ಭರ್ತಿಯಾದ ಕೆರೆಗಳಿಗೆ ಪೂಜೆ ಬಾಗಿನ ಸಲ್ಲಿಸುವುದನ್ನು ಕಾಣುತ್ತಿದ್ದೇವೆ. ಆದರೆ ತಾಲೂಕಿನಲ್ಲಿಯೇ ಅತಿ ದೊಡ್ಡದಾದ
ಕೆರೆ, ಚಿತ್ರನಟ ಯಶ್ ಅಭಿವೃದ್ಧಿ ಪಡಿಸಿದ ತಲ್ಲೂರು ಕೆರೆ ಅಂಗಳ ಮಾತ್ರ ಭಣಗುಡುತ್ತಿದೆ.
Advertisement
ಕೆರೆಗೆ ನೀರು ಬರುವ ಸ್ಥಳವನ್ನು ರೈಲ್ವೆ ಇಲಾಖೆಯವರು ತಪ್ಪಿಸಿದ ಪರಿಣಾಮ ಈ ಬಾರಿ ಹೆಚ್ಚಿನ ಮಳೆಯಾದರೂ ಕೆರೆಯಲ್ಲಿ ನೀರು ಇಲ್ಲದಂತಾಗಿದೆ. ಗದಗ-ವಾಡಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಹೊಣೆ ಹೊತ್ತ ರೈಲ್ವೆ ಗುತ್ತಿಗೆದಾರರು ನೀರಿನಜಾಡು ಹಾದಿಯನ್ನು ತಪ್ಪಿಸಿದ್ದು ಕೆರೆಗೆ ನೀರು ಬರುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಪ್ರಮಾಣದಲ್ಲಿ ಗುಂಡಿ ತೋಡಿದ ಪರಿಣಾಮ ನೀರು ಗುಂಡಿಯಲ್ಲಿ ಒಂದಿಷ್ಟು ಸಂಗ್ರಹವಾಗಿದೆ. ಕೆರೆಗೆ ದೊಡ್ಡ ಪ್ರಮಾಣದಲ್ಲಿ ನೀರು ಬರುವ ವಜ್ರಬಂಡಿ, ಲಿಂಗನಬಂಡಿ, ನೀರಿನ ಹರಿವನ್ನು ತಪ್ಪಿಸಿದ್ದರಿಂದ ಕೆರೆಗೆ ನೀರು ಹರಿದು ಬಂದಿಲ್ಲ.
Related Articles
Advertisement
ಯಶ್ ಅಭಿವೃದ್ದಿ ಪಡಿಸಿದ ಕೆರೆ: ಚಿತ್ರನಟ ಯಶ್ ಅವರು ತಮ್ಮ ಯಶೋಮಾರ್ಗ ಸಂಸ್ಥೆ ವತಿಯಿಂದ 4 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತಿ ಈ ಕೆರೆ ಅಭಿವೃದ್ಧಿ ಪಡಿಸಿದ್ದರು. ಕೆರೆ 96 ಎಕರೆ ವಿಸ್ತೀರ್ಣ ಹೊಂದಿದೆ. 40 ಗ್ರಾಮಗಳಿಗೆ ಆಸರೆಯಾಗಬೇಕಿದ್ದ ಕೆರೆಗೆ ನೀರಿಲ್ಲ. ನಟ ಯಶ್ ಅವರ ಪ್ರಯತ್ನದಿಂದ ತಲ್ಲೂರು ಕೆರೆಗೆ ನೀರು ಬಂದಿತ್ತು. ರೈಲ್ವೆ ಇಲಾಖೆಯ ಗುತ್ತಿಗೆದಾರರಅವೈಜ್ಞಾನಿಕ ನಿರ್ಣಯದಿಂದ ನೀರು ಇಲ್ಲದಂತಾಗಿದೆ. ಕಳೆದ ಅಭಿವೃದ್ಧಿ ಪಡಿಸಿದ ಬಳಿಕ ಕೆರೆ ತುಂಬಿ ಈ ಭಾಗದ ರೈತರಿಗೆ ಅನುಕೂಲವಾಗಿತ್ತು. ಆದರೆ ಈ ವರ್ಷ ನೀರಿನ ಮಾರ್ಗ ಬದಲಿಸಿದ್ದಾರೆ. ರೈತರ ಆಕ್ರೋಶ: ಕೆರೆಯ ನೀರಿನ ಹಾದಿ ತಪ್ಪಿಸಿದ ರೈಲ್ವೆ ಗುತ್ತಿಗೆದಾರರ ನಡೆ ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸುವಂತೆ ತಹಶೀಲ್ದಾರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು
ರೈತರು ದೂರುತ್ತಾರೆ. – ಮಲ್ಲಪ್ಪ ಮಾಟರಂಗಿ