ನವ ದೆಹಲಿ : ಇಂದು ತನ್ನ 34 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಕಂಗನಾ ರನೌತ್ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ‘ತಲೈವಿ’ಯ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ.
ಇದು ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತ ಅವರು ನಟಿಯಾಗಿ ತಮ್ಮ ವೃತ್ತಿ ಜೀವನವದ ಪ್ರಯಾಣವನ್ನು ಆರಂಭಿಸಿದ ಬಗ್ಗೆ ತೆರೆದಿಡುತ್ತದೆ. ತದನಂತರ ಜಯಲಲಿತ ಅವರ ಪ್ರಬಲ ರಾಜಕೀಯ ವೃತ್ತಿಜೀವನದ ಬಗ್ಗೆ ತೊರಿಸುತ್ತದೆ.
ಓದಿ : ಶರದ್ ಪವಾರ್ ಸುಳ್ಳು ಹೇಳುತ್ತಿದ್ದಾರೆ, ದೇಶ್ ಮುಖ್ ಅವರನ್ನು ರಕ್ಷಿಸುತ್ತಿದ್ದಾರೆ :ಫಡ್ನವಿಸ್
3 ನಿಮಿಷ 22 ಸೆಂಕೆಂಡುಗಳಿರುವ ‘ತಲೈವಿ’ ಟ್ರೈಲರ್, ಜಯಲಲಿತ ಅವರ ಜೀವನದ ಆರಂಭಿಕ ಅಧ್ಯಾಯಗಳೊಂದಿಗೆ ಪ್ರಾರಂಭವಾಗಿ ಚಿತ್ರರಂಗದಲ್ಲಿ ಅವರ ವೃತ್ತಿಜೀವನವನ್ನು ಕಂಡುಕೊಂಡಿರುವುದರ ಬಗ್ಗೆ ಸಂಕ್ಷಿಪ್ತವಾಗಿ ತೋರಿಸುತ್ತದೆ.
ಜಯಲಲಿತ ಅವರಿಗೆ ಮಾರ್ಗದರ್ಶಕರಂತೆ ಇದ್ದಿದ್ದ ಎಂ.ಜಿ.ರಾಮಚಂದ್ರನ್ (ಎಂಜಿಆರ್) ಅವರ ಬಗ್ಗೆಯೂ ಟ್ರೇಲರ್ ನಲ್ಲಿ ತೋರಿಸಲಾಗಿದೆ. ಟ್ರೈಲರ್ ನ ಉತ್ತರಾರ್ಧವು ನಾಯಕಿಯ ವೃತ್ತಿ ಜೀವನದ ಮೇಲೆ ಕೇಂದ್ರೀಕರಿಸುತ್ತದೆ. ಅವರು ರಾಜಕೀಯಕ್ಕೆ ಹೇಗೆ ಪ್ರವೇಶಿಸಿದರು ಮತ್ತು ತಮಿಳುನಾಡಿನಲ್ಲಿ ಐಕಾನ್ ಪಟ್ಟವನ್ನು ಹೇಗೆ ಅಲಂಕರಿಸಿದರು ಎಂಬುವುದನ್ನು ಅದ್ಭುತವಾಗಿ ಪ್ರಸ್ತುತಪಡಿಸಿದೆ ‘ತಲೈವಿ’ ಟ್ರೈಲರ್.
ಒಟ್ಟಾರೆಯಾಗಿ ಹೇಳುವುದಾದರೆ, ಟ್ರೈಲರ್ ಜಯಲಲಿತ ಅವರ ಜೀವನ ಕಥೆಯನ್ನು ವಿವರಿಸುವುದರೊಂದಿಗೆ ಜಯಲಲಿತ ಅವರ ಬಗ್ಗೆ ನಮಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ಕುತೂಹಲ ಹುಟ್ಟಿಸುತ್ತದೆ.
ಕಂಗನಾಗೆ ಡಬಲ್ ಧಮಾಕ :
ನಿನ್ನೆ(ಸೋಮವಾರ)ಯಷ್ಟೇ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಮಣಿಕರ್ಣಿಕಾ ಹಾಗೂ ಪಂಗಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದು ಬಂದಿತ್ತು, ಇಂದು ತನ್ನ 34 ನೇ ಜನ್ಮ ದಿನವನ್ನು ಆಚರಿಸಿಕೊಳ್ಳುವುದರೊಂದಿಗೆ ತಮ್ಮ ಮುಂದಿನ ಯೋಜನೆಯಾದ ‘ತಲೈವಿ’ಯ ಟ್ರೈಲರ್ ನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದೆ ಚಿತ್ರ ತಂಡ. ಒಟ್ಟಿನಲ್ಲಿ ಈ ಸಂಭ್ರಮ ಕಂಗನಾ ಪಾಲಿಗೆ ಡಬಲ್ ಧಮಾಕದಂತಾಗಿದ್ದಂತೂ ಸತ್ಯ.
ಈ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಅನ್ನು ಕ್ವೀನ್ ಆಫ್ ಝಾನ್ಸಿ(ಕಂಗನಾ) ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಹು ನಿರೀಕ್ಷಿತ ‘ತಲೈವಿ’ ಈ ಬರುವ ಏಪ್ರಿಲ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಜಯ್ ನಿರ್ದೇಶನದ ಮತ್ತು ವಿಷ್ಣು ವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್ ಸಿಂಗ್ ಸಹ ನಿರ್ಮಾಣದ ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಓದಿ : ಠಾಕ್ರೆ ಬಗ್ಗೆ ಮಾತಾಡಿದರೆ ‘ಆ್ಯಸಿಡ್ ದಾಳಿ’ ನಡೆಸುವುದಾಗಿ ಶಿವಸೇನೆ ಬೆದರಿಕೆ : ನವನೀತ್ ಕೌರ್