Advertisement

ದರ್ಶನ್‌ ಆಡಿದ ತಮಾಷೆಯ ಮಾತುಗಳಿಂದಲೇ ಶುರುವಾಯಿತೇ ತರುಣ್‌ – ಸೋನಲ್‌ ಪ್ರೇಮ್‌ ಕಹಾನಿ?

05:05 PM Jun 26, 2024 | Team Udayavani |

ಬೆಂಗಳೂರು: ನಿರ್ದೇಶಕ ತರುಣ್‌ ಸುಧೀರ್‌ (Tharun Sudhir) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಖ್ಯಾತ ನಟಿಯೊಬ್ಬರ ಜೊತೆ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಕ ಕಳೆದೆರೆಡು ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

Advertisement

ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ (Sonal Monteiro) ಅವರೊಂದಿಗೆ ವಿವಾಹವಾಗಲಿದ್ದಾರೆ ಎನ್ನುವ ಮಾತುಗಳು ಚಿತ್ರರಂಗದ ಗಲ್ಲಿಗಳಲ್ಲಿ ಹರಿದಾಡಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರೂ ಕೂಡ ಬಾಯಿಬಿಟ್ಟಿಲ್ಲ. ಶೀಘ್ರದಲ್ಲಿ ಇಬ್ಬರು ಮಾಧ್ಯಮಗಳ ಮುಂದೆ ವಿಚಾರವನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ನಡುವೆ ಸೋನಲ್‌ ಹಾಗೂ ತರುಣ್‌ ನಡುವೆ ಪ್ರೀತಿ ಆರಂಭವಾಗಿದ್ದು ಹೇಗೆ ಎನ್ನುವ ಚರ್ಚೆಗಳು ಕೂಡ ಹರಿದಾಡಿದೆ.

ಮಂಗಳೂರು ಮೂಲದ ಸೋನಲ್‌ ಕೋಸ್ಟಲ್‌ ವುಡ್‌ ಚಿತ್ರರಂಗದಲ್ಲ ಮಿಂಚಿ, ಆ ಬಳಿಕ ಸ್ಯಾಂಡಲ್‌ ವುಡ್‌ ನಲ್ಲಿ ʼರಾಬರ್ಟ್‌ʼ, ʼಗರಡಿʼ, ʼಪಂಚತಂತ್ರʼ ದಂತಹ ಹಲವು ಸಿನಿಮಾಗಳಲ್ಲಿ  ಕಾಣಿಸಿಕೊಂಡು, ಬೇಡಿಕೆಯ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ʼರಾಬರ್ಟ್‌ʼ ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಅವರಿಗೆ ಜೋಡಿಯಾಗಿ ಸೋನಲ್‌ ನಟಿಸಿದ್ದರು. ಈ ಸಿನಿಮಾವನ್ನು ತರುಣ್‌ ಸುಧೀರ್‌ ನಿರ್ದೇಶನ ಮಾಡಿದ್ದರು.

Advertisement

ಈ ಸಿನಿಮಾದ ಸೆಟ್‌ ನಲ್ಲೇ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ ಎನ್ನಲಾಗಿದೆ. ತರುಣ್‌ ಸುಧೀರ್‌ ಗೆ ಮದುವೆ ಮಾಡಿಸಬೇಕೆಂದು ಆಗಾಗ ನಟ ದರ್ಶನ್‌ (Darshan Thoogudeepa) ತಮಾಷೆ ಮಾಡುತ್ತಿದ್ದರಂತೆ. ಸೋನಲ್‌ ಹಾಗೂ ತರುಣ್‌ ಇಬ್ಬರನ್ನು ತಮಾಷೆಯಾಗಿ ಮದುವೆ ವಿಚಾರವಾಗಿ ಮಾತನಾಡುತ್ತಿದ್ದರಂತೆ. ದರ್ಶನ್‌ ಅವರ  ಮಾತಿನ ನಂತರ ಇಬ್ಬರು ಮತ್ತಷ್ಟು ಆತ್ಮೀಯರಾಗಿದ್ದು, ಈ ಸಂದರ್ಭದಲ್ಲೇ ಸೋನಲ್‌ ಹಾಗೂ ತರುಣ್‌ ಅವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಸದ್ಯ ಇವರಿಬ್ಬರ ಪ್ರೇಮ್‌ ಕಹಾನಿ ಸದ್ದು ಮಾಡುತ್ತಿದ್ದು, ಆ.10 ರಂದು ಇಬ್ಬರು ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಇಬ್ಬರಿಂದಲೂ ಯಾವ ಮಾಹಿತಿಯೂ ಬಂದಿಲ್ಲ.

ತರುಣ್‌ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನ ಜೀವನಾಧರಿತ ಚಿತ್ರ ತಯಾರಿಯಲ್ಲಿದ್ದರೆ, ಇತ್ತ ಸೋನಲ್‌ ‘ಬುದ್ಧಿವಂತ-2’ ಹಾಗೂ ‘ಮಾರ್ಗರೆಟ್ ಲವರ್ ಆಫ್ ರಾಮಾಚಾರಿ’ ಸೇರಿದಂತೆ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next