Advertisement
241 ರನ್ನುಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ದ್ವಿತೀಯ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 152 ರನ್ ಮಾಡಿ ಸೋಲಿನತ್ತ ಮುಖ ಮಾಡಿತ್ತು. ರವಿವಾರದ 3ನೇ ದಿನದಾಟದಲ್ಲಿ ಉಳಿದ ವಿಕೆಟ್‌ಗಳನ್ನು ಭಾರತ ಕೇವಲ 47 ನಿಮಿಷಗಳಲ್ಲಿ ಉರುಳಿಸಿತು. ಬಾಂಗ್ಲಾ 195ಕ್ಕೆ ಆಲೌಟ್ ಆಯಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉಮೇಶ್ ಯಾದವ್ ಪ್ರವಾಸಿಗರಿಗೆ ಘಾತಕ ಪ್ರಹಾರವಿಕ್ಕಿದರು. 3ನೇ ದಿನದಾಟ ದಲ್ಲಿ ಉಳಿದ ಮೂರೂ ವಿಕೆಟ್‌ಗಳನ್ನು ಉಡಾಯಿಸಿದರು. ಯಾದವ್ ಸಾಧನೆ 53ಕ್ಕೆ 5. ಅಲ್ ಅಮಿನ್ ಹೊಸೈನ್ ಅವರನ್ನು ಕಾಟ್ ಬಿಹೈಂಡ್ ರೂಪದಲ್ಲಿ ಔಟ್ ಮಾಡುವ ಮೂಲಕ ಯಾದವ್ ಭಾರತದ ಗೆಲುವನ್ನು ಸಾರಿದರು.
Related Articles
Advertisement
ಇಶಾಂತ್ ಶರ್ಮ ಸಾಧನೆ 56ಕ್ಕೆ 4 ವಿಕೆಟ್. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಹಾರಿಸಿದ ಇಶಾಂತ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು (ಒಟ್ಟು 78ಕ್ಕೆ 9 ವಿಕೆಟ್). ಹಾಗೆಯೇ 2 ಪಂದ್ಯಗಳಿಂದ ಒಟ್ಟು 12 ವಿಕೆಟ್ ಉರುಳಿಸಿದ ಸಾಹಸಕ್ಕಾಗಿ ಸರಣಿಶ್ರೇಷ್ಠರಾಗಿಯೂ ಮೂಡಿಬಂದರು.
ರಹೀಂ 2 ಅರ್ಧ ಶತಕಬಾಂಗ್ಲಾದ ಆಪತಾºಂಧವನೆಂದೇ ಗುರುತಿಸಲ್ಪಡುವ ಮುಶ್ಫಿಕರ್ ರಹೀಂ ಪ್ರಯತ್ನದಿಂದಾಗಿ ಈ ಪಂದ್ಯ 3ನೇ ದಿನಕ್ಕೆ ಕಾಲಿಟ್ಟಿತ್ತು. ಅವರು 59 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇಶಾಂತ್ ಮತ್ತು ಜಡೇಜಾಗೆ ಬೌಂಡರಿ ರುಚಿ ತೋರಿಸುವ ಮೂಲಕ ರಹೀಂ ರವಿವಾರದ ಆಟವನ್ನು ಅಬ್ಬರದಿಂದಲೇ ಆರಂಭಿಸಿದ್ದರು. ಆದರೆ ಯಾದವ್ ಮುಂದೆ ಅವರ ಆಟ ನಡೆಯಲಿಲ್ಲ. 3ನೇ ದಿನ ಕ್ರೀಸಿಗೆ ಆಗಮಿಸಿದ ಇಬಾದತ್ ಹೊಸೈನ್ ಅವರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ನಿಗೆ ಅಟ್ಟಿದ ಉಮೇಶ್ ಯಾದವ್, ಸ್ಕೋರ್ 184ಕ್ಕೆ ಏರಿದಾಗ ರಹೀಂ ಆಟಕ್ಕೆ ತೆರೆ ಎಳೆದರು. ರಹೀಂ ಗಳಿಕೆ 74 ರನ್. 90 ಎಸೆತ ಎದುರಿಸಿದ ಅವರು 13 ಬೌಂಡರಿ ಸಿಡಿಸಿದರು. ಈ ಸರಣಿಯಲ್ಲಿ ಬಾಂಗ್ಲಾ ಕೇವಲ 2 ಅರ್ಧ ಶತಕ ದಾಖಲಿಸಿದ್ದು, ಎರಡನ್ನೂ ಮುಶ್ಫಿಕರ್ ಅವರೇ ಬಾರಿಸಿದ್ದು ವಿಶೇಷ. ಇಂದೋರ್ ಪಂದ್ಯದ ದ್ವಿತೀಯ ಸರದಿಯಲ್ಲಿ ಅವರು 64 ರನ್ ಹೊಡೆದಿದ್ದರು. ಈ ವೈಟ್‌ವಾಶ್‌ನೊಂದಿಗೆ ಬಾಂಗ್ಲಾದೇಶ ತಂಡದ ಕಿರು ಪ್ರವಾಸ ಮುಗಿಸಿದೆ. ಮೊದಲ ಟಿ20 ಪಂದ್ಯದಲ್ಲಷ್ಟೇ ಭಾರತವನ್ನು ಮಣಿಸಿದ ಬಾಂಗ್ಲಾ, ಆ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತ್ತು.