Advertisement
ಸದ್ಯ ರಾಜನಹಳ್ಳಿ ನೀರು ಸರಬರಾಜು ಕೇಂದ್ರದಿಂದ ಜಾಕ್‌ವೆಲ್ ಮೂಲಕ ನದಿಯಿಂದ ನೀರೆತ್ತಿ ದೊಡ್ಡ ಬಾತಿ ನೀರು ಶುದೀœಕರಣ ಘಟಕಕ್ಕೆ ಪೂರೈಸಲಾಗುವುದು. ಅಲ್ಲಿ ಶುದೀœಕರಣಗೊಂಡ ನೀರು ಗುಡ್ಡದ ಮೇಲಿರುವ ಪಾಲಿಕೆಯ ನೀರು ಸಂಗ್ರಹಗಾರಕ್ಕೆ ಮತ್ತೆ ಪಂಪ್ ಮಾಡಲ್ಪಡುತ್ತದೆ. ಇನ್ನೊಂದು ಪೈಪ್ ಲೈನ್ ಮೂಲಕ ನದಿಯಿಂದ ನೀರು ಎತ್ತಿ ಕುಂದುವಾಡ ಕೆರೆಗೆ ನೀರು ಹರಿಸಲಾಗುತ್ತಿದೆ. ಬಾತಿ ಗುಡ್ಡದ ಮೇಲೆ ನಿರ್ಮಾಣ ಮಾಡಿರುವ ನೀರಿನ ಸಂಗ್ರಹಗಾರದಿಂದ ಯಾವುದೇ ಪಂಪ್ ಇಲ್ಲದೇ ನಗರದಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೇರ ನೀರು ತುಂಬಿಸಲಾಗುತ್ತದೆ.
ಪ್ರಸ್ತುತ ನಿರ್ಮಾಣ ಮಾಡಲಾಗುತ್ತಿರುವ ಎಕ್ಸ್‌ಪ್ರೆಸ್ ಫಿಡರ್ ವೇ, ವಿತರಣಾ ಕೇಂದ್ರ ನಿರ್ಮಾಣಕ್ಕೆ 17.80 ಕೋಟಿ ರೂ. ನಿಗದಿಪಡಿಸಾಗಿದೆ. ರಾಜನಹಳ್ಳಿ, ದೊಡ್ಡ ಬಾತಿಯಲ್ಲಿ ವಿತರಣಾ ಕೇಂದ್ರ ಸ್ಥಾಪನೆ ಯೋಜನೆಯ ಮುಖ್ಯ ಉದ್ದೇಶವಾಗಿದೆ. ರಾಜನಹಳ್ಳಿಗೆ ಹರಿಹರದ ಬಳಿಯ
ಹೊಸಪೇಟೆಯ ವಿದ್ಯುತ್ ಪ್ರಸರಣಾ ಕೇಂದ್ರದಿಂದ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲಾಗುವುದು. ಒಟ್ಟು 9 ಕಿಮೀ ದೂರದ ವಿದ್ಯುತ್ ಮಾರ್ಗ ನಿರ್ಮಾಣ ಆಗಲಿದೆ. ಇನ್ನು ದೊಡ್ಡ ಬಾತಿಗೆ ಹರಿಹರದ ವಿದ್ಯುತ್ ವಿತರಣಾ ಕೇಂದ್ರದಿಂದ ಮಾರ್ಗ ನಿರ್ಮಾಣ ಮಾಡಲಾಗುವುದು. 4.8 ಕಿಮೀ ದೂರದ ಮಾರ್ಗ ಇಲ್ಲಿ ನಿರ್ಮಾಣ ಆಗಲಿದೆ.
Related Articles
ಈ ಮೊದಲೇ ಎಕ್ಸ್‌ಪ್ರೆಸ್ ಫಿಡರ್ ಮಾರ್ಗ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಮೊದಲು ಯೋಜನೆ ಅಂದಾಜು ಪಟ್ಟಿ ತಯಾರಿಸಿದಾಗ 8 ಕೋಟಿ ರೂ.ಗಳ ಅಂದಾಜಿತ್ತು. ಆದರೆ, ಕಾಮಗಾರಿ ಆರಂಭ ಆಗಲೇ ಇಲ್ಲ. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಾಗ ಮತ್ತೆ ಎಕ್ಸ್‌ಪ್ರೆಸ್ ಫಿಡರ್ ಮಾರ್ಗ ನಿರ್ಮಾಣದ ಯತ್ನ ಮಾಡಲಾಯಿತು. ಆಗ 10 ಕೋಟಿ ರೂ. ಅಂದಾಜು ವೆಚ್ಚದ ತಯಾರಿಸಲಾಗಿತ್ತು. ಆಗಲೂ ಕಾಮಗಾರಿ ಆರಂಭ ಆಗಲಿಲ್ಲ. ಇದೀಗ 8 ಕೋಟಿ ರೂ. ಅಧಿಕ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಂತಾಗಿದೆ.
Advertisement
ಸಿಂಹಪಾಲು ನೀರುನಗರಕ್ಕೆ ಬೇಕಾಗುವ ನೀರಿನ ಸಿಂಹಪಾಲು ಸರಬರಾಜಾಗುವುದು ರಾಜನಹಳ್ಳಿ ಕೇಂದ್ರದಿಂದ. ರಾಜನಹಳ್ಳಿ ಕೇಂದ್ರದಿಂದ ಪ್ರತಿನಿತ್ಯ 40-50 ಎಂಎಲ್‌ಡಿ ನೀರು ಪೂರೈಸಲಾಗುತ್ತದೆ. ನಗರಕ್ಕೆ ಪೂರೈಸುವ ನೀರಿನ ಶೇ.75ರಷ್ಟು ಪ್ರಮಾಣ ಇಲ್ಲಿಂದಲೇ ಸರಬರಾಜು ಆಗುತ್ತದೆ. ಕಳೆದ ವರ್ಷದಿಂದ ಕುಂದುವಾಡ ಕೆರೆಗೂ ಸಹ ನೇರ ನದಿಯಿಂದ ನೀರು ಹರಿಸಲಾಗುತ್ತಿದೆ. ಮುಂದೆ ದೂರದರ್ಶನ ಕರೆ, ಆವರಗೆರೆ ಕೆರೆಗೂ ಸಹ ಇಲ್ಲಿಂದಲೇ ನೀರು ಹರಿಸುವ ಪ್ರಸ್ತಾವನೆ ಪಾಲಿಕೆ ಮುಂದಿದೆ.