ಮುಂಬಯಿ: ತೀಯಾ ಸಮಾಜ ಮುಂಬಯಿ ಇದರ 74 ನೇ ಮಹಾಸಭೆಯು ಸೆ. 23 ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಇದೇ ಸಂದರ್ಭದಲ್ಲಿ ಸಂಸ್ಥೆಯ 2018-2020 ರ ಸಾಲಿಗೆ ನೂತನ ಅಧ್ಯಕ್ಷರಾಗಿ ರವೀಂದ್ರ ಎಸ್. ಮಂಜೇಶ್ವರ್ ಅವರನ್ನು ನೇಮಿಸಲಾಯಿತು. ಕಾರ್ಯಕಾರಿ ಸಮಿತಿಗೆ ರೂಪೇಶ್ ವೈ. ರಾವ್, ತಿಮ್ಮಪ್ಪ ಕೆ. ಬಂಗೇರ, ಕೃಷ್ಣ ಎನ್. ಉಚ್ಚಿಲ್, ವಿಶ್ವಾತ್ ಬದ್ದೂರು, ವಾಸು ಜಿ. ಪಾಲನ್, ಉಜ್ವಲ ಚಂದ್ರಶೇಕರ, ವೃಂದಾ ಡಿ. ಬೆಳ್ಚಡ, ದಿವ್ಯಾ ಆರ್. ಕೋಟ್ಯಾನ್ ಈ ಎಂಟು ಸದಸ್ಯರನ್ನು ಮತ್ತು ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ಸುಧಾಕರ್ ಉಚ್ಚಿಲ್, ಮಹಿಳಾಧ್ಯಕ್ಷೆಯಾಗಿ ಪದ್ಮಿನಿ ಕೆ. ಕೋಟೆಕರ್, ಪೂರ್ವ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ಸುರೇಶ್ ಡಿ. ಬಂಗೇರ ಅವರನ್ನು ಆಯ್ಕೆಗೊಳಿಸಿದ್ದು, ಅಂತರಿಕ ಲೆಕ್ಕಪರಿಶೋಧಕರಾಗಿ ರಾಜೇಶ್ ಎಸ್. ಸುವರ್ಣ ಅವರನ್ನು ಆಯ್ಕೆ ಮಾಡಲಾಯಿತು.
ಮಹಾಸಭೆಯಲ್ಲಿ ಗ್ಲೋಬಲ್ ಪೀಸ್ ಫೌಂಡೇಶನ್ ಸಂಸ್ಥೆ ಮತ್ತು ಇಂಟರ್‌ನೆàಶನಲ್ ಕಲ್ಚರಲ್ ಫೆಸ್ಟ್ (ಐಸಿಎಫ್) ಸಂಸ್ಥೆಗಳಿಂದ ವಾಂಟನ್‌ನಲ್ಲಿ ಇಂಟರ್‌ನೆàಶನಲ್ ಮ್ಯಾನ್ ಆಫ್ ದ ಈಯರ್ ಪ್ರಶಸ್ತಿಗೆ ಭಾಜನರಾದ ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್. ಬೆಳ್ಚಡ ಮತ್ತು ದಿವಿಜಾ ಚಂದ್ರಶೇಖರ್ ದಂಪತಿಯನ್ನು ಪದಾಧಿಕಾರಿಗಳು ಅಭಿನಂದಿಸಿ ಗೌರವಿಸಿದರು.
ಸದಸ್ಯರ ಪ್ರತಿಭಾನ್ವಿತ ಮಕ್ಕಳಾದ ಕು| ಮೀನಾಕ್ಷಿ ಎಲ್. ಪಾಲನ್, ಕು| ತಾನಿಯಾ ವಿ. ಬದ್ದೂರು, ಕು| ಪವಿ ಪಿ. ಕೋಟ್ಯಾನ್, ಕು| ವಿಭಾ ಬಿ. ಕೋಟ್ಯಾನ್, ಕು| ರಶ್ಮೀತಾ ಪಿ.ಉಚ್ಚಿಲ್, ಮಾ| ನೀಲ್ ಚೇತನ್ ಕುಮಾರ್ ಇವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಲಾಯಿತು.
ವಿಶ್ವಸ್ತ ಮಂಡಳಿ ಕಾರ್ಯಾಧ್ಯಕ್ಷ ರೋಹಿದಾಸ್ ಎಸ್. ಬಂಗೇರ, ವಿಶ್ವಸ್ಥ ಸದಸ್ಯ ಶಂಕರ್ ಸಿ. ಸಾಲ್ಯಾನ್, ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಸಂಸ್ಥೆಯ ಮುಖವಾಣಿ ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್. ಸುವರ್ಣ, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಬಾಬು ಕೆ. ಕೋಟ್ಯಾನ್, ಮಹಿಳಾಧ್ಯಕ್ಷೆ ಲತಾ ಡಿ. ಉಳ್ಳಾಲ್, ಪೂರ್ವ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಬಿ. ಎಂ, ಮಹಿಳಾಧ್ಯಕ್ಷೆ ಪದ್ಮಿನಿ ಕೆ. ಕೋಟೆಕರ್, ರವೀಂದ್ರ ಎಸ್. ಮಂಜೇಶ್ವರ್, ಮಾಜಿ ಅಧ್ಯಕ್ಷ ಕೆ. ಪಿ. ಅರವಿಂದ್ ವೇದಿಕೆಯಲ್ಲಿದ್ದರು. ಕು| ಪವಿ ಪ್ರಕಾಶ್ ಕೋಟ್ಯಾನ್ ಮತ್ತು ಕು| ವಿಭಾ ಬಾಲಕೃಷ್ಣ ಕೋಟ್ಯಾನ್ ಪ್ರಾರ್ಥನೆಗೈದರು. ಗೌರವ ಕೋಶಾಧಿಕಾರಿ ರಮೇಶ್ ಎನ್. ಉಳ್ಳಾಲ್ ರ್ವಾಕ ಲೆಕ್ಕಪತ್ರ ಮಂಡಿಸಿದರು. ಗೌ| ಪ್ರ| ಈಶ್ವರ್ ಎಂ.ಐಲ್ ಸ್ವಾಗತಿಸಿ ಗತ ಮಹಾಸಭೆ ವರದಿ ವಾಚಿಸಿ ವಂದಿಸಿದರು.
ಚಿತ್ರ- ವರದಿ: ರೋನ್ಸ್ ಬಂಟ್ವಾಳ್