Advertisement
ಒಬ್ಬರು ವಿಚ್ಛೇದಿತರು ನನ್ನ ಬಳಿ ಬಂದಿದ್ದರು. ಅವರಿಗೆ 33 ವರ್ಷ. ಆತ ಬಿಡುವಿಲ್ಲದ ದುಡಿಮೆಯಲ್ಲಿ ಮುಳುಗಿ¨ªಾಗ ಹೆಂಡತಿ ಪರಪುರುಷನ ತೆಕ್ಕೆಗೆ ಬಿದ್ದಿದ್ದಳು. ಇವರು ಹೆಚ್ಚಿಗೆ ಗಲಾಟೆ ಆಗದ ಹಾಗೆ ಹೆಂಡತಿಯನ್ನು ಆಕೆ ಇಷ್ಟಪಟ್ಟವನೊಂದಿಗೆ ಕಳುಹಿಸಿಕೊಟ್ಟರು. ಆಕೆಗೆ ತನ್ನ ಸ್ವಂತ ಮಗು ಬೇಕಿರಲಿಲ್ಲ. ಹೀಗಾಗಿ ಮಗು, ತಂದೆಯ ಬಳಿಯೇ ಉಳಿಯಿತು.
Related Articles
Advertisement
ಅವರ ಜೊತೆ ಸಮಾಲೋಚನೆ ನಡೆಸುವಾಗ ಅವರ ಮನಃಸ್ಥಿತಿ ನನಗೆ ಅರ್ಥವಾಯಿತು. ತಮ್ಮ ಗೆಳತಿಯ ಜೊತೆ ಹತ್ತಿರವಾದ ಸಂದರ್ಭವನ್ನು ಹೇಳುವಾಗ ಅವರು ಕಾಂಡೋಮ್ ಬಳಸಿದ್ದನ್ನು ಹೇಳಿಕೊಂಡಿದ್ದರು. ಹೀಗಾಗಿ ನಾನು, ಅವರ ಗೆಳತಿಯ ಮಗುವಿಗೆ ಡಿ.ಎನ್.ಎ. ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡಿದೆ. ನನ್ನ ಅನುಮಾನ ನಿಜವಾಗಿತ್ತು! ಮಗು ಅವರದ್ದಾಗಿರಲಿಲ್ಲ! ಆ ವ್ಯಕ್ತಿ ಕುಸಿದು ಹೋಗಿದ್ದರು.
ಅವರ ಅಮಾಯಕತೆಯನ್ನು ಅವರ ಗೆಳತಿ ದುರುಪಯೋಗ ಪಡಿಸಿಕೊಂಡಿದ್ದರು. ಆರ್ಥಿಕವಾಗಿ ಎಷ್ಟೇ ಅನುಕೂಲತೆಗಳಿದ್ದರೂ ಈ ರೀತಿಯ ಘಟನೆಗಳು ಎಂಥವರನ್ನೂ ಜರ್ಝರಿತರನ್ನಾಗಿಸುತ್ತದೆ. ತಾನು ಮಾನಸಿಕವಾಗಿ ದುರ್ಬಲನಿರಬಹುದು ಎನ್ನುವ ಹುಳು ಅವರ ತಲೆ ಹೊಕ್ಕಿತ್ತು. ಇಂಥವರಿಗೆ ಆ ಸಮಯದಲ್ಲಿ ನೈತಿಕ ಸ್ಥೈರ್ಯ, ಸಾಮಾಜಿಕ ಬೆಂಬಲ ನೀಡಬೇಕು. ಆ ಕೆಲಸವನ್ನು ನಾನು ಮಾಡಿದೆ.
ಇವೆಲ್ಲದರ ಮಧ್ಯೆ ತನ್ನ ಹೆಣ್ಣು ಮಗುವಿಗೆ ಎಲ್ಲಿ ತೊಂದರೆಯಾಗುತ್ತದೋ ಎಂಬ ಆತಂಕ ಆ ವ್ಯಕ್ತಿಯನ್ನು ಕಾಡತೊಡಗಿತು. ಸಮಾಲೋಚನೆಯ ಸಂದರ್ಭದಲ್ಲಿ ಅವರ ಆತಂಕವನ್ನು ಗುರುತಿಸಿ ಕೆಲ ಸಲಹೆಗಳನ್ನು ನೀಡಿದೆ. ಕೆಲ ವಾರಗಳ ನಂತರ ಮತ್ತೆ ಆ ವ್ಯಕ್ತಿ ಸಮಾಲೋಚನೆಗೆಂದು ಬಂದಾಗ ಅವರ ಮುಖದಲ್ಲಿ ನಗುವಿತ್ತು. ನನ್ನ ಸಲಹೆಗಳು ಕೆಲಸ ಮಾಡಿದ್ದವು. ನಮ್ಮ ಬದುಕು ಸಂತಸಮಯವಾಗೋಕೆ, ಇಲ್ಲಾ ಗೊಂದಲಗಳ ಗೂಡಾಗೋಕೆ ಕಾರಣ, ನಾವಲ್ಲದೆ ಮತ್ಯಾರೂ ಅಲ್ಲ! ಇದನ್ನು ಅರಿತು, ಮುನ್ನಡೆದರೆ, ಬದುಕು ಆನಂದ ಸಾಗರ.
* ಶುಭಾ ಮಧುಸೂದನ್