ಬಜಪೆ: ಬಜಪೆ ಠಾಣೆಯ ಎರಡು ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯದ ವಾಯಿದೆಗೆ ಹಾಜರಾಗದೆ ವಿಳಾಸ ಬದಲಿಸಿ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಜಬ್ಬರ್ ಯಾನೆ ಪೈರೋಜ್ (25)ನನ್ನು ಬಜಪೆ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಮಾ. 24ರಂದು ಬಂಟ್ವಾಳದಲ್ಲಿ ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತನ ಮೇಲೆ ಈ ಹಿಂದೆ ಪಾಂಡೇಶ್ವರ, ಉಳ್ಳಾಲ, ಮಂಗಳೂರು ನಗರ, ಎಸ್‌ಸಿಪಿಎಸ್, ಬರ್ಕೆ ಠಾಣೆಗಳಲ್ಲಿ ಕೊಲೆಯತ್ನ, ಕಳವು, ಗಾಂಜಾ ಪ್ರಕರಣಗಳು ದಾಖಲಾಗಿದ್ದವು.
ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್‌ರವರ ಮಾರ್ಗದರ್ಶನ, ಡಿಸಿಪಿಯವರಾದ ಅಂಶು ಕುಮಾರ್, ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ರವರ ನಿರ್ದೇಶನದಂತೆ ಈ ಕಾರ್ಯಚರಣೆಯನ್ನು ಬಜಪೆ ಪೊಲೀಸರು ನಡೆಸಿದ್ದರು.