ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಗುರು ದೇಶಪಾಂಡೆ ನಿರ್ದೇಶನದ “ಠಾಕ್ರೆ’ ಎಂಬ ಚಿತ್ರ ಇಷ್ಟರಲ್ಲಾಗಲೇ ಸೆಟ್ಟೇರಬೇಕಿತ್ತು. ಈ ಚಿತ್ರದಲ್ಲಿ ಪ್ರಜ್ವಲ್ ಮತ್ತು ರವಿಚಂದ್ರನ್ ಅವರಿಬ್ಬರೂ ಮೊದಲ ಬಾರಿಗೆ ಒಟ್ಟಾಗಿ ಅಭಿನಯಿಸಬೇಕಿತ್ತು. ಎಂ.ಎನ್. ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಬೇಕಿತ್ತು. ಕೆಲವು ತಿಂಗಳ ಹಿಂದೆ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಸಹ ನಡೆದಿದ್ದು, ಪ್ರಜ್ವಲ್ ತಮ್ಮ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡಿದ್ದರು.
ಈಗಿನ ಸುದ್ದಿ ಪ್ರಕಾರ, ಗುರು ದೇಶಪಾಂಡೆ ಸದ್ಯಕ್ಕೆ “ಠಾಕ್ರೆ’ ಚಿತ್ರವನ್ನು ಕೈಬಿಟ್ಟಿದ್ದಾರೆ. ಅದರ ಬದಲು “ರಾಜ ಮಾಣಿಕ್ಯ’ ಎಂಬ ಇನ್ನೊಂದು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲೂ ಎಲ್ಲವೂ ಮುಂದುವರೆಯಲಿದೆ. ಪ್ರಜ್ವಲ್ ಮತ್ತು ರವಿಚಂದ್ರನ್ ಅವರ ನಟನೆ, ಗುರು ದೇಶಪಾಂಡೆ ನಿರ್ದೇಶನ, ಕುಮಾರ್ ಅವರ ನಿರ್ಮಾಣ ಮುಂದುವರೆಯಲಿದ್ದು, ಪ್ರಮುಖವಾಗಿ ಕಥೆ ಮತ್ತು ಚಿತ್ರದ ಹೆಸರು ಬದಲಾಗಿದೆ.
ಈ ಹಿಂದೆ ಯಾವ ಕಥೆ ಮತ್ತು ಹೆಸರು ಇತ್ತೋ, ಆ ಕಥೆ ಮತ್ತು ಹೆಸರಿನ ಬದಲಿಗೆ ಇನ್ನೊಂದು ಬಂದಿದೆ ಅಷ್ಟೇ. ಈ ಚಿತ್ರ ಏಪ್ರಿಲ್ ಕೊನೆಯ ಹೊತ್ತಿಗೆ ಶುರುವಾಗಲಿದೆಯಂತೆ. ಅಷ್ಟಕ್ಕೇ ಮುಗಿಯಲಿಲ್ಲ. ಈ ಬಾರಿ ಗುರು ದೇಶಪಾಂಡೆ ಒಟ್ಟೊಟ್ಟಿಗೆ ನಾಲ್ಕು ಚಿತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ. “ರಾಜ ಮಾಣಿಕ್ಯ’ದ ಒಂದು ಹಂತದ ಚಿತ್ರೀಕರಣ ಮುಗಿಸಿ, ಚಿರು ಮತ್ತು ಚಿಕ್ಕಣ್ಣ ಅಭಿನಯದಲ್ಲಿ ಇನ್ನೊಂದು ಶುರು ಮಾಡುತ್ತಾರಂತೆ.
ವೆಂಕಟೇಶ್ ಮತ್ತು ಕಾಮರಾಜ್ ಎನ್ನುವವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರವಿ ಬಸೂರು ಸಂಗೀತ ಸಂಯೋಜಿಸುತ್ತಿದ್ದು, ಈ ಬುಧವಾರದಿಂದ ಹಾಡುಗಳ ರೆಕಾರ್ಡಿಂಗ್ ಕೆಲಸ ಪ್ರಾರಂ¸ವಾಗಲಿದೆಯಂತೆ. ಈ ಹೆಸರಿಡದ ಚಿತ್ರ ಮತ್ತು “ರಾಜ ಮಾಣಿಕ್ಯ’ ಎರಡೂ ಮುಗಿಯುತ್ತಿದ್ದಂತೆ ಅವರು ಧನವೀರ್ ಎಂಬ ಹೊಸ ಹುಡುಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಾರಂತೆ.
ಇದೆಲ್ಲದರ ಜೊತೆಗೆ ಗುರು ದೇಶಪಾಂಡೆ ಸಿನಿಮಾಸ್ ಎಂಬ ಹೊಸ ಪೊ›ಡಕ್ಷನ್ ಹೌಸ್ ಹುಟ್ಟುಹಾಕಿರುವ ಅವರು, ಅದರ ಮೂಲಕ ಚಿತ್ರವೊಂದನ್ನು ನಿರ್ಮಿಸುವುದಕ್ಕೆ ಸಜಾjಗುತ್ತಿದ್ದಾರೆ. ಖ್ಯಾತ ರಂಗಕರ್ಮಿ ಮೌನೇಶ್ ಬಡಿಗೇರ್ ಅವರು ಈ ಚಿತ್ರವನ್ನು ನಿದೇಶಿಸಲಿದ್ದಾರಂತೆ. ಮೇ 24ಕ್ಕೆ ಈ ಚಿತ್ರ ಶುರುವಾಗಲಿದೆ.