Advertisement

ಪಠ್ಯಕ್ರಮ ವಿವಾದ: ಎಡಪಂಥೀಯರ ಆಕ್ಷೇಪಕ್ಕೆ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಟೀಕೆ

07:50 AM May 27, 2022 | Team Udayavani |

ಮೈಸೂರು: ಎಸ್‌ಎಸ್‌ಎಲ್‌ಸಿ ಪಠ್ಯಕ್ರಮದ ವಿಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಹಾಗೂ ಎಡಪಂಥೀಯರು ಎಬ್ಬಿಸಿರುವ ಗದ್ದಲವನ್ನು ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಆಕ್ಷೇಪಿಸಿದ್ದಾರೆ.

Advertisement

ಎಸ್‌ಎಸ್‌ಎಲ್‌ಸಿ ಪಠ್ಯಕ್ರಮದ ವಿಚಾರದಲ್ಲಿ ಯಾವ ವಿಷಯಗಳನ್ನು ಸೇರಿಸಲಾಗಿದೆ, ಯಾವ ವಿಷಯಗಳನ್ನು ಕೈಬಿಡಲಾಗಿದೆ ಎಂಬ ಬಗ್ಗೆ ತಮಗೆ ತಿಳಿದಿಲ್ಲ. ಆದರೆ, ಒಂದಂತೂ ನಿಜ. ಏನು ಮಾಡಿದರೂ ವಿವಾದ ಎಬ್ಬಿಸುವ ಕೆಲವರು ಇದ್ದಾರೆ. ಏನು ಮಾಡಿದರೂ ಅದರಲ್ಲಿ ಏನಾದರೂ ಹುಳುಕು ಹುಡುಕುವ ಕೆಲಸವೇ ಅವರದು. ಅವರಿಗೆ ಬೇರೆ ಏನು ಕೆಲಸ ಇದೆ ಹೇಳಿ? ಎಂದು ಡಾ.ಎಸ್‌.ಎಲ್‌.ಭೈರಪ್ಪ ಅವರು ಗುರುವಾರ ಉದಯವಾಣಿಗೆ ಪ್ರತಿಕ್ರಿಯಿಸಿದರು.

ಕಾಲ ಕಾಲಕ್ಕೆ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆಯುತ್ತಾ ಬಂದಿದೆ. ಇತಿಹಾಸ ತಿಳಿದರೆ ಇತಿಹಾಸವನ್ನು ನಿರ್ಮಾಣ ಮಾಡಬಹುದು. ಅದರಂತೆ ಇತಿಹಾಸವನ್ನು ತಿಳಿಸುವ ಕೆಲಸ ಆಗಬೇಕು. ಇಂತಹ ಕೆಲಸಗಳನ್ನು ಸಮಿತಿಗಳು ಆಗಾಗ ಮಾಡುತ್ತವೆ. ಈ ಹಿಂದೆಯೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಅದೇ ರೀತಿ ಪರಿಷ್ಕರಣೆ ವಿಚಾರ ಬಂದಾಗ ಚರ್ಚೆಗಳು ಸಹಜ.-ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next