Advertisement
ಜಗತ್ತಿನ “ಗ್ಲೋಬಲ್ ಸಿಟಿ’ಗಳಲ್ಲಿ ಇದು ಅಗ್ರಗಣ್ಯ ನಗರ. ಅಮೇರಿಕ ದೇಶದ ನ್ಯೂಯಾರ್ಕ್ ರಾಜ್ಯದ ಪ್ರಮುಖ ನಗರವಾದ ಇದರಲ್ಲಿ ಬ್ರೂಕ್ ಲಿನ್, ಮ್ಯಾನ್‌ಹಟನ್, ಕ್ವೀನ್ಸ್, ಬ್ರಾಂಕ್ಸ್ ಮತ್ತು ಸ್ಟೇಟನ್ ಐಲ್ಯಾಂಡ್ ಎಂಬ ಐದು ಉಪನಗರಗಳಿವೆ. ಅಮೆರಿಕದ ಅತ್ಯಂತ ಜನನಿಬಿಡ ನಗರ ಈ ನ್ಯೂಯಾರ್ಕ್. ಜಗತ್ತಿನ ಸಾಂಸ್ಕೃತಿಕ ಮತ್ತು ಆರ್ಥಿಕ ರಾಜಧಾನಿಯಾದ ಈ ನಗರ ವಿಶ್ವ ವ್ಯಾಪಾರ, ಹಣಕಾಸು, ಕಲೆ, ಶಿಕ್ಷಣ ಹಾಗೂ ಮನರಂಜನೆ ಕ್ಷೇತ್ರಗಳಲ್ಲಿ ಜಗತ್ತಿಗೇ ಕಳಸಪ್ರಾಯವಾಗಿದೆ.
Related Articles
ಸ್ಟ್ಯಾಚೂÂ ಆಫ್ ಲಿಬರ್ಟಿ ಪ್ರತಿಮೆಯು ಅಮೆರಿಕದ ಅಪರೂಪದ ಸ್ಮಾರಕ. ಇದನ್ನು ವಿಶ್ವದ ಜ್ಞಾನೋದಯದ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ನ್ಯೂಯಾರ್ಕ್ ನ ಪ್ರಮುಖ ಆಕರ್ಷಣೆ ಸ್ಟಾಚ್ಯು ಆಫ್ ಲಿಬರ್ಟಿ ಅಥವಾ ಸ್ವಾತಂತ್ರ್ಯ ದೇವಿಯ ಪ್ರತಿಮೆ. ಇವಳನ್ನು ನೋಡಲು ಫೆರಿ (ಹಡಗು)ಯಲ್ಲಿ ಪಯಣ ಬೆಳೆಸಬೇಕು. ಸುತ್ತಲೂ ನೀರು ನಡುಗಡ್ಡೆಯಲ್ಲಿರುವ ಅವಳನ್ನು ನೋಡಲು ಪ್ರತಿದಿನವೂ ಸಾವಿರಾರು ಜನ ಜಮಾಯಿಸುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, 1886ರ ಅಕ್ಟೋಬರ್ 28ರಂದು ಈ ಪ್ರತಿಮೆ ಅನಾವರಣಗೊಂಡಿತು. 151 ಅಡಿಗಳಷ್ಟು ಎತ್ತರ ಇರುವ ಈ ಪ್ರತಿಮೆ ತಳಪಾಯ ಮತ್ತು ಪೀಠಗಳು ಸೇರಿ ಒಟ್ಟು ಎತ್ತರ 305 ಅಡಿಗಳಷ್ಟು ಎತ್ತರವಿದೆ. ಫ್ರಾನ್ಸ್ ದೇಶದ ಜನರು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸ್ನೇಹಪೂರ್ವಕವಾಗಿ ಈ ಪ್ರತಿಮೆಯನ್ನು ನೀಡಿದ್ದರು. ಅಮೆರಿಕನ್ ಕ್ರಾಂತಿ ಸಂದರ್ಭದಲ್ಲಿ ಇವೆರಡೂ ದೇಶಗಳ ನಡುವೆ ಸ್ನೇಹವೇರ್ಪಟ್ಟಿತ್ತು. “ಸ್ಟೊಲಾ’ ಎಂಬ ಹೊಳಪಿನ ಕಿರೀಟ ಮತ್ತು ಪಾದರಕ್ಷೆ ಧರಿಸಿ, ಮುರಿದುಹೋದ ಸರಪಳಿಯನ್ನು ಮೆಟ್ಟಿ, ಬಲಗೈಯಲ್ಲಿ ಪಂಜು ಹಾಗೂ ಸ್ವಾತಂತ್ರ್ಯ 4 JULY 1776 ಎಂದು ಕೆತ್ತಲಾದ ಫಲಕವನ್ನು ಎಡಗೈಯಲ್ಲಿ ಹಿಡಿದು ನಿಂತ ಮಹಿಳೆಯೊಬ್ಬಳನ್ನು ಪ್ರತಿನಿಧಿಸುವ ಕೆತ್ತನೆ ಕಲಾಕೃತಿ ಇದಾಗಿದೆ. ಫ್ರೆಡೆರಿಕ್ ಆಗಸ್ಟ್ ಬಾತೊìಲ್ಡಿ ಈ ಪ್ರತಿಮೆಯ ಶಿಲ್ಪಿ. ಮೌರಿಸ್ ಕೋಚಿÉನ್ ಎಂಬಾತ ಪ್ರತಿಮೆಯ ಆಂತರಿಕ ವಿನ್ಯಾಸಕಾರ.
Advertisement
9/11ರ ಭಯೋತ್ಪಾದಕ ದಾಳಿಯ ನಂತರ ಅದರ ಮೇಲೆ ಹತ್ತುವುದನ್ನು ನಿರ್ಬಂಧಿಸಲಾಗಿತ್ತು. ಉಗ್ರರ ದಾಳಿಯ ಬಿಸಿ ಕಡಿಮೆಯಾದ ನಂತರ ಪ್ರತಿಮೆ ಹತ್ತುವುದಕ್ಕೆ ಅವಕಾಶ ನೀಡಲಾಗಿತ್ತು. ಈಗ ಹೊಸ ಏಣಿ ಮತ್ತು ಎಲಿವೇಟರ್‌ಗಳನ್ನು ಕೂಡ ಅಳವಡಿಸಲಾಗಿದೆ. ಅಲ್ಲಿಂದ ನಮ್ಮ ಪ್ರಯಾಣ ಟ್ರೈಮ್ಸ್ ಸ್ಕ್ವೇರ್ ಕಡೆಗೆ ಸಾಗಿತು. – ಜಮುನಾರಾಣಿ ಎಚ್. ಎಸ್.