Advertisement

ಥಾಯ್ಲೆಂಡ್‌ ಮಾಸ್ಟರ್:ಕೆ. ಶ್ರೀಕಾಂತ್‌ ಮುನ್ನಡೆ

12:29 AM Feb 01, 2024 | Team Udayavani |

ಬ್ಯಾಂಕಾಕ್‌: ಕೆ. ಶ್ರೀಕಾಂತ್‌ “ಥಾಯ್ಲೆಂಡ್‌ ಮಾಸ್ಟರ್’ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಮೊದಲ ಸುತ್ತು ದಾಟಿದ್ದಾರೆ. ಅವರು 45 ನಿಮಿಷಗಳ ಹೋರಾಟದಲ್ಲಿ ಚೈನೀಸ್‌ ತೈಪೆಯ ವಾಂಗ್‌ ಜು ವೀ ವಿರುದ್ಧ 22-20, 21-19 ಅಂತರದ ಜಯ ಸಾಧಿಸಿದರು.

Advertisement

ಎಸ್‌.ಎಂ. ಸುಬ್ರಹ್ಮಣಿಯನ್‌ ಕೂಡ 2ನೇ ಸುತ್ತು ಪ್ರವೇಶಿಸಿದ್ದಾರೆ. ಅವರು ಮಲೇಷ್ಯಾದ ಲಿಯಾಂಗ್‌ ಜುನ್‌ ಹಾವೊ ವಿರುದ್ಧ 21-14, 21-17ರಿಂದ ಗೆದ್ದು ಬಂದರು. ಆದರೆ ಸಮೀರ್‌ ವರ್ಮ ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು. ವನಿತಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋಡ್‌, ಅಶ್ಮಿತಾ ಚಲಿಹಾ ಕೂಡ ದ್ವಿತೀಯ ಸುತ್ತು ತಲುಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next