ಕುಂಬಳೆ: ಒಂಬತ್ತು ವರ್ಷದ ಬಾಲಕಿಯ ಮೇಲೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ನ್ಯಾಯಾಲಯ 88 ವರ್ಷಗಳ ಕಠಿನ ಶಿಕ್ಷೆ ಮತ್ತು 7 ಲಕ್ಷ ರೂ. ದಂಡ ವಿಧಿಸಿದೆ.
Advertisement
ದೇಲಂಪಾಡಿ ಚಾಮತ್ತಡ್ಕದ ಮಹಮ್ಮದ್ ಎಂಬ 60 ವರ್ಷದ ಆರೋಪಿಗೆ ಕಾಸರಗೋಡು ಜಿಲ್ಲಾ ಆಡಿಶನಲ್ ಸೆಶನ್ಸ್ ನ್ಯಾಯಾಲಯ ಶಿಕ್ಷೆ ನೀಡಿದೆ.
ಕಳೆದ 2019ರಲ್ಲಿ ಬಾಲಕಿಯನ್ನು ಹಲವು ಬಾರಿ ಮನೆ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಆಡೂರು ಪೊಲೀಸರು ಪ್ರಕರಣ ದಾಖಲಿಸಿದ್ದರು.