Advertisement

ಮತ್ತೂಬ್ಬ ಸ್ಟೋಕ್ಸ್‌ಗೆ ಪುಣೆ ಧನ್ಯವಾದ!

12:10 PM May 22, 2017 | Team Udayavani |

ಪುಣೆ: ಇಂಗ್ಲೆಂಡಿನ ಬೆನ್‌ ಸ್ಟೋಕ್ಸ್‌ ಈ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರನೆಂಬುದು ಈಗ ಇತಿಹಾಸ. ಪುಣೆ ತಂಡದ ಪಾಲಾದ ಸ್ಟೋಕ್ಸ್‌, ಪ್ಲೇ-ಆಫ್ ಸುತ್ತಿಗೂ ಮೊದಲೇ ತಂಡದಿಂದ ಬೇರ್ಪಟ್ಟರು. ಆದರೂ ಪುಣೆ ಫ್ರಾಂಚೈಸಿ ಈ ಸವ್ಯಸಾಚಿಯ ಕೊಡುಗೆಯನ್ನು ಸ್ಮರಿಸಲು ಮರೆಯಲಿಲ್ಲ. ತಮಾಷೆಯೆಂದರೆ, ಕ್ರಿಕೆಟಿಗ ಬೆನ್‌ ಸ್ಟೋಕ್ಸ್‌ಗೆ ಶುಭ ಹಾರೈಸಿ ಪುಣೆ ಫ್ರಾಂಚೈಸಿ ಮಾಡಿದ ಟ್ವೀಟ್‌ ಸಂದೇಶ ಬೇರೆ ಯಾವುದೋ ಸ್ಟೋಕ್ಸ್‌ಗೆ ಹೋಗಿ ಮುಟ್ಟಿದೆ!

Advertisement

“ಗ್ರೂಪ್‌ ಹಂತದಲ್ಲಿ ನೀವು ತೋರ್ಪಡಿಸಿದ ಸಾಧನೆಯಿಂದ ಪುಣೆಗೆ ಪ್ಲೇ-ಆಫ್ ಪ್ರವೇಶ ಸಾಧ್ಯವಾಯಿತು. ಇದಕ್ಕಾಗಿ ಧನ್ಯವಾದಗಳು…’ ಎಂದು ಪುಣೆ ಫ್ರಾಂಚೈಸಿ ಸಂದೇಶ ರವಾನಿಸಿತು. ಆದರೆ ಈ ಸಂದೇಶ  “ಸ್ಟೋಕ್ಸಿ 38′ ಎಂಬ ಖಾತೆಗೆ ಹೋಗಿದೆ! ಈ ಖಾತೆದಾರನ ಸಂತಸಕ್ಕೆ ಬಹುಶಃ ಪಾರವೇ ಇರಲಿಕ್ಕಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next