Advertisement

ಪತ್ರಕ್ಕೆ ಪ್ರತ್ಯುತ್ತರ ನೀಡಿದ್ದೇನೆ ಅಷ್ಟೆ : ಪರ್ರಿಕರ್‌

06:50 AM Dec 29, 2017 | Team Udayavani |

ಪಣಜಿ: “ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಿಜೆಪಿ ನಾಯಕ ಯಡಿಯೂರಪ್ಪ ಅವರು ನನಗೆ ಪತ್ರ ಬರೆದ ನಂತರವೇ ನಾನು ಅದಕ್ಕೆ ಪ್ರತ್ಯುತ್ತರಿಸಿ ಚರ್ಚೆಗೆ ಸಿದಟಛಿವಿರುವುದಾಗಿ ಸ್ಪಷ್ಟಪಡಿಸಿದ್ದೆ. ಇದರಲ್ಲಿ ಯಾವುದೇ ತಪ್ಪು ಇಲ್ಲ. ಕಾಯ್ದೆ ದೃಷ್ಟಿಯಿಂದಲೂ ಈ ಪತ್ರ ಯೋಗ್ಯವಾಗಿಯೇ ಇದೆ. ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನಾನು ಗೋವಾದ ಹಿತ ಕಾಪಾಡಿಕೊಂಡು ಬಂದಿದ್ದೇನೆ. ಮುಂದೆಯೂ ಕಾಪಾಡುತ್ತೇನೆ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಗುರುವಾರ ಮಂತ್ರಿಮಂಡಳ ಬೈಠಕ್‌ ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, ಮಹದಾಯಿ ನದಿ ನೀರನ್ನು ನಾನು ಕರ್ನಾಟಕಕ್ಕೆ ಕೊಟ್ಟಿಲ್ಲ. ಕೇವಲ ಚರ್ಚೆ ನಡೆಸಲು ಸಿದಟಛಿವಿರುವುದಾಗಿ ಸಮ್ಮತಿ ಸೂಚಿಸಿದ್ದೇನೆ ಅಷ್ಟೆ. ನಾನು ಯಾರ ಒತ್ತಡದಿಂದಲೂ ಪತ್ರ ಬರೆದಿಲ್ಲ. ಯಡಿಯೂರಪ್ಪ ಕೂಡಾ ಯಾರ ಒತ್ತಡದಿಂದಲೂ ನನಗೆ ಪತ್ರ ಬರೆದಿಲ್ಲ. ನಾನು ಪತ್ರ ಬರೆಯುವಾಗಲೂ ಮಹದಾಯಿ ವಿಷಯದಲ್ಲಿ ಗೋವಾದ ಹಿತವನ್ನು ಅರಿತುಕೊಂಡೇ ಪತ್ರ ಬರೆದಿದ್ದೇನೆ. ನ್ಯಾಯಾ ಧಿಕರಣದಲ್ಲಿಯೂ ಮಹದಾಯಿ ಹೋರಾಟ ಮುಂದುವರೆಯಲಿದೆ ಎಂದರು.

ನಾನು ಕರ್ನಾಟಕಕ್ಕೆ ಬರೆದ ಪತ್ರದಿಂದಾಗಿ ನ್ಯಾಯಾಧಿಕರಣದಲ್ಲಿ ಗೋವಾಕ್ಕೆ ತೊಂದರೆಯುಂಟಾಗಲಿದೆ ಎಂಬುದು ಒಂದು ಅಪಪ್ರಚಾರ. ಕಾಯ್ದೆಯ ದೃಷ್ಟಿಯಿಂದ ನಾನು ಬರೆದ ಪತ್ರ ಅತ್ಯಂತ ಯೋಗ್ಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next