Advertisement

ಆನೆಗುಂದಿ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವದ 12 ನೇ ವರ್ಧಂತಿ ಉತ್ಸವ

02:27 PM May 26, 2022 | Team Udayavani |

ಕಾಪು: ಆನೆಗುಂದಿ ಮಹಾಸಂಸ್ಥಾನ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವದ 12 ನೇ ವರ್ಧಂತಿ ಉತ್ಸವವು ಪಡುಕುತ್ಯಾರು ಮೂಲ ಮಠದಲ್ಲಿ ನಡೆಯಿತು.

Advertisement

ಪಟ್ಟಾಭಿಷೇಕ ವರ್ಧಂತಿ ಮಹೋತ್ಸವದ ಅಂಗವಾಗಿ ಕಾಳಹಸ್ತೇಂದ್ರ ಶ್ರೀಗಳಿಂದ ಕಟಪಾಡಿ ಶ್ರೀ ಮಹಾಸಂಸ್ಥಾನದಲ್ಲಿ ಶ್ರೀಕರಾರ್ಚಿತ ದೇವತಾ ಪೂಜೆ ಹಾಗೂ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಪೂಜೆ ನಡೆಯಿತು.

ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ವಿಶ್ವಕರ್ಮ ಯಜ್ಞ, ದಕ್ಷಿಣಾಮೂರ್ತಿ ಯಜ್ಞ, ರುದ್ರ ಯಜ್ಞ, ಸಾಮೂಹಿಕ ಚಂಡಿಕಾಯಾಗ ಮತ್ತು ಪೂರ್ಣಾಹುತಿ ಹಾಗೂ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಪಾದಪೂಜೆ ಸಹಿತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಶ್ರೀಧರ ವಿ. ಆಚಾರ್ಯ ಮಂಬಯಿ ಇವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ ಹಾಗೂ ಬ್ರಹ್ಮಶ್ರೀ ಉಮೇಶ್ ತಂತ್ರಿ ಮಂಗಳೂರು, ಬ್ರಹ್ಮಶ್ರೀ ಸದಾಶಿವ ಪುರೋಹಿತ್ ಮಂಚಕಲ್ ಮೂಡಬಿದ್ರೆ (ವೈದಿಕ),  ಶಿಲ್ಪಿ ರಾಜಗೋಪಾಲ ಆಚಾರ್ಯಕೋಟೇಶ್ವರ, ಶಿಲ್ಪಿ ರಾಘವೇಂದ್ರ ಆಚಾರ್ಯ ಗದಗ (ಶಿಲ್ಪ),  ಕನ್ನಡ ವಿ.ವಿ. ಹಂಪಿ ಪ್ರಾಧ್ಯಾಪಕ ಡಾ| ವಾಸುದೇವ ಬಡಿಗೇರ ಹೊಸಪೇಟೆ (ಸಾಹಿತ್ಯ ಸಂಶೋಧನೆ), ಹಿರಿಯ ಚಿತ್ರಕಲಾವಿದ ಮನೋಹರ ಆಚಾರ್ಯ ಬೆಂಗಳೂರು ( ಚಿತ್ರಕಲೆ), ಡಾ| ಬಿ. ಶ್ರೀಕಂಠಾಚಾರ್ ಮೈಸೂರು (ಬಹುಮಾದ್ಯಮ), ಬಾ. ಭೀ. ಪತ್ತಾರ ಬೆಂಗಳೂರು (ಆಡಳಿತ ಸೇವೆ) ಬೈಕಾಡಿ ಜನಾರ್ಧನ ಆಚಾರ್ಯ ಮಂಗಳೂರು ಅವರಿಗೆ ಮರಣೋತ್ತರ ಪ್ರಶಸ್ತಿ (ಸಮಾಜ ಸೇವೆ), ಆಚಾರ್ಯ ಶ್ರೀಧರದಾಸ್‌ಜಿ ಕುಂಭಾಶಿ (ಹರಿ ಕಥೆ), ಸುರೇಶ್ ಆಚಾರ್ಯ ಬೆಂಗಳೂರು (ಉದ್ಯಮ) ಇವರಿಗೆ ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನಿಸಲಾಯಿತು.

Advertisement

ಇದನ್ನೂ ಓದಿ:ಕಡೂರು: ಬೈಕ್ ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ಪುಡಿಗಟ್ಟಿದ ಪೊಲೀಸರು !

ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಹೈಸ್ಕೂಲ್ ನಿಕಟಪೂರ್ವ ಅಧ್ಯಕ್ಷ ಶ್ರೀ ಶಂಭುದಾಸ ಅವರಿಗೆ ವಿಶೇಷ ಗೌರವಾಭಿನಂದನೆ ಸಲ್ಲಿಸಲಾಯಿತು. ಜಗದ್ಗುರು ಕಾಳಹಸ್ತಾಚಾರ್ಯರ ತೈಲವರ್ಣ ಭಾವಚಿತ್ರವನ್ನು ರಚಿಸಿದ ಕಲಾವಿದ ಪಿ.ಎನ್. ಆಚಾರ್ಯ ಮಣಿಪಾಲ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ಶ್ರೀಮದ್ ಆನೆಗುಂದಿ ಮೂಲ ಮಠ ಮಹಾಸಂಸ್ಥಾನ ಪಂಚ ಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಆಚಾರ್ಯ, ಉದ್ಯಮಿ ಬಿ.ಎನ್.ವಿ ರಾಜಶೇಖರ್ ಹೈದರಾಬಾದ್, ಕುತ್ಯಾರು ಗ್ರಾ. ಪಂ. ಅಧ್ಯಕ್ಷೆ ಲತಾ ಎಸ್. ಆಚಾರ್ಯ, ಎಸ್.ಕೆ.ಜಿ ಐ. ಕೋ. ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು, ದ. ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಸಮಾಜ ಸೇವಕ ಜಯರಾಮ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ಕಾಳಿಕಾಂಬಾ ದೇಗುಲಗಳ‌ ಧರ್ಮದರ್ಶಿಗಳು, ಪ್ರತಿಷ್ಠಾನದ‌ ಪದಾಧಿಕಾರಿಗಳು, ಸಮಾಜ ಭಾಂದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next