ಆನೇಕಲ್: ಡಿಸೆಂಬರ್ 31ರ ರಾತ್ರಿ 12 ಗಂಟೆ ಸಮಯದಲ್ಲಿ ಎಲ್ಲರೂ ಹೊಸವರ್ಷವನ್ನು ಸ್ವಾಗತಿಸುವ ಸಂಭ್ರಮಾಚರಣೆ ಯಲ್ಲಿದ್ದ ಸಂದರ್ಭದಲ್ಲಿ ಸಲೂನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೊದಲಿಗ ಇದು ಶಾರ್ಟ್‌ಸರ್ಕ್ಯೂಟ್‌ನಿಂದ ಅವಘಡ ಸಂಬಸಿರಬಹುದು ಎಂದುಕೊಂಡಿದ್ದವರಿಗೆ ಸಿಸಿಟೀವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಉದ್ದೇಶ ಪೂರಕವಾಗಿ ಬೆಂಕಿ ಇಟ್ಟಿದ್ದು ಎಂದು ತಿಳಿದು ಬಂದಿದೆ.
ತಾಲೂಕಿನ ಚಂದಾಪುರ ದಲ್ಲಿ ಡಿಸೆಂಬರ್ 31ರ ರಾತ್ರಿ ವಿಶ್ ಫ್ಯಾಮಿಲಿ ಸಲೂನ್‌ಗೆ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಪರಿಕರಗಳು ಬೆಂಕಿಗಾಹುತಿಯಾಗಿದ್ದವು. ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸಲೂನ್ ಮಾಲೀಕರು ಶಾರ್ಟ್‌ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಸೂರ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ: ಒಂದನೇ ತಾರೀಖೀನಂದು ಸಲೂನ್‌ನಲ್ಲಿನ ಸಿಸಿಟೀವಿ ಕ್ಯಾಮೆರಾದ ಪರಿಶೀಲನೆ ನಡೆಸಿದಾಗ ಶಿವಕುಮಾರ್ ಹಾಗೂ ಆತನ ಸಹಚರರು ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿರುವ ಘಟನೆ ಬೆಳೆಕಿಗೆ ಬಂದಿದೆ. ತನಿಖೆ ಆರಂಭಿಸಿದ ಸೂರ್ಯನಗರ ಪೊಲೀಸರು, ಸಿಸಿಟೀವಿ ದೃಶ್ಯ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪುಷ್ಪಾ ತಲೆಮರೆಸಿಕೊಂಡಿದ್ದು, ಆನೇಕಲ್ ಪಟ್ಟಣದ ವಾಸಿ ಶಿವಕುಮಾರ್, ತಮಿಳುನಾಡು ಮೂಲದ ಉಮೇಶ್, ಹರೀಶ್, ಮಣಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ನನಗೂ ಪುಷ್ಪಾಗೆ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ತಮ್ಮನಿಗೆ ಹಣ ಕೊಡಿಸಿದ್ದೆ, ಜೊತೆಗೆ ನನ್ನ ಏಳಿಗೆಯನ್ನು ಸಹಿಸದೇ ಹೀಗೆ ಸಲೂನ್‌ಗೆ ಬೆಂಕಿ ಹಚ್ಚಿದ್ದಾರೆ.
– ಬೇಬಿರಾಣಿ, ಸಲೂನ್ ಮಾಲಕಿ
ಹಣಕಾಸಿನ ವ್ಯವಹಾರಕ್ಕಾಗಿ ದ್ವೇಷ ಇಟ್ಟುಕೊಂಡು ಸಲೂನ್ ಬಾಗಿಲು ಒಡೆದು ಹೊಸ ವರ್ಷದ ದಿನ ರಾತ್ರಿ ಪೆಟ್ರೋಲ್ ಸೋರಿದು ಬೆಂಕಿ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ.
– ಮಲ್ಲಿಕಾರ್ಜುನ ಬಾಲದಂಡಿ, ಬೆಂಗಳೂರು ಗ್ರಾಮಾಂತರ ಎಸ್‌ಪಿ