Advertisement

Payment Gateway; 16,180 ಕೋಟಿ ರೂ. ವಂಚನೆ ಕೇಸ್: ಇಬ್ಬರ ಬಂಧನ

05:29 PM Oct 13, 2023 | Team Udayavani |

ಥಾಣೆ: ಮಹಾರಾಷ್ಟ್ರ ಪೊಲೀಸರು ಪೇಮೆಂಟ್ ಗೇಟ್‌ವೇ ಸೇವಾ ಪೂರೈಕೆದಾರರ ವ್ಯವಸ್ಥೆಯನ್ನು ಉಲ್ಲಂಘಿಸಿ 16,180 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿದ ಆರ್ಥಿಕ ಅಪರಾಧದಲ್ಲಿ ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

Advertisement

ಪೊಲೀಸರು ಭಾಯಂದರ್‌ನ ಅನುಪ್ ದುಬೆ (26) ಮತ್ತು ಸಂಸ್ಥೆಯೊಂದರ ಪಾಲುದಾರ ಮುಂಬೈ ನಿವಾಸಿ ಸಂಜಯ್ ನಾಮದೇವ್ ಗಾಯಕ್‌ವಾಡ್ (42) ಅವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಈ ವಂಚನೆ ಬಹಳ ಸಮಯದಿಂದ ನಡೆಯುತ್ತಿತ್ತು, ಆದರೆ ಎಪ್ರಿಲ್ 2023 ರಲ್ಲಿ ಕಂಪನಿಯ ಪೇಮೆಂಟ್ ಗೇಟ್‌ವೇ ಸಿಸ್ಟಮ್ ಹ್ಯಾಕ್ ಆಗಿರುವ ಬಗ್ಗೆ ಶ್ರೀನಗರ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಅದು ಬೆಳಕಿಗೆ ಬಂದಿದೆ ಮತ್ತು 25 ಕೋಟಿ ರೂ. ಹೊರತೆಗೆಯಲಾಗಿದೆ.

ತನಿಖೆಯ ವೇಳೆ ಸೈಬರ್ ಸೆಲ್ ತಂಡಕ್ಕೆ 16,180 ಕೋಟಿ ರೂ.ಗೂ ಅಧಿಕ ಮೊತ್ತದ ಸಂಶಯಾಸ್ಪದ ವಹಿವಾಟು ನಡೆದಿರುವುದು ಗಮನಕ್ಕೆ ಬಂದಿದೆ.

ಆರೋಪಿಗಳು ಐದು ಪಾಲುದಾರಿಕೆ ಸಂಸ್ಥೆಗಳನ್ನು ಸ್ಥಾಪಿಸಿದ್ದು, 260 ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಪರಿಶೀಲನೆಯ ನಂತರ 16,180 ಕೋಟಿ ರೂ. ಗಳ ವಹಿವಾಟು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next