Advertisement

Thailand: ಶಾಲಾ ಬಸ್ಸಿಗೆ ಬೆಂಕಿ, 20 ವಿದ್ಯಾರ್ಥಿಗಳು, 3 ಶಿಕ್ಷಕರು ಸುಟ್ಟು ಕರಕಲು!

09:22 PM Oct 01, 2024 | Team Udayavani |

ಬ್ಯಾಂಕಾಕ್‌: ಥೈಲ್ಯಾಂಡ್‌ನ‌ಲ್ಲಿ ಶಾಲಾ ಪ್ರವಾಸಕ್ಕಾಗಿ 44 ಮಂದಿಯನ್ನು ಕರೆದೊಯ್ಯುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದ್ದು, 20 ವಿದ್ಯಾರ್ಥಿಗಳು, 3 ಶಿಕ್ಷಕರು ಸುಟ್ಟು ಕರಕಲಾಗಿದ್ದಾರೆ. ಗಾಯಗೊಂಡಿರುವ ಇತರ 19 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ದುರ್ಘ‌ಟನೆಯ ಬಳಿಕ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಬ್ಯಾಂಕಾಕ್‌ ಹೊರವಲಯದಲ್ಲಿ ಬಸ್‌ಗೆ ಬೆಂಕಿ ಹತ್ತಿಕೊಂಡಿದೆ. ದುರಂತಕ್ಕೀಡಾದ ಬಸ್‌ ಸಿಎನ್‌ಜಿಯನ್ನು ಇಂಧನವಾಗಿ ಬಳಕೆ ಮಾಡುತ್ತಿದ್ದು, ಅಪಘಾತ ಸಂಭವಿಸಿ ಇಂಧನ ಸೋರಿಕೆಯಾಗಿ ಬೆಂಕಿ ಹೊತ್ತಿರಬಹುದು ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next