Advertisement

ಜನರ ಆಶೋತ್ತರಗಳಿಗೆ ಸರ್ಕಾರ ಸ್ಪಂದಿಸಲಿ

06:46 PM Nov 08, 2019 | Naveen |

ತಾಂಬಾ: ಜಿಲ್ಲೆಯಲ್ಲಿ ಮತ್ತೂಂದು ಜಿಲ್ಲೆಗಾಗಿ ಈಗಾಗಲೇ ಕೂಗು ಕೇಳಿ ಬರುತ್ತಿದೆ. ಸುಗಮ ಆಡಳಿತಕ್ಕಾಗಿ ಇಂಡಿಯನ್ನು ಸ್ವತಂತ್ರ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಬಹು ಜನರ ಬೇಡಿಕೆಯಾಗಿದೆ. ಅಭಿವೃದ್ಧಿಯ ಮಾನ ದಂಡದ ಜೊತೆ-ಜೊತೆಗೆ ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಿ ಹಿತ ಕಾಪಾಡುವ ಮಹೋನ್ನತಿ ಮಹಾದಾಸೆ ಇಂಡಿ ಜಿಲ್ಲೆ ಎಂಬ ಸ್ವತಂತ್ರ ಮೈಲುಗಲ್ಲಿನಲ್ಲಿಡಗಿದೆ. ಇದರ ಬಗ್ಗೆ ಸರಕಾರ ಚಿಂತನೆ ಮಾಡಬೇಕಾಗಿದೆ ಎಂದು ಕನ್ನಡಪರ ಹೋರಾಟಗಾರ ಸಂತೋಷಕುಮಾರ ಎಸ್‌. ನಿಗಡಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಜನರ ಮತ್ತು ಜನರ ಭಾವನೆಗಳಿಗೆ ಸ್ಪಂದಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಇದನ್ನು ಸರಕಾರ ಮುತುವರ್ಜಿವಹಿಸಿ ಗಡಿಭಾಗಕ್ಕೆ ಅಂಟಿಕೊಂಡ ಇಂಡಿಯನ್ನು ಸ್ವತಂತ್ರ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಈ ಭಾಗದ ಸಾರ್ವಜನಿಕರ ಮುಖ್ಯ ಧ್ಯೇಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 13 ತಾಲೂಕುಗಳಿವೆ. ಅದಕ್ಕಾಗಿ ಆಡಳಿತಾತ್ಮಕ ದೃಷ್ಟಿಕೋನದಿಂದ ಇಂಡಿಯನ್ನು ಜಿಲ್ಲೆಯ ಸ್ಥಾನಮಾನ ನೀಡಬೇಕೆಂದು ಇದೇ ಸಂದರ್ಭದಲ್ಲಿ ಸರಕಾರಕ್ಕೆ ಒತ್ತಾಯಿಸಿದರು.

ಯಾರದೋ ಲಾಭಕ್ಕಾಗಿ ಜಿಲ್ಲಾ ಕೇಂದ್ರ ಕೇಳುತ್ತಿಲ್ಲ. ಎಲ್ಲರ ಹಿತಕ್ಕಾಗಿ ಕೂಗು ಕೇಳಿಬರುತ್ತಿದೆ. ಅದರಲ್ಲೂ ಮುಖ್ಯವಾಗಿ ನಮ್ಮ ಅಸ್ತಿತ್ವದ ಕುರುವಿನ ಉಳುವಿಗಾಗಿ, ಅಭಿವೃದ್ಧಿಗಾಗಿ, ಕೈಗಾರಿಕಾ, ವ್ಯವಹಾರಿಕ ಬೆಳವಣಿಗೆಗಾಗಿ, ಸಮಗ್ರ ನೀರಾವರಿ ಅಭಿವೃದ್ಧಿಗಾಗಿ, ಸಾರಿಗೆ ಸಂಪರ್ಕ ಬೆಳವಣಿಗೆಗಾಗಿ, ರೈತರ ಪ್ರಗತಿಗಾಗಿ, ಸಂಪನ್ಮೂಲಗಳ ಕ್ರೂಢೀಕರಣ ಜೊತೆ-ಜೊತೆಗೆ ಸದ್ಭಳಕೆಗಾಗಿ ಹೀಗೆ ಇದರ ಹಿಂದೆ ನೂರಾರು ಕನಸಿನ ಪ್ರಗತಿಯ ಚಿಂತನೆಗಳು ಅಡಗಿಕೊಂಡಿವೆ ಎಂದು ಹೇಳಿದರು.

ಇಂದಲ್ಲ ನಾಳೆ ಆಗಬೇಕಾಗಿರುವ ಜಿಲ್ಲಾ ಕೇಂದ್ರಗಳನ್ನು ಆದಷ್ಟು ಬೇಗನೆ ಘೋಷಿಸಿ ಅಭಿವೃದ್ಧಿಗೆ ಧಾರೆಯರೆಯಬೇಕು. ಇದಕ್ಕಾಗಿ ಕಾಲಹರಣ ಸಲ್ಲದು. ಇದು ನಮ್ಮ ಹೋರಾಟದ ಪೀಠಿಕೆಯಾಗಿದೆ. ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿಸುವುದರಿಂದ ಯಾವುದೇ ನಷ್ಟ-ಕಷ್ಟಗಳಿಲ್ಲ. ಆದರೆ ಲಾಭದ ಅಂಶಗಳು ಹೆಚ್ಚಾಗಿ ಕಾಣುತ್ತವೆ. ಹೆಚ್ಚು ಸರಕಾರದ ಅನುದಾನ ಮೆಡಿಕಲ್‌ ಕಾಲೇಜು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಸರಕಾರದ ಮುಖ್ಯ ಕಚೇರಿಗಳು ಮುಂದುವತಿದ ಸರಕಾರಿ ಆಸ್ಪತ್ರೆ, ಉಪನಿರ್ದೇಶಕ ಕಚೇರಿ, ಹೀಗೆ ಹತ್ತು ಹಲವಾರು ಚಿಂತನೆಗಳ ಪ್ರಗತಿಯ ಬಿಂಬ ಇಟ್ಟುಕೊಂಡು ಹೋರಾಟದ ಹಾದಿ ಹಿಡಿದಿದೆ. ಇಂಡಿ, ಸಿಂದಗಿ, ದೇವರಹಿಪ್ಪರಗಿ, ಚಡಚಣ ಮತ್ತು ಆಲಮೇಲ ಈ ಐದು ತಾಲೂಕುಗಳನ್ನೊಳಗೊಂಡ ಸ್ವತಂತ್ರ ಜಿಲ್ಲೆ ಕನಸಿನ ಜೊತೆಗೆ ಪ್ರಗತಿಯ ಚಿಗುರು ಕಾಣಬಹುದಾಗಿದೆ. ಅದಕ್ಕಾಗಿ ಪ್ರಗತಿಪರರು, ಸ್ವಾಮಿಜಿಗಳು, ಚಿಂತಕರು, ಸಾಹಿತಿಗಳು ರೈತರು, ವಿದ್ಯಾವಂತರು, ಹೋರಾಟ ಗಾರರು ಸೂಕ್ತವಾಗಿ ಸ್ಪಂದಿಸುತ್ತಿರುವುದು ಅಭಿನಂದ ನಾರ್ಹ ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಮಹಾಂತೇಶ ಅಲೇಗಾವಿ, ರಾಯಗೊಂಡ ಪೂಜಾರಿ, ಸಿದ್ದಗೊಂಡ ಹಿರೇಕುರಬರ, ರಾಯಗೊಂಡ ನಾಟೀಕಾರ, ಮಾಶೀಮ್‌ ವಾಲೀಕಾರ, ಭೀರಪ್ಪ ಪೂಜಾರಿ, ಪೂಜಪ್ಪ ಸಿಂದಗಿ, ಪರಶು ಬಿಸನಾಳ, ಹಣಮಂತ ಕಾಳೆ, ಮಾದುರಾಯಗೌಡ ಪಾಟೀಲ, ಪುಟ್ಟು ಪಾಟೀಲ, ಮಹಮ್ಮದ ವಾಲೀಕಾರ, ಮಹಾಂತೇಶ ಬಡದಾಳ, ಪೈಗಂಬರ ಹಚ್ಯಾಳ, ವಿಠ್ಠಲ ಮೂಲಿಮನಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next