Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಸೂಚನೆ ನೀಡಲಾಗಿದೆ. ಈ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
Related Articles
Advertisement
ಈ ವಿಚಾರವಾಗಿ ಬೇರೆ ಸಂದರ್ಭದಲ್ಲಿ ಮಾತನಾಡುವ ವಿರೋಧ ಪಕ್ಷಗಳು ಈಗ ಏಕೆ ಮಾತನಾಡುತ್ತಿಲ್ಲ? ಟಿಪ್ಪು, ಹಿಜಾಬ್ ವಿಚಾರಕ್ಕೆ ಮಾತನಾಡುವವರು ಬೈಬಲ್ ವಿಷಯದಲ್ಲಿ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕ್ಲಾರೆನ್ಸ್ ಶಾಲೆಗೆ ಎಲ್ಲಾ ಧರ್ಮದ ಮಕ್ಕಳು ಬರುತ್ತಾರೆ. ಅವರಿಗೆ ನಿಯಮಾನುಸಾರವಾಗಿ ಪಾಠ-ಪ್ರವಚನಗಳನ್ನು ಮಾಡಬೇಕು. ಪ್ರಜಾಪ್ರಭುತ್ವದ ಅಡಿಯಲ್ಲಿ ನಾವು ಏನು ಕ್ರಮ ತೆಗೆದುಕೊಳ್ಳಬೇಕೇ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.
ಕರ್ನಾಟಕ ಶಿಕ್ಷಣ ನಿಯಮಗಳಿಗೆ ವಿರುದ್ಧವಾಗಿ ಧರ್ಮ ಬೋಧನೆ ಮಾಡುತ್ತಿರುವುದರಿಂದ ಈಗಾಗಲೇ ಕಾರಣ ಕೇಳಿ ಕ್ಲಾರೆನ್ಸ್ ಶಾಲೆಗೆ ನೋಟಿಸ್ ನೀಡಲಾಗಿದೆ. ಶಾಲಾ ಆಡಳಿತ ಮಂಡಳಿಯು ನೀಡುವ ಉತ್ತರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.