Advertisement

ಥಾಣೆ: 17 ಕೋವಿಡ್‌ ಆಸ್ಪತ್ರೆಗಳಿಂದ1.82 ಕೋಟಿ ರೂ. ಗೂ ಅಧಿಕ ಶುಲ್ಕ ವಸೂಲಿ

07:06 PM Aug 25, 2020 | Suhan S |

ಥಾಣೆ, ಆ. 24: ಥಾಣೆ ನಗರದ 17 ಖಾಸಗಿ ಆಸ್ಪತ್ರೆಗಳು ಕೋವಿಡ್‌ ಸೋಂಕಿತರಿಂದ ಬರೋಬ್ಬರಿ 1.82 ಕೋಟಿ ರೂ.ಗಳ ಅಧಿಕ ಶುಲ್ಕವನ್ನು ವಸೂಲಿ ಮಾಡಿದ್ದು,ಈ ಪೈಕಿ 1.40 ಕೋಟಿ ರೂ.ಗಳನ್ನು ಅವು ಇನ್ನಷ್ಟೇ ಮರುಪಾವತಿಸಬೇಕಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

Advertisement

ಅಧಿಕ ಶುಲ್ಕ ಹೇರಿಕೆಯ ಬಗ್ಗೆ ಸೋಂಕಿತರಿಂದ ಹಲವಾರು ದೂರುಗಳನ್ನು ಸ್ವೀಕರಿಸಿದ ಬಳಿಕ ಥಾಣೆ ಮಹಾನಗರ ಪಾಲಿಕೆ ಆಯುಕ್ತ ಡಾ| ವಿಪಿನ್‌ ಶರ್ಮಾ ಅವರು ನಗರದ 17 ಆಸ್ಪತ್ರೆಗಳ ಬಿಲ್ಲಿಂಗ್‌ ಪರಿಶೀಲಿಸಲು ಲೆಕ್ಕಪರಿಶೋಧನಾ ತಂಡಗಳನ್ನು ರಚಿಸಿದರು. ಈ ಲೆಕ್ಕಪರಿಶೋಧಕ ತಂಡಗಳು ಜು. 10ರಿಂದ ಆ. 2ರ ವರೆಗೆ 4,106 ಬಿಲ್‌ಗ‌ಳನ್ನು ಪರಿಶೀಲಿಸಿದ್ದು, 1,362 ಬಿಲ್‌ಗ‌ಳಲ್ಲಿ ಒಟ್ಟು 1.82 ಕೋಟಿ ರೂ.ಗಳ ಹೆಚ್ಚುವರಿ ಮೊತ್ತವನ್ನು ಪತ್ತೆ ಮಾಡಿವೆ ಎಂದು ಮನಪಾ ಪ್ರಕಟಣೆ ತಿಳಿಸಿದೆ.

ಥಾಣೆ ಮಹಾನಗರ ಪಾಲಿಕೆಯು (ಟಿಎಂಸಿ) ಈ ಆಸ್ಪತ್ರೆಗಳಿಗೆ ಶೋಕಾಸ್‌ ನೋಟಿಸ್‌ಗಳನ್ನು ನೀಡಿದ್ದು, ಅನಂತರ ಅವು ರೋಗಿಗಳಿಗೆ 26.68 ಲಕ್ಷ ರೂ.ಗಳನ್ನು ಮರುಪಾವತಿಸಿವೆ. 15.27 ಲಕ್ಷ ರೂ.ಗಳ ಹೆಚ್ಚುವರಿ ಮೊತ್ತಕ್ಕೆ ಆಸ್ಪತ್ರೆಗಳು ಸಲ್ಲಿಸಿರುವ ದಾಖಲೆ ಮತ್ತು ವಿವರಗಳನ್ನು ಮನಪಾ ಒಪ್ಪಿಕೊಂಡಿದೆ, ಆದರೆ ಈ ವೈದ್ಯಕೀಯ ಸೌಲಭ್ಯಗಳು ಇನ್ನೂ 1.40 ಕೋಟಿ ರೂ. ಮೊತ್ತವನ್ನು ಮರುಪಾವತಿ ಮಾಡಬೇಕಿದೆ ಎಂದು ಟಿಎಂಸಿ ಹೇಳಿದೆ.

ಸೋಂಕಿತರಿಂದ ಹೆಚ್ಚಿನ ಶುಲ್ಕ ವಿಧಿಸಿದ ಆರೋಪದ ಮೇಲೆ ಮಹಾನಗರ ಪಾಲಿಕೆಯು ಕಳೆದ ತಿಂಗಳು ಇಲ್ಲಿನ ಘೋಡ್‌ಬಂದರ್‌ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಪರವಾನಿಗೆಯನ್ನು ಅಮಾನತುಗೊಳಿಸಿ, ಕೋವಿಡ್‌ ಸೌಲಭ್ಯವಾಗಿ ಅದರ ಮಾನ್ಯತೆಯನ್ನು ರದ್ದುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next