Advertisement

ವಿಶೇಷಾಧಿಕಾರಿ ವಿರುದ್ಧ ನಿಂದನೆ ಆರೋಪ

12:06 PM Jul 23, 2018 | Team Udayavani |

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಡೀನ್‌ ಸೂಚನೆಯಂತೆ ಪರಿಶೀಲನೆಗೆ ವೈದ್ಯರು ಕೇಳಿದ ದಾಖಲೆಗಳನ್ನು ನೀಡಿದ ಕಾರಣಕ್ಕೆ ಬಿಎಂಸಿಆರ್‌ಐನ ಟ್ರಾಮಾ ಕೇರ್‌ ಸೆಂಟರ್‌ನ ವಿಶೇಷಾಧಿಕಾರಿ ಡಾ.ಬಾಲಾಜಿ ಪೈ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ದಾದಿಯೊಬ್ಬರು ಡೀನ್‌ ಡಾ.ಎಚ್‌.ಎಸ್‌.ಸತೀಶ್‌ ಅವರಿಗೆ ದೂರು ನೀಡಿದ್ದಾರೆ.

Advertisement

ಜು. 19ರಂದು ಡೀನ್‌ ಅವರ ಸೂಚನೆಯಂತೆ ಪರಿಶೀಲನೆಗಾಗಿ ದಾಖಲೆ ನೀಡುವಂತೆ ಡಾ.ಮಧುಸೂದನ್‌ ಎಂಬುವರು ಕೇಳಿದ್ದರು. ವಿಶೇಷಾಧಿಕಾರಿ ಅನುಮತಿ ಪಡೆದರಷ್ಟೇ ಕಡತ ನೀಡುವುದಾಗಿ ಹೇಳಿದೆ. ಅದಕ್ಕೆ ತಾವೇ ನೇರವಾಗಿ ವಿಶೇಷಾಧಿಕಾರಿಯೊಂದಿಗೆ ಮಾತನಾಡುವುದಾಗಿ ತಿಳಿಸಿದ್ದರಿಂದ ಕಡತ ನೀಡಿದ್ದೆ.

ಇದಕ್ಕೆ ಆಕ್ಷೇಪಿಸಿದ ವಿಶೇಷಾಧಿಕಾರಿಗಳು ಇತರೆ ಸಿಬ್ಬಂದಿಯ ಸಮ್ಮುಖದಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ತೀವ್ರ ಮನನೊಂದಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ ಸೆಂಟರ್‌ನ ಶುಶ್ರೂಷಕಿಯೊಬ್ಬರು ಡೀನ್‌ ಅವರಿಗೆ ದೂರು ನೀಡಿದ್ದಾರೆ. ಈ ದೂರಿನ ಪತ್ರಕ್ಕೆ 21 ಸಿಬ್ಬಂದಿ ಸಹಿ ಮಾಡಿದ್ದಾರೆ.

ಪರಿಶೀಲಿಸಿ ಕ್ರಮ: ವಿಶೇಷಾಧಿಕಾರಿ ಡಾ.ಬಾಲಾಜಿ ಪೈ ಅವರು ನಿಂದಿಸಿದ್ದಾರೆ ಎಂದು ಆರೋಪಿಸಿ ಶುಶ್ರೂಷಕಿ ಒಬ್ಬರು ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಸಿಆರ್‌ಐ ನಿರ್ದೇಶಕರೂ ಆದ ಡೀನ್‌ ಡಾ.ಎಚ್‌.ಎಸ್‌.ಸತೀಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next