Advertisement

ಥೈಲ್ಯಾಂಡ್ ‌ಗೆ ಓಡಿಹೋಗಲು ಚೀನಿಯರ ಪ್ಲ್ರಾನ್‌!

11:24 AM Jun 27, 2020 | sudhir |

ಬ್ಯಾಂಕಾಕ್‌: ಕೋವಿಡ್‌ ವಿರುದ್ಧ ರಕ್ಷಣೆಗೆ ಏನು ಮಾಡೋದು? ಸ್ಯಾನಿಟೈಸರ್‌ ತರೋಣ, ಮಾಸ್ಕ್ ಹಾಕೋಣ ಎಂದೆಲ್ಲ ಜನ ಚಿಂತೆ ಮಾಡುತ್ತಿದ್ದರೆ ಚೀನದ ಶ್ರೀಮಂತರು ಥೈಲ್ಯಾಂಡ್‌ಗೆ ಓಡಿ ಹೋಗುವ ಪ್ಲಾನ್‌ ಮಾಡಿದ್ದಾರೆ!

Advertisement

ಬೀಜಿಂಗ್‌ನಲ್ಲಿ ಎರಡನೇ ಬಾರಿಗೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಅಲ್ಲಿನ ಸಂದಿಗ್ಧ ವಾತಾವರಣದಿಂದ ತಪ್ಪಿಸಿಕೊಳ್ಳಲು ಥಾçಲೆಂಡ್‌ಗೆ ಹೋಗುವ ಪ್ಲ್ರಾನ್‌ ರೂಪಿಸಿದ್ದಾರೆ. ಥೈಲ್ಯಾಂಡ್‌ ಪ್ರಿವಿಲೆಜ್‌ ಕಾರ್ಡ್‌ ಎಂಬ ವ್ಯವಸ್ಥೆಯಡಿ ಪ್ರವಾಸಿಗರು ಥೈಲ್ಯಾಂಡ್‌‌ನ‌ಲ್ಲಿ ಇರಬಹುದಾಗಿದ್ದು, ಇದಕ್ಕೆ ಫೆಬ್ರವರಿ ಯಿಂದ ಚೀನಿಯರು ಅರ್ಜಿ ಸಲ್ಲಿಸುತ್ತಿರುವ ಪ್ರಮಾಣ ಹೆಚ್ಚಾಗಿದೆ. ಸುಮಾರು 20 ವರ್ಷ ರೀ-ಎಂಟ್ರಿ ವೀಸಾವನ್ನು ಇದು ಕೊಡುತ್ತದೆ. ಇದರಿಂದ ಈ ಅವಧಿಯಲ್ಲಿ ಎಷ್ಟು ಸಲವೂ ಹೋಗಿ ಬರಬಹುದು. ಚೀನದಲ್ಲಿ ಕೋವಿಡ್‌ ಸಂಖ್ಯೆ ಏರುತ್ತಿದ್ದಂತೆ, ಅಲ್ಲಿಂದ ಕಾರ್ಡ್‌ ಬಗ್ಗೆ ವಿಚಾರಣೆ ನಡೆಸುವವರೂ ಹೆಚ್ಚುತ್ತಿದ್ದಾರೆ ಎಂದು ಏಜೆಂಟರು ಹೇಳು ತ್ತಿದ್ದಾರೆ. ಆರಂಭದಲ್ಲಿ ಲಾಕ್‌ಡೌನ್‌ ಕಂಡಿದ್ದ ಬೀಜಿಂಗ್‌ನಲ್ಲಿ ಜೂ.12ರ ಬಳಿಕ ಮತ್ತೆ ಕೋವಿಡ್‌ ಭೀತಿ ಶುರುವಾಗಿದೆ.

ಈಗ ಅಲ್ಲಿನ ಪ್ರಕರಣಗಳ ಸಂಖ್ಯೆ 158 ಆಗಿದ್ದು, ರೋಗ ಲಕ್ಷಣ ಇಲ್ಲದೆ ಇರುವವರ ಸಂಖ್ಯೆ ಏರುತ್ತಲೇ ಇದೆ. ಅತಿ ಹೆಚ್ಚು ಅಪಾಯ ಇರುವ ಪ್ರದೇಶದಲ್ಲಿರುವ ಜನರಿಗೆ ನಗರದಿಂದ ಹೊರಗೆ ಹೋಗಲು ಅವಕಾಶವಿಲ್ಲದಿದ್ದರೂ ಇತರರಿಗೆ ಇದೆ. ಆದ್ದರಿಂದ ಕೋವಿಡ್‌ ಇಲ್ಲ ಎಂಬ ಪ್ರಮಾಣ ಪತ್ರ ಪಡೆದು ಅಲ್ಲಿಂದ ಪಾರಾಗುವ ಯೋಚನೆಯಲ್ಲಿ ಹಲವು ಶ್ರೀಮಂತರಿದ್ದಾರೆ ಎಂದು ಹೇಳಲಾಗಿದೆ. ಈ ವರೆಗೆ ವಿಶೇಷ “ಎಲೈಟ್‌ ವೀಸಾ’ ಪಡೆದವರಲ್ಲಿ 9578 ಮಂದಿ ಇದ್ದರೆ ಇವರಲ್ಲಿ ಚೀನೀಯರ ಪ್ರಮಾಣ ಶೇ.20ಷ್ಟಿದೆ. ಉಳಿದಂತೆ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್‌ನವರು ಇದರಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next