Advertisement

ತಾಳಿಕೋಟೆ: ಗಣೇಶ ಮೂರ್ತಿಗಳ ವಿಸರ್ಜನೆ

11:44 AM Sep 08, 2019 | Team Udayavani |

ತಾಳಿಕೋಟೆ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗಣೇಶ ಉತ್ಸವ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾದ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಐದನೇ ದಿನ ಸಾಮೂಹಿಕವಾಗಿ ಡೋಣಿ ನದಿಯಲ್ಲಿ ವಿಸರ್ಜಿಸಲಾಯಿತು.

Advertisement

ದಾರಿಯುದ್ದಕ್ಕೂ ಗಣಪತಿ ಮೂರ್ತಿ ಹೊತ್ತುಕೊಂಡು ಗಣಪತಿ ಬಪ್ಪಾ ಮೋರಯ್ಯ ಎಂಬ ನಾಮಾಂಕಿತ ಜಪಿಸುತ್ತ ಹಾಗೂ ಪಟಾಕಿ ಸಿಡಿಸುತ್ತ ಮೆರವಣಿಗೆ ಮೂಲಕ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ವಿಸರ್ಜಿಸಲಾಯಿತು.

ವಿವಿಧ ಚಲನ ಚಿತ್ರಗಳ ಗೀತೆಗಳ ಹಾಗೂ ವೀರ ಮಹಾಪುರುಷ ಛತ್ರಪತಿ ಶಿವಾಜಿ ಮಹಾರಾಜರ ಗೀತೆಗೆ ತಕ್ಕಂತೆ ಸಾವಿರಾರು ಯುವಕರ ನೃತ್ಯ ನೋಡುಗರಿಗೆ ಮನರಂಜನೆ ತಂದುಕೊಟ್ಟಿತು.

ಮೆರವಣಿಗೆಯಲ್ಲಿ ಭಗತ್‌ಸಿಂಗ್‌ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾದ ಶಿವಾಜಿ ಮಹಾರಾಜರ ಪ್ರತಿರೂಪದ ಗಣೇಶ ಮೂರ್ತಿ ನೋಡುಗರ ಜನಮನ ಸೆಳೆಯುವುದರೊಂದಿಗೆ ಭಕ್ತಿಗೀತೆಗಳ ನಾದ ಭಕ್ತಿಮಾರ್ಗದತ್ತ ಕೊಂಡೊಯ್ದವು.

ಇನ್ನೂ ಏಳನೇ ದಿನದಂದು ಕೆಲ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳ ವಿಸರ್ಜನೆ ಜರುಗಿದರೆ, ಒಂಬತ್ತನೇ ದಿನಕ್ಕೆ ಹಿಂದೂ ಗಣಪತಿ ಮಹಾ ಮಂಡಳ ಪ್ರತಿಷ್ಠಾಪಿಸಿರುವ 15 ಅಡಿ ಎತ್ತರದ ಗಣೇಶ ಮೂರ್ತಿ ವಿಸರ್ಜನೆ ಜರುಗಲಿದೆ.

Advertisement

ಗಣೇಶ ಮೂರ್ತಿಗಳ ವಿಸರ್ಜನಾ ಸಮಯದಲ್ಲಿ ಅಹಿತಕರ ಘಟನೆ ಜರುಗದಂತೆ ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸೈ ಗೋವಿಂದೇಗೌಡ ಪಾಟೀಲ ಸಿಬ್ಬಂದಿಯೊಂದಿಗೆ ಬಂದೋಬಸ್ತ್ ಕೈಗೊಂಡಿದ್ದರು.

ಕೃತಕ ಹೊಂಡ: ಡೋಣಿ ನದಿಯಲ್ಲಿ ಮಳೆ ಅಭಾವದಿಂದ ನೀರಿನ ಕೊರತೆಯಾಗಿದೆ. ಇದರಿಂದ ಗಣೇಶ ಮೂರ್ತಿಗಳನ್ನು ಬಾವಿ ಮತ್ತು ಇನ್ನಿತರ ಕಡೆಗಳಲ್ಲಿ ವಿಸರ್ಜಿಸಿ ಶುದ್ಧ ನೀರು ಕಲುಷಿತಗೊಳ್ಳಬಾರದೆಂಬ ಉದ್ದೇಶದಿಂದ ಡೋಣಿ ನದಿಯಲ್ಲಿ ಪುರಸಭೆ ನಿರ್ಮಿಸಿದ್ದ ಕೃತಕ ಹೊಂಡದಲ್ಲಿ ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next