Advertisement

Viral Pic: ತಂದೆ- ತಾಯಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ ವಿಜಯ್; ಫ್ಯಾಮಿಲಿ ಫೋಟೋ ವೈರಲ್

10:03 AM Sep 14, 2023 | Team Udayavani |

ಚೆನ್ನೈ: ಕಾಲಿವುಡ್ ʼಮಾಸ್ಟರ್‌ʼ ದಳಪತಿ ವಿಜಯ್‌ ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ನಲ್ಲಿದ್ದಾರೆ. ಅವರ ʼಲಿಯೋʼ ಸಿನಿಮಾ ರಿಲೀಸ್‌ ಗೆ ರೆಡಿಯಾಗಿದ್ದು ಸಾವಿರಾರು ಫ್ಯಾನ್ಸ್‌ ಗಳಿ ಸಿನಿಮಾ ನೋಡಲು ಕಾಯುತ್ತಿದ್ದಾರೆ.

Advertisement

ಇದರ ನಡುವೆ ಅವರ ಮುಂದಿನ ಸಿನಿಮಾ ‘Thalapathy 68’ ಸಿನಿಮಾದ ತಯಾರಿ ಕೂಡ ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ. ಇತ್ತೀಚೆಗೆ ವಿಜಯ್‌ ಅವರು ವೆಂಕಟ್‌ ಪ್ರಭು ಅವರ ಸಿನಿಮಾದ ಕೆಲಸಕ್ಕಾಗಿ ಯುಎಸ್‌ ತಲುಪಿದ್ದರು. ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಕ್ಕಾಗಿ ಅಮೆರಿಕ ಭೇಟಿ ನೀಡಿ ಅವರು ಭಾರತಕ್ಕೆ ವಾಪಾಸಾಗಿದ್ದಾರೆ.

ಈ ನಡುವೆ ಚೆನ್ನೈನಲ್ಲಿನ ತಮ್ಮ ನಿವಾಸದಲ್ಲಿ ತಂದೆ – ತಾಯಿಯನ್ನು ಭೇಟಿಯಾಗಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

ವಿಜಯ್‌ ಅವರ ಪೋಷಕರಾದ ಶೋಬಾ ಮತ್ತು ಎಸ್.ಎ.ಚಂದ್ರಶೇಖರ್ ಚೆನ್ನೈನಲ್ಲಿ ವಾಸವಾಗಿದ್ದಾರೆ. ಮೂಲಗಳ ಪ್ರಕಾರ ಎಸ್.ಎ.ಚಂದ್ರಶೇಖರ್ ಅವರಿಗೆ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ವಿಜಯ್ ಅವರು ಅಮೆರಿಕಾದಿಂದ ಹಿಂದಿರುಗಿದ ನಂತರ ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ವೇಳೆ ತಂದೆ ೦ ತಾಯಿ ಜೊತೆ ಸಾಕಷ್ಟು ಸಮಯವನ್ನು ಕಳೆದು, ಆರೋಗ್ಯ ವಿಚಾರಣೆಯನ್ನು ಮಾಡಿದ್ದಾರೆ.

ಎಸ್‌ಎ ಚಂದ್ರಶೇಖರ್, ಕುರ್ಚಿಗಳ ಮೇಲೆ ಕುಳಿತಿದ್ದರೆ, ಶೋಬಾ ಅವರ ಹಿಂದೆ ಭುಜದ ಮೇಲೆ ಕೈಯಿಟ್ಟು ನಿಂತಿರುವುದನ್ನು ಫೋಟೋದಲ್ಲಿ ಕಾಣಬಹುದು. ಅವರ ಫ್ಯಾಮಿಲಿ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಲೋಕೇಶ್ ಕನಕರಾಜ್ ಅವರ ನಿರ್ದೇಶನದ ‘ಲಿಯೋ’ ಚಿತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದಾದ ಬಳಿಕ ವಿಜಯ್ ಅವರು ನಿರ್ದೇಶಕ ವೆಂಕಟ್ ಪ್ರಭು ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ ತಾತ್ಕಾಲಿಕವಾಗಿ ‘Thalapathy 68’ ಟೈಟರ್‌ ಇಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next