Advertisement
“ತನಿಖೆ’ ಕನ್ನಡ ಸಿನಿಮಾ ಸೆನ್ಸಾರ್ ಕೂಡಾ ಆಗಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕೋವಿಡ್ 19 ವೈರಸ್ ಲಾಕ್ ಡೌನ್ ಇಂದ ಬಿಡುಗಡೆಯನ್ನು ಜುಲೈ ಅಥವಾ ಆಗಸ್ಟ್ ತಿಂಗಳಿಗೆ ಎಂದು ನಿರ್ಮಾಪಕ ಕಲಿ ಗೌಡ ಅವರು ತಿಳಿಸಿದ್ದಾರೆ. ಕಲಿ ಸಿನಿಮಾಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. “ತನಿಖೆ’ ಪಕ್ಕ ಕಮರ್ಷಿಯಲ್ ಸಿನಿಮಾ. ನಾಲ್ಕು ಸಾಹಸ ಸನ್ನಿವೇಶ ಅಲ್ಟಿಮೇಟ್ ಶಿವು ನಿರ್ವಹಿಸಿದ್ದಾರೆ, ಕ್ರಿಸ್ಟೋಫರ್ ಲೀ ಸಂಗೀತ ನಿರ್ದೇಶನದಲ್ಲಿ ಸಂತೋಷ್ ವೆಂಕಿ “ಒಟ್ಟಾರೆ…. ಹಾಡನ್ನು, ಯಾರೋ ಇವಳು ಗೆಳೆಯ… ಚಿಂತನ್ ವಿಕಾಸ್, ಎಣ್ಣೆ ಹೊಡೆಯೋದ…ನವೀನ್ ಸಜ್ಜು ಹಾಗೂ ಯಾರೋ ನೀನು….ವಾಣಿ ಹರಿಕೃಷ್ಣ ಹಾಡಿದ್ದಾರೆ. “ತನಿಖೆ’ ಹಳ್ಳಿಯಲ್ಲಿ ನಡೆಯುವ ಆರು ಯುವ ಸ್ನೇಹಿತರ ಜೀವನ ಪಯಣ. ಆರರಲ್ಲಿ ಒಬ್ಬ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅವನ ಹುಡುಗಿ ಮಿಕ್ಕ ಐವರಲ್ಲಿ ಒಬ್ಬನನ್ನು ಪ್ರೀತಿ ಮಾಡುತ್ತಾ ಇರುತ್ತಾಳೆ. ಪ್ರೀತಿಯ ವಿಚಾರದಲ್ಲಿ ಸ್ನೇಹಿತರಲ್ಲಿ ಮನಸ್ತಾಪ ಹರಡುತ್ತದೆ. ಆಕಸ್ಮಿಕವಾಗಿ ಆರು ಸ್ನೇತರಲ್ಲಿ ಒಬ್ಬನ ಹತ್ಯೆ ಸಹ ಆಗುತ್ತದೆ. ಇದರಿಂದ ಉಳಿದ ಐವರು ಸ್ನೇಹಿತರು ಹಳ್ಳಿಯನ್ನು ಬಿಡುವಂತೆ ಆಗುತ್ತದೆ.
Advertisement
ಹಾಡಿನಲ್ಲಿ ತನಿಖೆ
11:06 AM May 11, 2020 | Suhan S |
Advertisement
Udayavani is now on Telegram. Click here to join our channel and stay updated with the latest news.