ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರ ತಾಪಂ ರದ್ದು ಮಾಡಲು ಸಿದ್ಧತೆ ನಡೆಸಿದೆ. ಆದರೆ ಜಿಲ್ಲಾ ಹಂತದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ತಾಪಂಗೆ ಅಧಿಕಾರವಿದ್ದರೂ ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾಣುತ್ತಿಲ್ಲ. ತಾಪಂ ರದ್ದಾದರೆ ತಾಲೂಕಿನ ಅಭಿವೃದ್ಧಿ ಕುಂಟಿತವಾಗಲಿದೆ. 3 ಹಂತದ ಆಡಳಿತ ವ್ಯವಸ್ಥೆ ಇದ್ದರೆ ಅಭಿವೃದ್ಧಿಗೂ ವೇಗ ಸಿಗಲಿದೆ ಎಂದು ಕೊಪ್ಪಳ ತಾಪಂ ಅಧ್ಯಕ್ಷ ಟಿ. ಬಾಲಚಂದ್ರನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಉದಯವಾಣಿ’ ಜೊತೆ ತಾಪಂ ರದ್ದತಿಯ ವಿಚಾರದ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ರದ್ದು ಮಾಡುವುದಕ್ಕಿಂತ ಹೆಚ್ಚಿನ ಅನುದಾನ ಕೊಟ್ಟರೆ ಅಭಿವೃದ್ಧಿ ವೇಗ ಪಡೆಯಲಿದೆ ಎನ್ನುವ ಮಾತನ್ನಾಡಿದ್ದಾರೆ. ತಾಪಂ ರದ್ದು ಮಾಡುವುದು ಒಳ್ಳೆಯದಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜಿಪಂ, ತಾಪಂ, ಗ್ರಾಪಂ ಎಂಬ 3 ಹಂತದ ಆಡಳಿತ ವ್ಯವಸ್ಥೆ ಇದೆ. ತಾಪಂ ರದ್ದಾದರೆ ತಾಲೂಕು ಅ ಧಿಕಾರಿಗಳಿಗೆ ಹಿಡಿತವೇ ಇಲ್ಲದಂತ ಪರಿಸ್ಥಿತಿಯಾಗಲಿದೆ. ಹಲವು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ. ತಾಪಂನಲ್ಲಿ ಅ ಧಿಕಾರ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ.
ನಿಜಕ್ಕೂ ನಮ್ಮಲ್ಲಿ ಅಧಿಕಾರವಿದೆ. ಅಧಿಕಾರಿಗಳ ಸಭೆ ಕರೆಯುವುದು, ಪ್ರಗತಿ ಪರಿಶೀಲನೆ ಮಾಡುವುದು, ಪ್ರಗತಿಯಲ್ಲಿ ಹಿನ್ನಡೆಯಾದರೆ ಅಧಿ ಕಾರಿಗಳಿಗೆ ಪ್ರಶ್ನೆ ಮಾಡುವುದು, ಸಮಸ್ಯಾತ್ಮಕ ಹಳ್ಳಿಗಳಲ್ಲಿ ಅಧಿ ಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವುದು, ಶಿಕ್ಷಣ ಇಲಾಖೆ, ಅಂಗನವಾಡಿ ಕಟ್ಟಡ, ಮಕ್ಕಳ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸಲು ಅ ಧಿಕಾರಿಗಳಿಗೆ ಸೂಚನೆ ನೀಡುವ ಅಧಿಕಾರವಿದೆ. ಕೆಲವರು ಅಧಿಕಾರವಿಲ್ಲ ಎನ್ನುವುದನ್ನು ನಾವು ಒಪ್ಪಲ್ಲ. ಇಷ್ಟು ದಿನಗಳ ಕಾಲ ಆಡಳಿತ ನಡೆಸಿದ್ದೇವೆ. ಅಧಿಕಾರ ಇಲ್ಲದೇ ಆಡಳಿತ ನಡೆಸಲು ಸಾಧ್ಯವೇ? ನಮ್ಮಲ್ಲಿ ಅನುದಾನ ಇಲ್ಲ ಎನ್ನುವ ಕೊರತೆ ಬಿಟ್ಟರೆ ಉಳಿದೆಲ್ಲ ಅಧಿ ಕಾರವೂ ಇದೆ. ತಾಪಂಗಳಿಗೆ 14 ಹಾಗೂ 15ನೇ ಹಣಕಾಸು ಯೋಜನೆಯಡಿ ಪ್ರತಿ ವರ್ಷವೂ ಅನುದಾನ ಬರುತ್ತದೆ. ಅಲ್ಲದೇ ಕಳೆದ ವರ್ಷದಿಂದ ತಾಪಂಗೆ 1.50 ಕೋಟಿ ಅನುದಾನ ಕೊಡುತ್ತಿದ್ದಾರೆ.
ಇದನ್ನೂ ಓದಿ:ಅನುದಾನ-ಅಧಿಕಾರ ಹೆಚ್ಚಳದಿಂದ ತಾಪಂ ಬಲಗೊಳಿಸಿ
ಅದೇ ಅನುದಾನದಲ್ಲಿಯೇ ಪ್ರತಿ ಸದಸ್ಯರಿಗೆ 4-5 ಲಕ್ಷ ಅನುದಾನ ಬರುತ್ತದೆ. ಅದರಲ್ಲಿ ನಾವು ಅಭಿವೃದ್ಧಿ ಮಾಡಬೇಕಿದೆ. ಆದರೆ ವರ್ಷಕ್ಕೆ 5-6 ಕೋಟಿ ಅನುದಾನ ಕೊಟ್ಟರೆ ಅಭಿವೃದ್ಧಿಗೆ ಒತ್ತು ನೀಡಿದಂತಾಗಲಿದೆ ಎಂದೆನ್ನುತ್ತಿದ್ದಾರೆ. ಇನ್ನೂ ಹಲವರಲ್ಲಿ ಜಿಪಂಗೆ, ಗ್ರಾಪಂಗೆ ಮಾತ್ರ ಅ ಧಿಕಾರವಿದೆ. ತಾಪಂಗೆ ಅ ಧಿಕಾರವಿಲ್ಲ ಎಂದೆನ್ನುತ್ತಿದ್ದಾರೆ. ಮೇಲ್ನೋಟಕ್ಕೆ ಅ ಕಾರವಿಲ್ಲವೆಂದು ಕಾಣಬಹುದು. ಆದರೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ಅಧಿಕಾರ ಅಲ್ಲವೇ? ತಪ್ಪು ಮಾಡಿದಾಗ, ಕಳಪೆ, ಹಿನ್ನೆಡೆಯಾದಾಗ ಪ್ರಶ್ನೆ ಮಾಡಿ ಸರಿಯಾಗಿ ಸೂಚನೆ ನೀಡುವುದು ಅಧಿಕಾರವಲ್ಲವೇ? ಇರುವ ಅ ಧಿಕಾರವ ಧಿಯಲ್ಲಿಯೇ ಬೇಕಾದ ಕೆಲಸ ಮಾಡಬಹುದು. ಆದರೆ, ಅನುದಾನ ಇಲ್ಲದೇ ಏನೂ ಮಾಡಲು ಆಗುತ್ತಿಲ್ಲ ಎಂದೆ ಹೇಳುತ್ತಿದ್ದಾರೆ.
ತಾಪಂಗಳನ್ನು ರಾಜಕೀಯ ಕಾರ್ಯಕರ್ತರಿಗೆ ಸೃಷ್ಟಿ ಮಾಡಿದ್ದಾರೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಹಾಗೆಂದ ಮಾತ್ರಕ್ಕೆ ರಾಜಕೀಯ ಕಾರ್ಯಕರ್ತರು ಅಲ್ಲಿ ರಾಜಕಾರಣ ಮಾಡಲು ಬರಲ್ಲ. ಅಭಿವೃದ್ಧಿಯ ಬಗ್ಗೆಯೂ ಹೆಚ್ಚಿನ ಒತ್ತು ನೀಡುತ್ತಾರೆ. ಕ್ಷೇತ್ರದ ಸಮಸ್ಯೆಗಳ ಕುರಿತು ಪ್ರತಿಯೊಬ್ಬ ಸದಸ್ಯನೂ ಸಭೆಗಳಲ್ಲಿ ಪ್ರಸ್ತಾಪ ಮಾಡಿ ಜನರ ನೋವನ್ನು ಒಬ್ಬ ಪ್ರತಿನಿಧಿ ಯಾಗಿ ವ್ಯಕ್ತಪಡಿಸುತ್ತಾನೆ. ಆ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಅವರು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಿದ್ದಾರೆ. ಈ ರೀತಿಯ ಪ್ರಕ್ರಿಯೆ ನಡೆದಾಗ ಹಳ್ಳಿಗಳ ಸಮಸ್ಯೆಯು ಬೇಗ ನಿವಾರಣೆಯಾಗಲಿದೆ. ಜಿಪಂ ಸದಸ್ಯರೇ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಜನಸಂಖ್ಯೆ, ಹಳ್ಳಿಗಳು ಹೆಚ್ಚಾಗಿ ಜನರು ಸಮಸ್ಯೆ ಹೊತ್ತು ಜಿಪಂಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಬರಲಿದೆ ಎಂದೆನ್ನುತ್ತಿದ್ದಾರೆ.
ನನ್ನ ಅಧಿಕಾರವಧಿ ಯಲ್ಲಿ ತಾಲೂಕಿನ ಹಲವು ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಿದ್ದೇನೆ. ಚರಂಡಿ ನಿರ್ಮಾಣ, ಶಾಸಕರ ಅನುದಾನದ ಕಾಮಗಾರಿಗಳ ಬಗ್ಗೆಯೂ ಪ್ರತಿ ಸದಸ್ಯರು ಹೆಚ್ಚಿನ ನಿಗಾ ವಹಿಸುವಂತೆ ಹೇಳಿದ್ದೇನೆ. ಹೀಗೆ ಹಲವು ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಒಟ್ಟಿನಲ್ಲಿ ತಾಪಂ ರದ್ದಾದರೆ ಅಭಿವೃದ್ಧಿಯೇ ಡೋಲಾಯಮಾನವಾಗಲಿದೆ. ಅಭಿವೃದ್ಧಿಗೆ ವೇಗ ಪಡೆಯಲು ಸಾಧ್ಯವೇ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದತ್ತು ಕಮ್ಮಾರ