ಗುಂಡ್ಲುಪೇಟೆ: ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿರುವ ಪರಿಣಾಮ ಕೇರಳ – ತಮಿಳುನಾಡಿನಿಂದಗುಂಡ್ಲುಪೇಟೆಗೆ ಆಗಮಿಸುವ ಪ್ರತಿಯೊಬ್ಬಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ನೆಗೆಟಿವ್‌ವರದಿ ತರಬೇಕಿರುವ ಹಿನ್ನೆಲೆ ತಾಲೂಕಿಗೆ ಬರುವಪ್ರವಾಸಿಗರ ಸಂಖ್ಯೆ ತೀರ ಇಳಿಮುಖ ಕಂಡಿದೆ.
ಇದುಹೋಟೆಲ್ ಉದ್ಯಮ ಹಾಗೂ ಪಾಸ್ಟ್‌ಫುಡ್,ಅಂಗಡಿಗಳ ಮೇಲೆ ಭಾರಿ ಹೊಡೆತ ಬಿದ್ದಿದೆ.ಗುಂಡ್ಲುಪೇಟೆ ಎರಡು ರಾಜ್ಯದ ಗಡಿಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿದಿನ ಕೇರಳ,ತಮಿಳುನಾಡಿಗೆ ಸಾವಿರಾರು ಜನರು ಸಂಚರಿಸುತ್ತಿದ್ದರು. ಪ್ರಸ್ತುತ ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿರುವಕಾರಣಕ್ಕೆ ಹೆಚ್ಚಿನ ಮಂದಿ ಇತ್ತ ಸುಳಿಯುತ್ತಿಲ್ಲ.
ಇದರಿಂದ ಗುಂಡ್ಲುಪೇಟೆಯಿಂದ ಕೇರಳ ಮಾರ್ಗವಾಗಿಕೂತನೂರು, ಭೀಮನಬೀಡು ರಸ್ತೆ ಬದಿಯಲ್ಲಿ ಇಟ್ಟುಕೊಂಡಿರುವ ತರಕಾರಿ ವ್ಯಾಪಾರಿಗಳು, ಹೋಟೆಲ್‌ಗಳತ್ತ ಜನರು ಬರುತ್ತಿಲ್ಲ. ಪಟ್ಟಣದಲ್ಲಿ ಸಂಜೆಯಾಗುತ್ತಿದ್ದಂತೆ ಜನರ ಸಂಖ್ಯೆ ಕಡಿಮೆಯಾಗುತ್ತಿರುವಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಪಾನಿಪುರಿ, ಗೋಬಿ ಮಂಚೂರಿ, ಟೀ ಅಂಗಡಿಗಳಲ್ಲಿಯೂ ಸಹ ವ್ಯಾಪಾರ ಕುಸಿದಿದೆ.
ಬೆರಳೆಣಿಕೆ ವಾಹನಗಳ ಸಂಚಾರ: ಕೇರಳದಿಂದಕರ್ನಾಟಕಕ್ಕೆ ನಿತ್ಯ ಸಹಸ್ರಾರು ವಾಹನಗಳುಸಂಚರಿಸುತ್ತಿದ್ದರು. ಆದರೆ, ಇದೀಗ ಕೋವಿಡ್‌ನೆಗೆಟಿವ್ ವರದಿ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿಮೂಲೆಹೊಳೆ ಚೆಕ್ ಮೂಲಕ ಸಂಚರಿಸುತ್ತಿರುವಕಾರು, ಬೈಕ್‌ಗಳ ಸಂಖ್ಯೆ ಕಡಿಮೆಯಾಗಿದೆ.ಕೆಲ ಹೋಟೆಲ್‌ಗಳಲ್ಲಿ ಸಿಬ್ಬಂದಿ,
ಸಂಬಳ ಕಡಿತ:ಪಟ್ಟಣದಲ್ಲಿರುವ ದೊಡ್ಡ ಹೋಟೆಲ್‌ಗಳನ್ನುನಡೆಸುವ ಮಾಲಿಕರು ಬಾಡಿಗೆ ಕಟ್ಟಲಾಗದ ಪರಿಸ್ಥಿತಿಗೆಬಂದೊದಗಿದ್ದು, ಬಾಗಿಲು ಮುಚ್ಚಬಾರದು ಎಂಬಉದ್ದೇಶದಿಂದ ಕಡಿಮೆ ಸಿಬ್ಬಂದಿಗಳನ್ನು ಕೆಲಸಕ್ಕೆತೆಗೆದುಕೊಂಡು, ಕಡಿಮೆ ಸಂಬಳ ನೀಡಲುಮುಂದಾಗಿದ್ದಾರೆ.
ಲಾಡ್ಜ್ಗಳು ಗ್ರಾಹಕರಿಲ್ಲದೇ ಖಾಲಿಹೊಡೆಯುತ್ತಿವೆ. ಸಣ್ಣ ಪುಟ್ಟ ಹೋಟೆಲ್‌ಗಳು, ತರಕಾರಿಅಂಗಡಿಗಳು, ದಿನಸಿ ಅಂಗಡಿಗಳಲ್ಲಿ ವ್ಯಾಪಾರಕುಸಿದಿದೆ. ಕೋವಿಡ್ ಮೊದಲ ಅಲೆ ಕ್ಷೀಣಿಸುತ್ತಿದ್ದಂತೆಗರಿಗೆದರಿದ್ದ ಆರ್ಥಿಕ ಚಟುವಟಿಕೆಗಳು ಇದೀಗ 2ನೇಅಲೆ ಪರಿಣಾಮ ಮತ್ತೆ ಕುಸಿತ ಕಂಡಿವೆ.
ನಿತ್ಯ ಸಾವಿರಾರು ರೂಪಾಯಿ ತರಕಾರಿವ್ಯಾಪಾರ ಮಾಡುತ್ತಿದ್ದೆವು. ಆದರೆ,ಕೇರಳದಿಂದ ಗುಂಡ್ಲುಪೇಟೆಗೆ ಆಗಮಿಸುವ ವಾಹನಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ300ರಿಂದ 400 ರೂ. ಮಾತ್ರ ವ್ಯಾಪಾರಆಗುತ್ತಿದೆ. ಇದರಿಂದ ಹಾಕಿದ ಬಂಡವಾಳವೂ ಸಹ ಬರದ ಪರಿಸ್ಥಿತಿ ಬಂದೊದಗಿದೆ.
ಮಹದೇವಸ್ವಾಮಿ, ತರಕಾರಿ ಅಂಗಡಿ ಮಾಲಿಕ
ಬಸವರಾಜು ಎಸ್.ಹಂಗಳ