ಬ್ಯಾಂಕಾಕ್: ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಲ್ಲಿ ಉತ್ತಮ ಪ್ರದರ್ಶನವಿತ್ತ ಭಾರತವೀಗ “ಥಾಯ್ಲೆಂಡ್ ಓಪನ್ ಸೂಪರ್-500′ ಕೂಟದಲ್ಲಿ ಹೊಸ ಭರವಸೆಯೊಂದಿಗೆ ಕಣಕ್ಕಿಳಿಯಲಿದೆ. ಈ ಪಂದ್ಯಾವಳಿ ಮಂಗಳವಾರ ಬ್ಯಾಂಕಾಕ್‌ನಲ್ಲಿ ಆರಂಭವಾಗಲಿದೆ.
ಮಲೇಷ್ಯಾದಲ್ಲಿ ಎಚ್.ಎಸ್. ಪ್ರಣಯ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದು ತಂಡಕ್ಕೆ ಹೊಸ ಸ್ಫೂರ್ತಿ ತುಂಬಿ ದ್ದರು. ಆದರೆ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್ ಕ್ರಮವಾಗಿ ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಎಡವಿ ನಿರಾಸೆ ಮೂಡಿಸಿದ್ದರು. ಇವರು ಬ್ಯಾಂಕಾಕ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಿದೆ.
ಪಿ.ವಿ. ಸಿಂಧು ನೂತನ ರ್‍ಯಾಂಕಿಂಗ್‌ನಲ್ಲಿ 2 ಸ್ಥಾನ ಕುಸಿತ ಕಂಡಿದ್ದು (13), ಮತ್ತೆ ಪ್ರಗತಿ ಸಾಧಿಸಬೇಕಾದರೆ ಥಾಯ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯ. ಮೊದಲ ಸುತ್ತಿನಲ್ಲಿ ಇವರ ಎದುರಾಳಿ ಕೆನಡಾದ ಮೈಕಲ್ ಲೀ. ಹಾಗೆಯೇ ಕೆ. ಶ್ರೀಕಾಂತ್ ಮಲೇಷ್ಯಾ ಮಾಸ್ಟರ್ ಫೈನಲಿಸ್ಟ್ ವೆಂಗ್ ಹಾಂಗ್ ಯಾಂಗ್ ಸವಾಲನ್ನು ಎದುರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್.ಎಸ್. ಪ್ರಣಯ್ ಅವರಿಂದ ಕೆಲವು ಟಿಪ್ಸ್ ಕೂಡ ಪಡೆದಿದ್ದಾರೆ. ಮಲೇಷ್ಯಾದಲ್ಲಿ ಯಾಂಗ್ ಅವರನ್ನು ಮಣಿಸಿಯೇ ಪ್ರಣಯ್ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ಮೊದಲ ಸುತ್ತು ದಾಟಿದರೆ ಪಿ.ವಿ. ಸಿಂಧು ಚೀನದ 6ನೇ ಶ್ರೇಯಾಂಕದ ಆಟಗಾರ್ತಿ ವಾಂಗ್ ಜೀ ಯೀ ಅವ ರನ್ನು, ಕೆ. ಶ್ರೀಕಾಂತ್ 3ನೇ ಶ್ರೇಯಾಂಕದ ಚೀನೀ ಆಟಗಾರ ಶೀ ಯು ಕ್ವಿ ಅವರನ್ನು ಎದುರಿಸುವ ಸಾಧ್ಯತೆ ಇದೆ.
Related Articles
ಲಕ್ಷ್ಯ ಸೇನ್ ಆಟ
ರ್‍ಯಾಂಕಿಂಗ್‌ನಲ್ಲಿ ಟಾಪ್-20 ಯಾದಿ ಯಿಂದ ಹೊರಬಿದ್ದಿರುವ ಲಕ್ಷ್ಯ ಸೇನ್ ಚೈನೀಸ್ ತೈಪೆಯ ವಾಂಗ್ ಜು ವೀ ವಿರುದ್ಧ ಆಟ ಆರಂಭಿಸಲಿದ್ದಾರೆ. “ಓಲೀìನ್ಸ್ ಮಾಸ್ಟರ್’ ಚಾಂಪಿಯನ್ ಪ್ರಿಯಾಂಶು ರಾಜಾವತ್ ಕೂಡ ಕಣದಲ್ಲಿದ್ದು, ಮಲೇಷ್ಯಾದ ಎನ್‌ಜಿ ಜೇ ಯಾಂಗ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸುವರು.
ಮಲೇಷ್ಯಾ ಓಪನ್‌ನಲ್ಲಿ ಎಡವಿದ ಭಾರತದ ನಂ.1 ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಫ್ರಾನ್ಸ್‌ನ ಲುಕಾಸ್ ಕೊರ್ವೀ-ರೋನನ್ ಲಾಬರ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು. ಕೃಷ್ಣಪ್ರಸಾದ್ ಗರಗ್-ವಿಷ್ಣುವರ್ಧನ್, ಅಶ್ವಿನಿ ಭಟ್-ಶಿಖಾ ಗೌತಮ್ ಕೂಡ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ.