ಸುಳ್ಯ: ಕಾರು ಮತ್ತು ಬೈಕ್ ಕಳ್ಳತನ ಪ್ರಕರಣದಲ್ಲಿ ಕಳೆದ 4 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮಾರಿಸಿಕೊಂಡಿದ್ದ ಆರೋಪಿ ಜಟ್ಟಿಪಳ್ಳ ನಿವಾಸಿ ಅಶ್ರಫ್ ರಿಪ್ವಾನ್‌ನನ್ನು ಕೇರಳದ ಕಣ್ಣೂರಿನಿಂದ ಸುಳ್ಯ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2019ರಲ್ಲಿ ಕಾರು ಮತ್ತು ಬೈಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಅಲ್ಲದೆ ವಾರಂಟಿನಲ್ಲಿ ಇರುವ ವಿಳಾಸದಲ್ಲಿ ಆತ ವಾಸವಾಗದೆ ಪೊಲೀಸರಿಗೆ ದಸ್ತಗಿರಿಗೆ ಸಿಗದೆ ಕೇರಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಆರೋಪಿಗೆ ಹಲವಾರು ಬಾರಿ ವಾರಂಟ್ ಹೊರಡಿಸಿತ್ತು.
Advertisement
ಇದೀಗ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದು, ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕ ದಿಲೀಪ್ ಅವರ ಮಾರ್ಗದರ್ಶನದಂತೆ ಪೊಲೀಸ್ ಸಿಬಂದಿ ಉಮೇಶ್ ಹಾಗೂ ಪುರುಷೋತ್ತಮ್ ಅವರು ಕೇರಳದ ಕಣ್ಣೂರಿಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅರಂತೋಡು: ಆರಂತೋಡು ಗ್ರಾಮದ ಕಲ್ಲುಗುಡ್ಡೆ ಮನೆ ಪದ್ಮಯ್ಯ ಕೆ. (47) ಅವರ ಶವ ತೋಟದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ.
Related Articles
—
Advertisement