Advertisement

ಕದ್ದ ಚಿನ್ನಾಭರಣ ಸಹಿತ ಆರೋಪಿ ಸೆರೆ

12:23 PM May 19, 2017 | Team Udayavani |

ಕಾಪು : ಕಟಪಾಡಿ – ಕೋಟೆ ಗ್ರಾಮದ ಮನೆಯೊಂದರಿಂದ ಒಂದೂವರೆ ವರ್ಷದ ಹಿಂದೆ ಕದ್ದೊಯ್ಯಲಾಗಿದ್ದ ಚಿನ್ನಾ ಭರಣ ಗಳನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಚೋರ ಸೊತ್ತು ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮೇ 17ರಂದು ರಾತ್ರಿ ಮೂಳೂರಿನಲ್ಲಿ ನಡೆದಿದೆ.

Advertisement

ಕಟಪಾಡಿ – ಕೋಟೆ ಗ್ರಾಮದ ಖಂಡಿಗ ನಿವಾಸಿ ವಾಮನ ಪೂಜಾರಿ (35) ಪೊಲೀಸರಿಗೆ ಸೆರೆ ಸಿಕ್ಕ ಆರೋಪಿಯಾಗಿದ್ದು, ಆತನಿಂದ ಸುಮಾರು 3.54 ಲಕ್ಷ ರೂ. ಮೌಲ್ಯದ 132 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಯ ವಿವರ  
ಕಾಪು ಪೊಲೀಸ್‌ ಠಾಣಾ ಕ್ರೈಂ ಎಸ್ಸೆ$ç ಲಕ್ಷ್ಮಣ್‌ ಬಿ. ಮತ್ತು ಸಿಬಂದಿ ಬುಧವಾರ ರಾತ್ರಿ ಮೂಳೂರು ಕಾರ್ಪೊರೇಶನ್‌ ಬ್ಯಾಂಕ್‌ ಬಳಿ ಗಸ್ತಿನಲ್ಲಿದ್ದ ಸಂದರ್ಭ ಪೊಲೀಸರನ್ನು ನೋಡಿದ ಕೂಡಲೇ ವ್ಯಕ್ತಿಯೋರ್ವ ಓಡಿ ಹೋಗಲು ಪ್ರಯತ್ನಿಸಿದ್ದನು. ಇದರಿಂದ ಸಂಶಯಗೊಂಡ ಪೊಲೀಸರು ಆತನನ್ನು ಬೆನ್ನು ಹತ್ತಿ ವಶಕ್ಕೆ ಪಡೆದುಕೊಂಡು, ವಿಚಾರಣೆಗೊಳಪಡಿಸಿದಾಗ ಆತನ ಕಳ್ಳತನದ ಕಸುಬಿನ ವಿಚಾರ ಬೆಳಕಿಗೆ ಬಂದಿದೆ.

ಸಂಶಯಿತ ವಾಮನ ಪೂಜಾರಿಯನ್ನು ವಶಕ್ಕೆ ಪಡೆದು ಪರಿಶೀಲನೆಗೆ ಒಳಪಡಿಸಿದಾಗ ಆತನ ಕಿಸೆಯಲ್ಲಿ ಚಿನ್ನಾಭರಣಗಳಿದ್ದ ಕಟ್ಟೊಂದು ಪತ್ತೆಯಾಗಿದ್ದು, ಅದರ ಬಗ್ಗೆ ವಿಚಾರಿಸಿದಾಗ ಅದು ಒಂದೂವರೆ ವರ್ಷದ ಹಿಂದೆ ಕೋಟೆ ನಿವಾಸಿ ಗೀತಾ ಎಂಬವರ ಮನೆಯಿಂದ ಕದ್ದೊಯ್ಯಲಾಗಿದ್ದ ಚಿನ್ನಾಭರಣ ಎಂದು ಬಾಯ್ಬಿಟ್ಟಿದ್ದಾನೆ.

ಬ್ಯಾಂಕ್‌ನಿಂದ ಬಿಡಿಸಿ, ಮಾರಾಟಕ್ಕೆ ಯತ್ನ
ಒಂದೂವರೆ ವರ್ಷ ಹಿಂದೆ ಕದಿಯಲಾಗಿದ್ದ ಚಿನ್ನಾಭರಣವನ್ನು ಬಳಿಕ ಸಿ. ಎ. ಬ್ಯಾಂಕ್‌ವೊಂದರಲ್ಲಿ ಅಡವಿಟ್ಟಿದ್ದು, ಸಿ. ಎ. ಬ್ಯಾಂಕ್‌ನಿಂದ ಬಿಡಿಸಿ ಮಂಗಳೂರಿಗೆ ಮಾರಾಟ ಮಾಡಲೆಂದು ಕೊಂಡೊಯ್ಯುತ್ತಿರುವುದಾಗಿ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ.

Advertisement

ವಶಪಡಿಸಿಕೊಳ್ಳಲಾದ ಚಿನ್ನಾಭರಣಗಳ ವಿವರ  
ಚಿನ್ನದ ಅಗಲ ಬಳೆ 1, ಪೆಂಡೆಂಟ್‌ ಇರುವ ಚೈನ್‌ 1, ಮೂರು ಎಳೆಯ ಚಿನ್ನದ ಸರ 1 ಹಾಗೂ ಒಂದು ಜತೆ ಕಿವಿಯ ಬೆಂಡೋಲೆ ಸಹಿತ 132 ಗ್ರಾಂ ತೂಕದ ಚಿನ್ನಾಭರಣ ವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 3.54 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಕಾಪು ವೃತ್ತನಿರೀಕ್ಷಕ ಹಾಲಮೂರ್ತಿ ರಾವ್‌ ಅವರ ನಿರ್ದೇಶನದಂತೆ, ಕಾಪು ಎಸ್ಸೆ$ç ಜಗದೀಶ್‌ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಕಾಪು ಕ್ರೈಂ ಎಸ್ಸೆ$ç ಲಕ್ಷ್ಮಣ್‌ ಬಿ. ಮತ್ತು ಸಿಬಂದಿ ಕೃಷ್ಣ  ಪೂಜಾರಿ, ಮಹಾಬಲ, ಗಣೇಶ್‌ ನಾಯ್ಕ, ಸಂದೀಪ್‌ ಶೆಟ್ಟಿ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಮೇ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next