Advertisement

ಸಂವಿಧಾನ ಬದಲಾಯಿಸಲು ಬಿಡಲ್ಲ

05:19 PM Apr 08, 2019 | Naveen |

ತರೀಕೆರೆ: ಸಂವಿಧಾನವನ್ನು ಬದಲಾವಣೆ ಮಾಡುವ ಜೊತೆಗೆ ಅದನ್ನು ಬುಡಮೇಲು ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಮೋದಿಯಂತಹ ನೂರು ಜನರು ಬಂದರೂ ಕೂಡ
ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಅವರು ಪಟ್ಟಣದ ಬಯಲುರಂಗ ಮಂದಿರದಲ್ಲಿ ನಡೆದ ಚುನಾವಣಾ ಪ್ರಚಾರಸಭೆ ಉದ್ಘಾಟಿಸಿ ಮಾತನಾಡಿದರು.
ನಡೆಯುತ್ತಿರುವ ಲೋಕಸಭಾ ಚುನಾವಣೆ ಒಂದು ಮಹತ್ತರವಾದ ಚುನಾವಣೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದು, ದೇಶ ಅಭಿವೃದ್ಧಿ ಕಾಣಬಹುದು ಎಂಬ ಕಾರಣಕ್ಕೆ ಜನತೆ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದರು. 5 ವರ್ಷ ಆಡಳಿತ ನಡೆಸಿದ ಪ್ರಧಾನಿಯವರು ಜನರ ಸಮಸ್ಯೆ ಪರಿಹರಿಸಲಿಲ್ಲ. ದೇಶಕ್ಕೆ ತಾಯಿ ಹೃದಯವಿರುವ ಪ್ರಧಾನಿ ಅಗತ್ಯವಿದೆ ಹೊರತು ಕಠಿಣ ಹೃದಯದ
ಪ್ರಧಾನಿ ಅಗತ್ಯವಿಲ್ಲ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸಿಲಿಲ್ಲ. ರಾಜಧಾನಿಯಲ್ಲಿ ಲಕ್ಷಾಂತರ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರೂ ಸೌಜನ್ಯಕ್ಕಾದರೂ ರೈತರನ್ನು ಮಾತನಾಡಿಸಲಿಲ್ಲ. ಸರಕಾರ ರೈತರು ಕಷ್ಟದಲ್ಲಿದ್ದಾರೆ ರೈತರ ನೆರವಿಗೆ ಕೇಂದ್ರ ಸರಕಾರ ಬರಬೇಕು ಎಂದು ಮನವಿ ಮಾಡಿದರೂ
ಸಹ ಸ್ಪಂದಿಸಲಿಲ್ಲ. ಚುನಾವಣೆ ಹತ್ತಿರ ಬಂದಾಗ ರೈತರ ಕಣ್ಣೋರೆಸುವ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನರೇಂದ್ರಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ, ಅಧಿಕಾರಕ್ಕೆ ಬರಲೂ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ ಮುಖ್ಯಮಂತ್ರಿಗಳು, ಯುಪಿಎ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿರುವ ಪಕ್ಷಗಳ ಒಕ್ಕೂಟವನ್ನು ಕಿಚಡಿಪಾರ್ಟಿ ಎಂದು ಗೇಲಿ ಮಾಡುತ್ತಾರೆ,
ಕೇಂದ್ರದಲ್ಲಿ 5 ವರ್ಷ ಆಡಳಿತ ನಡೆಸಿದ ಬಿಜೆಪಿ 13 ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ನಡೆಸುತ್ತಿದ್ದಾರೆ ಇದಕ್ಕೆ ಏನೆಂದು ಕರೆಯಬೇಕು ಎಂದರು.

ಸ್ವಾತಂತ್ರ್ಯದ ನಂತರ ದೇಶದಲ್ಲಿ ಆನೇಕ ಪ್ರಧಾನಿಗಳು ಆಡಳಿತ ಮಾಡಿದ್ದಾರೆ. ಅವರ ಆಡಳಿತದಲ್ಲಿ ದೇಶ ಅಭಿವೃದ್ಧಿ ಕಾಣಲಿಲ್ಲವೇ,
ಜನರಿಗೆ ರಕ್ಷಣೆ ನೀಡಲಿಲ್ಲವೇ, ಯಾವೊಬ್ಬ ಪ್ರಧಾನಿ ನೆರೆರಾಷ್ಟ್ರ ಭೇಟಿ ನೀಡಿ ಸೀರೆ ಉಡುಗರೆ ನೀಡಲಿಲ್ಲ. ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿ ದೇಶ ಶಾಂತಿಯುತವಾಗಿತ್ತು. ಒಂದೇ ಒಂದು ಭಯೋತ್ಪಾದನೆ ಚಟುವಟಿಕೆ ನಡೆಯಲಿಲ್ಲ, ಪ್ರಧಾನಿಯವರ ನಡವಳಿಕೆಯಿಂದ ದೇಶಕ್ಕೆ ಗಂಡಾಂತರ ಬಂದಿದೆ ಎಂದರು.

Advertisement

ಬಿಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಗಳಾಗಿದ್ದಾಗ ರೈತರ ಸಾಲಮನ್ನ ಮಾಡುವಂತೆ ಕೋರಿದಾಗ ಸರಕಾರ ನೋಟು ಮುದ್ರಿಸುವ ಯಂತ್ರ ಇಟ್ಟುಕೊಂಡಿಲ್ಲ ಎಂದು ಉಡಾಫೆ ಮಾತನ್ನಾಡಿದ್ದಾರು. ನಾನು ರೈತ ಕುಟುಂಬದಿಂದ ಬಂದವನು
ಎಂದು ಹೇಳುತ್ತಾರೆ ಹೊರತು ರೈತರ ಕಷ್ಟಗಳಲ್ಲಿ ಭಾಗಿಯಾಗಲಿಲ್ಲ ಎಂದರು. ಬಿಜೆಪಿ ನಾಯಕರು ರಾಜ್ಯದಲ್ಲಿ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಶಾಸಕರಿಗೆ ಆಸೆ ಆಮಿಷಗಳನ್ನು ಒಡ್ಡಿ ಅವರನ್ನು ಸೆಳೆಯಲು 20ರಿಂದ30 ಕೋಟಿ ಹಣ ನೀಡಲು ಮುಂದಾಗಿದ್ದಾರೆ
ಎಂದು ಟೀಕಿಸಿದರು.

ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮ ಪಕ್ಷದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರನ್ನು ಗೆಲ್ಲಿಸಿ. ಲೋಕಸಭೆ ಕಳುಹಿಸಿದರೆ ಜಿಲ್ಲೆಯಲ್ಲಿ ಕಾಫಿ, ಅಡಿಕೆ ಬೆಳೆಗಾರ, ಒತ್ತುವರಿ ಸಮಸ್ಯೆ ಮತ್ತು ಹುಲಿ ಅಭಯಾರಣ್ಯ ಪ್ರದೇಶದ ಜನರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸಂಸದರ ಅಗತ್ಯವಿದೆ. ಇದಕ್ಕಾಗಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌ .ಧರ್ಮೇಗೌಡ, ವಿಧಾನ ಪರಿಷತ್‌ ಸದಸ್ಯ ಎಸ್‌. ಎಲ್‌.ಭೋಜೇಗೌಡ, ಮಾಜಿ ಶಾಸಕರಾದ ಎಸ್‌. ಎಂ.ನಾಗರಾಜ್‌, ಟಿ.ಎಚ್‌.ಶಿವಶಂಕರಪ್ಪ, ಸ್ವಪ್ನಹರೀಶ್‌, ಜಿ.ಎಚ್‌.ಶ್ರೀನಿವಾಸ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ|ಡಿ.
ಎಲ್‌.ವಿಜಯಕುಮಾರ್‌, ಟಿ.ವಿ.ಶಿವಶಂಕರಪ್ಪ, ಎಚ್‌. ವಿಶ್ವನಾಥ್‌, ಕೆ.ಆರ್‌.ದ್ರುವಕುಮಾರ್‌, ರವಿಕಿಶೋರ್‌, ಎಂ.ನರೇಂದ್ರ, ಕೆ.ಪಿ.ಕುಮಾರ್‌, ಟಿ.ಎಸ್‌. ಧರ್ಮರಾಜ್‌, ಉಮರ್‌ಫಾರೂಕ್‌, ಎ.ಸಿ.ಚಂದ್ರಪ್ಪ, ರಾಮಚಂದ್ರಪ್ಪ ಇನ್ನಿತರರಿದ್ದರು.

ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಸರಕಾರ 22 ಲಕ್ಷ ರೈತ ಕುಟುಂಬಗಳಿಗೆ 2500 ಕೋಟಿ ಸಾಲಮನ್ನಾ ಮಾಡಿದ್ದರು.
ಸಮ್ಮಿಶ್ರ ಸರಕಾರದ ಅವ ಧಿಯಲ್ಲಿ 44 ಲಕ್ಷ ರೈತ ಕುಟುಂಬಗಳಿಗೆ 44000 ಕೋಟಿ ಸಾಲಮನ್ನಾ ಮಾಡಿ ಹಣವನ್ನು ರೈತರಿಗೆ
ಸಂದಾಯ ಮಾಡಿದ್ದೇನೆ. ಪ್ರಸ್ತುತ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ 13000 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ.
ಎಚ್‌.ಡಿ.ಕುಮಾರಸ್ವಾಮಿ,
ಮುಖ್ಯಮಂತ್ರಿಗಳು

Advertisement

Udayavani is now on Telegram. Click here to join our channel and stay updated with the latest news.

Next