Advertisement
ಅಗಸೆöàಶ್ವರದ ದೇವಸ್ಥಾನದ ಭಾಗದಿಂದ ತ್ರಿವೇಣಿ ಸಂಗಮಕ್ಕೆ ಬರುವ ದಾರಿಯಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವತಿಯಿಂದ ತಿರುಮಕೂಡಲದಲ್ಲಿ ಬೃಹತ್ ಶಿವಲಿಂಗದ ಜತೆಗೆ ದೇಶದ ನಾನಾ ಭಾಗದಲ್ಲಿರುವ 12 ಜ್ಯೋತಿರ್ಲಿಂಗಳ ಪ್ರತಿಕೃತಿ ಸ್ಥಾಪಿಸಲಾಗಿದೆ.
Related Articles
Advertisement
12 ಲಿಂಗಗಳ ಬಗ್ಗೆ ಮಾಹಿತಿ: ದೇಶದ 12 ಕಡೆಗಳಲ್ಲಿ ಶಿವಲಿಂಗದ ದರ್ಶನವನ್ನು ಕುಂಭ ಮೇಳಕ್ಕೆ ಬರುವ ಭಕ್ತರಿಗಾಗಿ ಒಂದೆ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ದೇಶದ 12 ಸ್ಥಳಗಳಿಗೆ ಹೋಗಿ ಜ್ಯೋತಿರ್ಲಿಂಗದ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ.
ಎಲ್ಲೆಲ್ಲಿ ಯಾವ ರೀತಿಯ ಶಿವಲಿಂಗ ಇದೆ ಎಂಬ ಕನಿಷ್ಠ ಮಾಹಿತಿಯಾದರೂ ಇದರಿಂದ ಜನ ಸಾಮಾನ್ಯರಿಗೆ ಹಾಗೂ ಕುಂಭಮೇಳಕ್ಕೆ ಬಂದಿರುವ ಭಕ್ತರಿಗೆ ದೊರೆಯಲಿದೆ. ಅಲ್ಲದೇ, ಆ ದೇವಾಕಲಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭಕ್ತರಿಗೆ ಇಲ್ಲಿ ನೀಡುತ್ತಿದ್ದೇವೆ ಎಂದು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಬಿಂದು ಮಾಹಿತಿ ನೀಡಿದರು.
ಬೃಹತ್ ಶಿವಲಿಂಗ: ಹನ್ನೆರೆಡು ಜ್ಯೋತಿರ್ಲಿಂಗದ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಸುಮಾರು 14 ಅಡಿ ಎತ್ತರದ ಶಿವಲಿಂಗ ಎದುರಿಗೆ ಕಾಣುತ್ತದೆ. ಕಬ್ಬಿಣ ಹಾಗೂ ಫೈಬರ್ ಬಳಸಿ ಇದನ್ನು ನಿರ್ಮಿಸಲಾಗಿದೆ. ಶಿವಲಿಂಗಕ್ಕೆ ಸಂಪೂರ್ಣವಾಗಿ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ.
ರೈತರಿಗೆ ಮಾಹಿತಿ: ಇತ್ತೀಚಿನ ವರ್ಷದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮನಸ್ಸಿನ ಮೇಲಿನ ನಿಯಂತ್ರಣ ಕಡಿಮೆ ಆಗಿರುವುದೇ ಮುಖ್ಯ ಕಾರಣ. ಮನುಷ್ಯ ತನ್ನ ಮನಸ್ಸನ್ನೇ ನಿಯಂತ್ರಿಸಿಕೊಳ್ಳದಷ್ಟು ದುರ್ಬಲನಾಗುತ್ತಿದ್ದಾನೆ. ರೈತರ ಮನಸ್ಸನ್ನು ಸದೃಢಗೊಳಿಸುವ ಉದ್ದೇಶದಿಂದ ಕುಂಭಮೇಳಕ್ಕೆ ಬರುವ ರೈತರಿಗೆ ಅಗತ್ಯ ಮಾಹಿತಿ ಹಾಗೂ ಅವರ ಮನಸ್ಸನ್ನು ಸ್ಥಿರಗೊಳಿಸುವ ಉದ್ದೇಶದಿಂದ ಕೃಷಿಕರ ಸಶಕ್ತಿಕರಣ ಚಿತ್ರಪ್ರದರ್ಶನ ಏರ್ಪಡಿಸಿದ್ದೇವೆ.
ಇಲ್ಲಿ ರೈತರಿಗೆ ಸುಲಭ ಕೃಷಿ ಹಾಗೂ ಮನಸ್ಸಿನ ನಿಯಂತ್ರಣ ಎರಡರ ಬಗ್ಗೆಯೂ ಸಮಗ್ರ ಮಾಹಿತಿ ನೀಡುತ್ತೇವೆ. ರೈತರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡು ಪರಿಹಾರ ಪಡೆದುಕೊಳ್ಳಲು ಅವಕಾಶ ಇದೆ ಎಂದು ಬ್ರಹ್ಮಕುಮಾರಿ ವಿವಿ ಸಂಚಾಲಕರಲ್ಲಿ ಒಬ್ಬರಾದ ಬಿ.ಕೆ.ಪ್ರಾಣೇಶ್ ಮಾಹಿತಿ ನೀಡಿದರು.