Advertisement

ವನಿತಾ ಏಷ್ಯಾ ಕಪ್‌: ಸೆಮಿಫೈನಲ್ ಪ್ರವೇಶಿಸಿದ ಥೈಲ್ಯಾಂಡ್

11:12 PM Oct 11, 2022 | Team Udayavani |

ಸಿಲ್ಲೆಟ್‌: ಆತಿಥೇಯ ಮತ್ತು ಹಾಲಿ ಚಾಂಪಿಯನ್‌ ಬಾಂಗ್ಲಾದೇಶ ಮತ್ತು ಯುಎಇ ವಿರುದ್ಧ ಮಂಗಳ ವಾರ ನಡೆಯಬೇಕಾಗಿದ್ದ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಥೈಲ್ಯಾಂಡ್ ನಾಲ್ಕನೇ ತಂಡವಾಗಿ ಸೆಮಿಫೈನಲಿಗೇರಿದೆ. ಥೈಲ್ಯಾಂಡ್ ಚೊಚ್ಚಲ ಬಾರಿ ಏಷ್ಯಾ ಕಪ್‌ ಕೂಟದ ಸೆಮಿಫೈನಲ್‌ ತಲುಪಿದೆ.

Advertisement

ಅಂತಿಮ ತಂಡವಾಗಿ ಸೆಮಿಫೈನಲಿಗೇರಲು ಬಾಂಗ್ಲಾಕ್ಕೆ ಅಂತಿಮ ಲೀಗ್‌ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಸಾಕಿತ್ತು. ಆದರೆ ಮಳೆಯಿಂದ ರದ್ದುಗೊಂಡ ಕಾರಣ ಬಾಂಗ್ಲಾ ಒಂದಂಕ ಮಾತ್ರ ಪಡೆಯಿತು. ಬಾಂಗ್ಲಾ ಆಡಿದ ಆರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿ ಒಟ್ಟಾರೆ ಐದಂಕ ಪಡೆದಿದ್ದರೆ ಥೈಲ್ಯಾಂಡ್ ತಂಡವು ಯುಎಇ, ಮಲೇಶ್ಯ ಮತ್ತು ಬಲಿಷ್ಠ ತಂಡವಾದ ಪಾಕಿಸ್ಥಾನವನ್ನು ಸೋಲಿಸಿ ಆರಂಕ ಗಳಿಸಿತ್ತು.

ಭಾರತಕ್ಕೆ ಅಗ್ರಸ್ಥಾನ
ಮಂಗಳವಾರ ನಡೆದ ಅಂತಿಮ ಲೀಗ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ್ದ ಪಾಕಿಸ್ಥಾನ ಮತ್ತು ಭಾರತ ಒಟ್ಟು ಐದು ಪಂದ್ಯಗಳಲ್ಲಿ ಗೆದ್ದು ಹತ್ತು ಅಂಕ ಗಳಿಸಿದೆ. ಆದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಭಾರತ ಅಗ್ರಸ್ಥಾನ ಪಡೆಯಿತು. ಪಾಕಿಸ್ಥಾನ ಮತ್ತು ಶ್ರೀಲಂಕಾ ಎರಡನೇ ಮತ್ತು ಮೂರನೇ ತಂಡವಾಗಿ ಸೆಮಿಫೈನಲ್‌ ತಲುಪಿದೆ.

ಅ. 13ರ ಗುರುವಾರ ಸೆಮಿಫೈನಲ್ಸ್‌ ನಡೆಯಲಿವೆ. ಭಾರತವು ಥಾçಲಂಡ್‌ ಹಾಗೂ ಪಾಕಿಸ್ಥಾನವು ಶ್ರೀಲಂಕಾವನ್ನು ಮತ್ತೆ ಎದುರಿಸಲಿದೆ. ಅ. 15ರಂದು ಫೈನಲ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next