Advertisement

2018ರ ಶಬರಿಮಲೆ ತೀರ್ಪು ಅಂತಿಮವಲ್ಲ

12:50 AM Dec 06, 2019 | mahesh |

ಹೊಸದಿಲ್ಲಿ: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶ ಮಾಡ ಬಹುದು ಎಂದು 2018ರಲ್ಲಿ ನೀಡಿದ ತೀರ್ಪು ಅಂತಿಮ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. ಈಗಾಗಲೇ ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ ಎಂದು ಮುಖ್ಯ ನ್ಯಾ| ಎಸ್‌.ಎ. ಬೋಬ್ದೆ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.

Advertisement

ಹೋರಾಟಗಾರ್ತಿ ಬಿಂದು ಅಮ್ಮಿಣಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಈ ಅಂಶ ಉಲ್ಲೇಖಗೊಂಡಿದೆ. ಅಮ್ಮಿಣಿ ಮೇಲೆ ಹಲ್ಲೆಯಾಗಿದೆ ಎಂದು ಅವರ ನ್ಯಾಯವಾದಿ ಇಂದಿರಾ ಜೈಸಿಂಗ್‌ ವಾದಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿತು.

ಈ ನಡುವೆ ಶಬರಿಮಲೆ ದೇಗುಲ ಪ್ರವೇಶಕ್ಕೆ ತನಗೆ ಅನುಮತಿ ನೀಡಲಾಗಿಲ್ಲ ಎಂದು ಫಾತಿಮಾ ಎಂಬವರು ದೂರಿದ್ದಾರೆ. ಅವರೂ ಪ್ರವೇಶಾವಕಾಶಕ್ಕೆ ಅನುವು ಮಾಡಿ ಕೊಡ‌ಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next