ಯಲಬುರ್ಗಾ: ರೈತರ ಜಮೀನುಗಳ ಸರ್ವೇ ನಂಬರ್‌ಗಳು ವ್ಯತ್ಯಾಸವಾಗಿದ್ದು ಸರಿಪಡಿಸಿಕೊಡುವಲ್ಲಿ ಸರ್ವೇ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಲ್ಲೂರ ಗ್ರಾಮದ ರೈತರು ಶುಕ್ರವಾರ ಪ್ರತಿಭಟನೆ ಮಾಡುವ ಮೂಲಕ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸರ್ವೇ ನಂಬರ್‌ಗಳ ವ್ಯತ್ಯಾಸವನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಅಧಿಕಾರಿಗಳ ವಿಳಂಬ ಧೋರಣೆಯನ್ನು ಖಂಡಿಸುವ ಜೊತೆಗೆ ಕೆಲವೇ ದಿನಗಳಲ್ಲಿ ಜರುಗಲಿರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಕ್ಕೆ ಗ್ರಾಮಸ್ಥರೆಲ್ಲರೂ ನಿರ್ಧಾರ ಮಾಡುವ ಜೊತೆಗೆ ತಹಶೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು. ಕೂಡಲೇ ಅಧಿಕಾರಿಗಳು ವಿಳಂಬ ನೀತಿ ಕೈ ಬಿಟ್ಟು ತ್ವರಿತಗತಿಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಓಬಳೆಪ್ಪ ಕುಲಕರ್ಣಿ, ಪರಶಪ್ಪ ಬತ್ತಿ, ಚನ್ನಬಸವ ಕುಲಕರ್ಣಿ, ಸುಧೇಂದ್ರರಾವ್ ದೇಸಾಯಿ, ಕಳಕನಗೌಡ ಅಡವಿಗೌಡರ, ಸಂಕ್ರಗೌಡ ಅಡವಿಗೌಡರ, ಹನಮಂತಪ್ಪ ಕುದರಿಕೋಟಗಿ, ಶರಣಗೌಡ ಗೌಡ್ರ, ಭೀಮಪ್ಪ ಬಿಸನಾಳ, ಹನಮಪ್ಪ ಹಳ್ಳಿಗುಡಿ, ಹನಮಂತಪ್ಪ ಬಂಡಿ, ಹನಮಗೌಡ ಗೌಡ್ರ ಲಕ್ಷ ್ಮಣ ವಿಲಾತಿ, ಸಂಗಪ್ಪ ಮಾಟರಂಗಿ ಹಾಗೂ ರೈತರು ಒತ್ತಾಯಿಸಿದ್ದಾರೆ.
Advertisement
ರೈತರ ಜಮೀನುಗಳ ಸರ್ವೇ ನಂಬರಗಳು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಭೂಮಿ ಖರೀದಿ, ಮಾರಾಟ, ಪರಭಾರೆ ಮಾಡುವುದಕ್ಕೆ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಸಮಸ್ಯೆ ಹಲವು ದಿನಗಳಿಂದ ಉಂಟಾಗಿದ್ದರೂ ಸರ್ವೇ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.