ಪುತ್ತೂರು: ಐದು ವರ್ಷಗಳ ಹಿಂದೆ ಕೋಡಿಂಬಾಡಿಯಲ್ಲಿ ನಡೆದ ಅಡಿಕೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ 3 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಮಂದಾರ್ತಿ ಕಡೂರ್ ಬಾಯರುಬೆಟ್ಟು ನಿವಾಸಿ ವಿಜಯ ಶೆಟ್ಟಿ ಬಂಧಿತ ಆರೋಪಿ. ಆತ 2018ರಲ್ಲಿ ಕೋಡಿಂಬಾಡಿಯಲ್ಲಿ ಅಡಿಕೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ಅನಂತರ ಜಾಮೀನಲ್ಲಿ ಬಿಡುಗಡೆಗೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
Advertisement