Advertisement
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಥಾಣೆ ಬಂಟ್ಸ್ ಗೌರವ ಪ್ರಧಾನ ಕಾರ್ಯದರ್ಶಿ ಸುನೀಲ್ ಜೆ. ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯ ಮಾಜಿ ಅಧ್ಯಕ್ಷ ದಿ| ಪ್ರೊ| ಸೀತಾ ರಾಮ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಥಾಣೆ ಬಂಟ್ಸ್ ಅಸೋಸಿಯೇಶನ್ ಸಾಹಿತ್ಯ ಬಳಗ ಹುಟ್ಟಿಕೊಂಡಿದೆ. ಅವರ ಯೋಗದಾನವನ್ನು ಮರೆ ಯುವಂತಿಲ್ಲ. ಥಾಣೆ ಬಂಟ್ಸ್ ಅಸೋಸಿಯೇಶನ್‌ನಲ್ಲಿ ಬರೆಹಗಾರರಿಗೆ, ಸಾಹಿತ್ಯಾಭಿಮಾನಿಗಳಿಗೆ, ಕವಿಗಳಿಗೆ ಖಂಡಿತವಾಗಿಯೂ ಕೊರತೆಯಿಲ್ಲ. ಡಾ| ಕರುಣಾಕರ ಶೆಟ್ಟಿ ಪಣಿಯೂರು ಸಹಿತ ಬಹಳಷ್ಟು ಸಾಹಿತಿಗಳು ನಮ್ಮ ಸಂಸ್ಥೆಯಲ್ಲಿದ್ದಾರೆ ಎನ್ನಲು ಹೆಮ್ಮೆಯಾಗುತ್ತದೆ. ಸಾಹಿತಿಗಳ, ಕವಿಗಳ ಪಾಲಿಗೆ ಓದುಗರೇ ಜೀವಾಳ. ಹೆಚ್ಚು ಓದುಗರು ಸೃಷ್ಟಿಯಾದಾಗ ಬರೆಯುವವರಿಗೆ ಉತ್ಸಾಹ ಮೂಡುತ್ತದೆ. ಓದುಗರಿಂದ ಸಾಹಿತ್ಯ ಲೋಕ ಸಮೃದ್ಧವಾಗಿ ಬೆಳೆಯಲಿ. ಡಾ| ಕರುಣಾಕರ ಶೆಟ್ಟಿ ಅವರು ಇಂದು 9 ಕೃತಿಗಳನ್ನು ಬಿಡುಗಡೆಗೊಳಿಸಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ತಮ್ಮ ಪುತ್ರಿ ಯನ್ನೂ ಸಾಹಿತ್ಯ ವಲಯಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೀರ್ವರಿಂದ ಇನ್ನಷ್ಟು ಕೃತಿಗಳು ಪ್ರಕಟಗೊಂಡು ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳ್ಳಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಥಾಣೆ ಬಂಟ್ಸ್ ಸ್ಥಾಪಕಾಧ್ಯಕ್ಷ ಡಿ.ಜಿ. ಬೋಳಾರ್ ಅವರು, ಪುಸ್ತಕಗಳು ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುತ್ತಿದ್ದು, ಸಾಹಿತಿಗಳು ದೇಶದ ದೊಡ್ಡ ಸಂಪ ತ್ತಾಗಿದ್ದಾರೆ. ಉತ್ತಮ ನಾಗರಿಕರನ್ನಾಗಿ ಸೃಷ್ಟಿಸುವಲ್ಲಿ ಬರೆಹಗಾರರ ಪಾತ್ರ ಮಹತ್ತರವಾಗಿದೆ. ಯುವ ಜನಾಂಗಕ್ಕೆ ಡಾ| ಕರುಣಾಕರ ಶೆಟ್ಟಿ ಅವರು ಮಾದರಿಯಾಗಿದ್ದಾರೆ ಎಂದರು.
ಇನ್ನೋರ್ವ ಅತಿಥಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು ಮಾತನಾಡಿ, ಡಾ| ಕರುಣಾಕರ ಶೆಟ್ಟಿ ಅವರು ಸರಳ, ಸಜ್ಜನ ವ್ಯಕ್ತಿತ್ವದ ಕವಿ. ಅವರ ಏನೇ ಅನಿಸಿಕೆ, ಚಿಂತನೆಗಳಿದ್ದರೂ ಅದನ್ನು ತನ್ನ ಪೆನ್ನಿನ ಮೂಲಕ ಕೃತಿರೂಪಕ್ಕಿಳಿಸಿ ಶ್ರೇಷ್ಠರೆನಿಸಿಕೊಂಡವರು. ಅವರ ಬರವಣಿಗೆಯಿಂದ ಹೊರಹೊಮ್ಮುವ ಎಲ್ಲ ಲೇಖನಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ನುಡಿದರು.
Related Articles
Advertisement
ಥಾಣೆ ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ಶುಭಹಾರೈಸಿದರು.
ಕೃತಿ ಪರಿಚಯಿಸಿದ ಕವಿ, ರಂಗಕರ್ಮಿ ಸಾ. ದಯಾ, ಪುಣೆಯ ಕವಿ ಮಹೇಶ್ ಹೆಗ್ಡೆ, ಕವಿ ಅಶೋಕ್ ವಳದೂರು, ಸಾಹಿತಿ ಡಾ| ಜಿ. ಪಿ. ಕುಸುಮಾ, ಥಾಣೆ ಬಂಟ್ಸ್ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಎಸ್. ಮಾಡಾ ಉಪಸ್ಥಿತರಿದ್ದರು. ಲೇಖಕಿ ಶ್ರುತಿ ಎ. ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು, ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಾಜಿ ಅಧ್ಯಕ್ಷರುಗಳು, ಸ್ಥಾಪಕ ಸದಸ್ಯರು, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ದೀಪ ಪ್ರಜ್ವಲಿಸಿದರು.ಥಾಣೆ ಬಂಟ್ಸ್‌ನ ಕೋಶಾಧಿಕಾರಿ ಭಾಸ್ಕರ ಎನ್. ಶೆಟ್ಟಿ ಸ್ವಾಗತಿಸಿದರು. ಅತಿಥಿಗಳನ್ನು ಡಾ| ಕರುಣಾಕರ ಶೆಟ್ಟಿ ಅವರು ಗೌರವಿಸಿದರು. ಕೃತಿಗಳನ್ನು ಪರಿಚಯಿಸಿದವರನ್ನು ಅಧ್ಯಕ್ಷ ಸುನಿಲ್ ಜೆ. ಶೆಟ್ಟಿ ಅವರು ಅಭಿನಂದಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಾಹಿತಿಗಳನ್ನು, ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು, ಸದಸ್ಯರನ್ನು ಗೌರವಿಸಲಾಯಿತು. ಥಾಣೆ ಬಂಟ್ಸ್‌ನ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಮೋದಾ ಎಸ್. ಮಾಡಾ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿ ಸಿದರು. ಕೋಶಾಧಿಕಾರಿ ಭಾಸ್ಕರ ಎನ್. ಶೆಟ್ಟಿ ವಂದಿಸಿದರು. ಹಿಂದೊಮ್ಮೆ ಐದು ಕೃತಿಗಳನ್ನು ಏಕಕಾಲದಲ್ಲಿ ಲೋಕಾರ್ಪಣೆಗೊಳಿಸಿದ್ದೆ. ಇಂದು 9 ಕೃತಿಗಳು ಹೊರ ಹೊಮ್ಮಿರುವುದು ಸಂತೋಷ ತಂದಿದೆ. ಅದರ ಜೊತೆಗೆ ನನ್ನ ಮುದ್ದಿನ ಮಗಳು ಕೂಡಾ ನನ್ನ ಸಾಹಿತ್ಯಾಭಿರುಚಿಯನ್ನು ಜೀವಂತವಾಗಿ ಮುನ್ನಡೆಸುವ ಭರವಸೆಯನ್ನು ಮೂಡಿಸಿದ್ದಾಳೆ. ಇದು ನನ್ನ ಪಾಲಿಗೆ ಮತ್ತಷ್ಟು ಪ್ರೇರಣೆಯನ್ನು ನೀಡಿದೆ. ಈ ಕಾರ್ಯದ ಹಿಂದೆ ಗುರುಸ್ಥಾನದಲ್ಲಿರುವವರನ್ನು, ಹೆಚ್ಚಿನ ಸಹಕಾರ, ಸಹಾಯವನ್ನು ಮಾಡಿದವರನ್ನು ಹಾಗೂ ನನ್ನ ಪ್ರತಿಯೊಂದು ಸಾಧನೆಯ ಹಿಂದಿರುವ ಧರ್ಮಪತ್ನಿಯನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಗೌರವಕ್ಕೆ ಋಣಿಯಾಗಿದ್ದೇನೆ. ಸಹೃದಯರ ಸಹಕಾರ, ಪ್ರೋತ್ಸಾಹ ಇದೇ ರೀತಿಯಲ್ಲಿ ಸದಾಯಿರಲಿ.
-ಡಾ| ಕರುಣಾಕರ ಶೆಟ್ಟಿ ಪಣಿಯೂರು, ಕೃತಿಕಾರರು ಇದೇ ಮೊದಲ ಬಾರಿಗೆ ನನ್ನ ಕೃತಿಯೊಂದು ಬೆಳಕು ಕಾಣುತ್ತಿರುವುದು ಸಂತೋಷ ತಂದಿದೆ. ಇದರ ಹಿಂದೆ ನನ್ನ ತಂದೆ ಮತ್ತು ಅನೇಕರ ಸಹಕಾರವಿದೆ. ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ತಮ್ಮೆಲ್ಲರ ಸಹಕಾರ, ಸಹಾಯ, ಮಾರ್ಗದರ್ಶನ ನನಗಿರಲಿ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
-ಶ್ರುತಿ ಅಭಿಷೇಕ್ ಶೆಟ್ಟಿ, ಕೃತಿಕಾರರು