ಚೆನ್ನೈ: ದಳಪತಿ ವಿಜಯ್(Thalapathy Vijay) ಅವರ ʼಗೋಟ್ʼ ಸಿನಿಮಾ ಥಿಯೇಟರ್ನಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಅವರ ‘Thalapathy 69’ ಸಿನಿಮಾದ ಬಗ್ಗೆ ಹವಾ ಶುರುವಾಗಿದೆ.
ಶುಕ್ರವಾರ(ಸೆ.13ರಂದು) ‘Thalapathy 69’ ಸಿನಿಮಾದ ಬಗ್ಗೆ ಅಪ್ಡೇಟ್ ವೊಂದು ಹೊರಬಿದ್ದಿದೆ. ಈಗಾಗಲೇ ವಿಜಯ್ ತನ್ನ ಪಕ್ಷವನ್ನು ಘೋಷಿಸಿ, ಲೋಗೋ ಬಿಡುಗಡೆ ಮಾಡಿ 2026ರ ತಮಿಳುನಾಡಿನ ಚುನಾವಣೆಗೆ ಸಿದ್ಧವಾಗಿದ್ದಾರೆ. ವಿಜಯ್ ತಮಿಳುನಾಡಿನ ಮುಂದಿನ ಸಿಎಂ ಆಗುತ್ತಾರೆ ಎನ್ನುವ ಮಾತು ಕೂಡ ಅವರ ಅಪಾರ ಅಭಿಮಾನಿಗಳ ವಲಯದಲ್ಲಿ ಕೇಳಿ ಬರುತ್ತಿದೆ.
ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವ ಮುನ್ನ ಅವರ ಅವರು ಕೊನೆಯದಾಗಿ ಸಿನಿಮಾವೊಂದನ್ನು ಮಾಡುತ್ತಾರೆ ಎನ್ನಲಾಗಿದೆ. ಆ ಸಿನಿಮಾಕ್ಕೆ ತಾತ್ಕಾಲಿಕವಾಗಿ ‘Thalapathy 69’ ಎಂದು ಟೈಟಲ್ ಇಡಲಾಗಿದೆ.
ಶುಕ್ರವಾರ ಈ ಸಿನಿಮಾದ ಬಗ್ಗೆ ಅಪ್ಡೇಟ್ ಹೊರಬಿದ್ದಿದೆ. ಯಶ್ ಅವರ ʼಟಾಕ್ಸಿಕ್ʼ ಸಿನಿಮಾಕ್ಕೆ ಬಂಡವಾಳ ಹಾಕಿರುವ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ (
Kvn Productions) ದಳಪತಿ ಅವರ 69ನೇ ಸಿನಿಮಾಕ್ಕೆ ಬಂಡವಾಳ ಹಾಕಲಿದೆ. 30 ವರ್ಷದ ವಿಜಯ್ ಅವರ ಸಿನಿ ಜರ್ನಿಯನ್ನು ತೋರಿಸಿರುವ ವಿಡಿಯೋವನ್ನು ʼಒನ್ ಲಾಸ್ಟ್ ಟೈಮ್ʼ ಎಂದು ಬರೆಯಲಾಗಿದೆ.
‘Thalapathy 69’ ಸಿನಿಮಾವನ್ನು ಎಚ್ ವಿನೋದ್ (H. Vinoth) ಅವರು ನಿರ್ದೇಶನ ಮಾಡಲಿದ್ದು, ಕೈಯಲ್ಲಿ ಕ್ರೀಡಾ ಜ್ಯೋತಿಯೊಂದನ್ನು ಹಿಡಿದಿರುವ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಲಾಗಿದೆ. ಪ್ರಜಾಪ್ರಭುತ್ವದ ಜ್ಯೋತಿ ಹೊತ್ತವರು 2025ಕ್ಕೆ ಆಗಮಿಸುತ್ತಿದ್ದಾರೆ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. 2025ರ ಅಕ್ಟೋಬರ್ ನಲ್ಲಿ ಸಿನಿಮಾ ಬರಲಿದೆ ಎಂದು ಹೇಳಲಾಗಿದೆ. ಆದರೆ ಸಿನಿಮಾದ ಟೈಟಲ್ ರಿವೀಲ್ ಮಾಡಿಲ್ಲ.
ಇದೇ ಮೊದಲ ಬಾರಿ ಕೆವಿಎನ್ ತಮಿಳು ಸಿನಿಮಾಕ್ಕೆ ಬಂಡವಾಳ ಹಾಕುತ್ತಿದೆ.
ಅನಿರುದ್ಧ್ ರವಿಚಂದರ್ ಸಿನಿಮಾಕ್ಕೆ ಮ್ಯೂಸಿಕ್ ನೀಡಲಿದ್ದಾರೆ. ದಳಪತಿ ವಿಜಯ್ ಅವರ ರಾಜಕೀಯ ಜೀವನಕ್ಕೆ ಹತ್ತಿರವಾಗುವ ಸಿನಿಮಾವಿದು ಎನ್ನಲಾಗಿದೆ.
ಸಿನಿಮಾದಲ್ಲಿ ಬಾಬಿ ಡಿಯೋಲ್ (Bobby Deol) ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪೂಜಾ ಹೆಗ್ಡೆ, ಮೋಹನ್ ಲಾಲ್ ಮತ್ತು ಮಮಿತಾ ಬೈಜು ಮುಂತಾದವರು ನಟಿಸಲಿದ್ದಾರೆ ಎನ್ನಲಾಗಿದೆ.