Advertisement

ಅಂದು ಅಧಿಕಾರಿ, ಇಂದು ರಾಜಕಾರಣಿ

10:31 PM Apr 04, 2019 | Team Udayavani |

ಸಿನಿಮಾ, ಕ್ರೀಡಾ ಕ್ಷೇತ್ರದವರು ರಾಜಕೀಯ ಪ್ರವೇಶ ಮಾಡುವಂತೆ ಐಎಎಸ್‌, ಐಪಿಎಸ್‌ ಅಧಿಕಾರಿಗಳೂ ಪ್ರವೇಶ ಮಾಡಿದ್ದಾರೆಕೆಲವರು ಯಶಸ್ಸು ಕಂಡಿದ್ದರೆ, ಕೆಲವರು ಸೋತು, ತಮಗೆ ಈ ಉಸಾಬರಿಯೇ ಬೇಡವೆಂದು ದೂರ ಸರಿದಿದ್ದಾರೆ. ಈ ಬಾರಿಯೂ ಹಲವು ಅಧಿಕಾರಿಗಳು ವಿವಿಧ ಪಕ್ಷಗಳನ್ನು ಸೇರಿದ್ದಾರೆ.

Advertisement

ಭಾರತಿ ಘೋಶ್‌
ಐಪಿಎಸ್‌ ಅಧಿಕಾರಿಯಾಗಿದ್ದವರು ಬಿಜೆಪಿಗೆ ಸೇರ್ಪಡೆ.
ಪ.ಬಂಗಾಳದ ಘಟಾಲ್‌ ಕ್ಷೇತ್ರದಿಂದ ಕಣಕ್ಕೆ.
ಹಾರ್ವರ್ಡ್‌ ವಿವಿಯಲ್ಲಿ ಶಿಕ್ಷಣ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಣೆ.

ಅಪರಾಜಿತಾ ಸಾರಂಗಿ
1994ನೇ ಸಾಲಿನ ಐಎಎಸ್‌ ಅಧಿಕಾರಿಯಾಗಿದ್ದವರು ಸ್ವಯಂ ನಿವೃತ್ತಿ ಪಡೆದು 2018ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಸೇರ್ಪಡೆ.
ಭುವನೇಶ್ವರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ. ಅವರ ವಿರುದ್ಧ ಬಿಜೆಡಿಯಿಂದ ಕಣಕ್ಕೆ ಇಳಿದಿರುವವರು ನಿವೃತ್ತ ಐಪಿಎಸ್‌ ಅಧಿಕಾರಿ ಅರೂಪ್‌ ಪಟ್ನಾಯಕ್‌.

ಮದನ್‌ ಗೋಪಾಲ್‌ ಮೇಘವಾಲ್
2018ರಲ್ಲಿ ಐಪಿಎಸ್‌ ಹುದ್ದೆಯಿಂದ ನಿವೃತ್ತಿ.ಕಾಂಗ್ರೆಸ್‌ ಸೇರ್ಪಡೆ.
ಬಿಕಾನೇರ್‌ ಕ್ಷೇತ್ರದಿಂದ ಕೇಂದ್ರ ಸಚಿವ ಅರ್ಜುನ್‌ ಮೇಘವಾಲ್ ವಿರುದ್ಧ ಕಣಕ್ಕೆ
ಮಾಜಿ ಐಎಎಸ್‌ ಅಧಿಕಾರಿ ಅರ್ಜುನ್‌, ಮದನ್‌ ಸೋದರ ಸಂಬಂಧಿಗಳೇ.

ಓ.ಪಿ.ಚೌಧರಿ
ಛತ್ತೀಸ್‌ಗಢದ ರಾಯ್‌ಪುರ ಜಿಲ್ಲಾಧಿಕಾರಿಯಾಗಿದ್ದರು.
2005ನೇ ಸಾಲಿನ ಐಎಎಸ್‌ ಅಧಿಕಾರಿಯಾಗಿದ್ದರು. 2018ರಲ್ಲಿ ಬಿಜೆಪಿ ಸೇರ್ಪಡೆ
ವಿಧಾನಸಭೆಯಲ್ಲಿ ಸ್ಪರ್ಧೆ ಮಾಡಿದ್ದರೂ, ಸೋಲಿನ ಅನುಭವ.

Advertisement

ಸದ್ಯ ಸಚಿವರಾಗಿರುವವರು  
ಕೆ.ಜೆ. ಅಲ್ಫೋನ್ಸ್‌, ನಿವೃತ್ತ ಐಎಎಸ್‌ ಅಧಿಕಾರಿ
ಸದ್ಯ ಪ್ರವಾಸೋದ್ಯಮ ಸಚಿವ
ಆರ್‌.ಕೆ. ಸಿಂಗ್‌, ಗೃಹ ಖಾತೆ ಮಾಜಿ ಕಾರ್ಯದರ್ಶಿ
ಸದ್ಯ ಇಂಧನ ಸಚಿವ
ಹದೀìಪ್‌ ಸಿಂಗ್‌ ಪುರಿ, ನಿವೃತ್ತ ಐಎಫ್ಎಸ್‌ ಅಧಿಕಾರಿ
ಸದ್ಯ ನಗರಾಭಿವೃದ್ಧಿ ಸಚಿವ
ಸತ್ಯಪಾಲ್‌ ಸಿಂಗ್‌, ನಿವೃತ್ತ ಐಪಿಎಸ್‌ ಅಧಿಕಾರಿ
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ
ಅರ್ಜುನ್‌ ರಾಂ ಮೇಘವಾಲ್, ನಿವೃತ್ತ ಐಎಎಸ್‌ ಅಧಿಕಾರಿ
ಸದ್ಯ ಜಲಸಂಪನ್ಮೂಲ ಸಚಿವ
ಹಳೆಯ ಮುಖಗಳು
ಮೀರಾ ಕುಮಾರ್‌
ಅಜಿತ್‌ ಜೋಗಿ
ಯಶ್ವಂತ್‌ ಸಿನ್ಹಾ
ಪಿ.ಎಲ್‌.ಪೂನಿಯಾ
ಪವನ್‌ ವರ್ಮಾ

Advertisement

Udayavani is now on Telegram. Click here to join our channel and stay updated with the latest news.

Next