Advertisement

ರಾಜಕೀಯ ಜೀವನದಲ್ಲಿ ಶುದ್ಧ ಹಸ್ತ ಪಾಲನೆ: ಶಿವಶಂಕರಪ್ಪ

03:05 PM Jul 14, 2019 | Naveen |

ತರೀಕೆರೆ: ಯಾವುದೇ ಅಧಿಕಾರದ ಸ್ಥಾನಮಾನವಿಲ್ಲದಿದ್ದರು ಸಹ ಜನರು ನನ್ನನ್ನು ನಾಯಕನೆಂದು ಗುರುತಿಸಿದ್ದಾರೆ. ಅಧಿಕಾರದ ಹಲವಾರು ಅವಕಾಶಗಳು ಒದಗಿ ಬಂದಿದ್ದರು ಸಹ ಗದ್ದುಗೆ ಏರುವಲ್ಲಿ ವಿಫಲನಾಗಿದ್ದು ನಿಜ. ಆದರೆ, ರಾಜಕೀಯ ಜೀವನದಲ್ಲಿ ಶುದ್ಧ ಹಸ್ತನಾಗಿದ್ದೇನೆ ಎಂದು ಕರ್ನಾಟಕ ವಸತಿ ಮಹಾಮಂಡಲದ ನೂತನ ಉಪಾಧ್ಯಕ್ಷ ಟಿ.ವಿ.ಶಿವಶಂಕರಪ್ಪ ಹೇಳಿದರು.

Advertisement

ಪಟ್ಟಣದ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಅಭಿಮಾನಿಗಳು ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದಿ| ದೇವರಾಜ ಅರಸು ಅವರು ನನ್ನ ರಾಜಕೀಯ ಗುರುಗಳು. ಅವರಿಟ್ಟ ಹೆಜ್ಜೆಯನ್ನು ನಾನು ಅನುಸರಿಸುತ್ತ ಬಂದಿದ್ದೇನೆ. ನನ್ನ ನೇರ ನಡೆ-ನುಡಿಯ ಸ್ವಭಾವದಿಂದಾಗಿ ರಾಜಕೀಯದ ಮೆಟ್ಟಿಲೇರಲು ಸ್ವಲ್ಪ ಅಡೆತಡೆಯಾಗಿರಬಹುದು. ಆದರೂ ನನ್ನ ಸ್ವಭಾವ, ಸ್ವಾಭಿಮಾನವನ್ನು ಬಿಟ್ಟುಕೊಡದೆ ರಾಜಕಾರಣದಲ್ಲಿ ಸಕ್ರಿಯನಾಗಿದ್ದೇನೆ. 5 ದಶಕಗಳಿಂದ ರಾಜಕೀಯದಲ್ಲಿರೂ ನನ್ನಲ್ಲಿರುವ ಜಾತ್ಯತೀತ ಮನೋಭಾವ ಇಂದಿಗೂ ಜನರ ನಡುವೆ ಇರುವಂತೆ ಮಾಡಿದೆ. ಅಧಿಕಾರಕ್ಕಾಗಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಪಕ್ಷ ಟಿಕೆಟ್ ನೀಡದಿದ್ದರು ಸಹ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸಿದ್ದೇನೆ ಎಂದು ಹೇಳಿದರು.

ಅಧಿಕಾರ ಸಿಗಲಿಲ್ಲ ಎಂಬ ಕೊರಗು ನನ್ನಲ್ಲಿ ಇಲ್ಲ. ಉತ್ತಮ ಅಧಿಕಾರ ಸಿಗಬಹುದು ಎಂಬ ನಿರೀಕ್ಷೆ ಇದೆ. ಇತ್ತೀಚೆಗೆ ನಡೆದ ಮಹಾ ಮಂಡಲದ ಚುನಾವಣೆಯಲ್ಲಿ ಗೆಲುವು ಸಾಸಿದ್ದು, ಉತ್ತಮ ಕೆಲಸ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಎಂ.ನರೇಂದ್ರ ಮಾತನಾಡಿ, ಟಿ.ವಿ.ಶಿವಶಂಕರಪ್ಪ ಅವರು ತಾಲೂಕಿನ ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿದವರು. ರಾಜಕಾರಣದ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದವರು. ಜಿಲ್ಲೆ ಕಂಡ ಅಪರೂಪದ ರಾಜಕಾರಣಿಯಾಗಿದ್ದಾರೆ. ಅವರ ಬಳಿಗೆ ಬರುವವರು ಎಷ್ಟೆ ಆತ್ಮೀಯರಾಗಿದ್ದರೂ ಅವರೊಡನೆ ನೇರವಾಗಿಯೇ ಮಾತನಾಡುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

Advertisement

ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಬಿ.ಎಸ್‌.ಭಗವಾನ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುರುಗೇಶಪ್ಪ, ಮಿಲಿó ಶ್ರೀನಿವಾಸ್‌, ಪತ್ರಕರ್ತ ಅನಂತ್‌ ನಾಡಿಗ್‌ ಮಾತನಾಡಿದರು. ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ರಂಗಪ್ಪ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಚಂದ್ರಪ್ಪ, ಕಸಾಪ ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ, ಉಪ್ಪಾರ ಸಮಾಜದ ಅದ್ಯಕ್ಷ ಟಿ.ಬಿ.ಶಿವಣ್ಣ, ರಾಷ್ಟ್ರೀಯ ಕ್ರೀಡಾಪಟು ಟಿ.ಎ.ಪ್ರಹ್ಲಾದ್‌, ಆರ್‌.ಜಿ.ಎಂ.ಆರಾಧ್ಯ, ಟಿ.ಬಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಜಗ್ನಾನಾಥ್‌, ಲಕ್ಷಿ ್ಮೕಪತಿ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next