುದ್ದೆ ಪಡೆದುಕೊಂಡಾಗ ಹುದ್ದೆಯಲ್ಲಿ ನಾವು ದೊಡ್ಡವರಾದರೂ ತಂದೆ ತಾಯಿ ಮತ್ತು ಗುರುಗಳಿಗೆ ನಾವು ಸಣ್ಣವರೆ ಎಂದು ಭಾವಿಸಿ ತಲೆ ಬಾಗಿಸಿಕೊಡುವ ಗೌರವದ ಮುಂದೆ ಬಹುದೊಡ್ಡ ಕೊಡುಗೆ ಮತ್ತೂಂದಿಲ್ಲ. ಇನ್ನು ಕಲಿಕೆಯಲ್ಲಿ ಸೇರಿದ ಸ್ನೇಹ ಅದು ಜೀವನದ ಪರಿಯಾಂತರವಾಗಿ ಮರೆಯದ ಅನುಭಂದ. ಈ ಸ್ನೇಹ ಸಂಭಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸ್ನೇಹದಲ್ಲಿ ಯಾವದೇ ಭಿನ್ನತೆ ವೈಮನಸ್ಸು ಬರದಂತೆ ಸದಾ ಸ್ನೇಹಮಯ ಜೀವನ ನಡೆಸುವುದು ಮುಖ್ಯ ಎಂದರು.
ಬಳ್ಳಾರಿ ಡಿವೈಎಸ್‌ಪಿ ಜಾವಿದ್ ಇನಾಮದಾರ ಮಾತನಾಡಿ, ನಾನು ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆ ಪಡೆದುಕೊಂಡಿದ್ದರೂ ಗುರುವಿಗೆ ನಾನು ಇಂದಿಗೂ ಆತ್ಮೀಯ ಶಿಷ್ಯನಾಗಿ ಸದಾ ಗುರುವಿನ ಗುಲಾಮನಾಗಿದ್ದೇನೆ. ಈ ದೊಡ್ಡ ಹುದ್ದೆಯ ಕನಸ್ಸು ನನ್ನದಾದರೂ ಅದನ್ನು ನನಸ್ಸುಗೊಳಿಸಿದ್ದು ಗುರು ಕೊಟ್ಟ ಅಕ್ಷರದ ಜ್ಞಾನದಿಂದ ಎನ್ನುವುದನ್ನು ಮರೆತಿಲ್ಲ ಎಂದು ಹೇಳಿದರು.
Advertisement
ಪಟ್ಟಣದ ಟಿಸಿಎಚ್ ಕಾಲೇಜನಲ್ಲಿ 2005-06 ನೆಯ ಸಾಲಿನ ಟಿಸಿಎಚ್ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
Related Articles
Advertisement
ಇದೇ ಸಂದರ್ಭದಲ್ಲಿ ಗುರುಗಳಿಗೆ ಮತ್ತು ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಆರ್‌ಎಂಎಸ್‌ಎ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಜಿ.ಕಡಿವಾಲ ವಹಿಸಿದ್ದರು. ಲಲಿತಾ ಹೊಸಪ್ಯಾಟಿ, ವಿ.ಎಸ್. ಮೇಟಿ, ಜಿ.ಎಂ. ಪಾಟೀಲ, ಬಿ.ಎಲ್. ಕಂಚಗಾರ, ಎಸ್.ಎಚ್. ದಳವಾಯಿ, ಎಂ.ಎಂ. ಶಿರೂರ, ಎಸ್.ಎಸ್. ಹೊಸಮನಿ, ಶಂಕರ ಬೆಳ್ಳುಬ್ಬಿ, ಜಿ.ಬಿ. ಕಾಂತಿ, ಜಿ.ಎಚ್. ಪಾಟೀಲ, ಎಸ್.ಆರ್. ಸೊನ್ನದ, ರಮೇಶ ವಡವಾಣಿ, ಎ.ಐ. ಮಾನ್ವಿ ಉಪಸ್ಥಿತರಿದ್ದರು.
ಬಿ.ಎಚ್. ಜೋಗಿ ಸ್ವಾಗತಿಸಿದರು. ಶ್ರೀಕಾಂತ ಪಾರಗೊಂಡ ಪರಿಚಯಿಸಿದರು. ಮಹಾಂತೇಶ ತಿಪ್ಪಣ್ಣವರ ಮತ್ತು ಮಹಾಂತೇಶ ವಡಗೇರಿ ನಿರೂಪಿಸಿದರು.