ತುಮಕೂರು : ಪಠ್ಯ ಪುಸ್ತಕದ ವಿವಾದದ ಬಳಿಕ ರೋಹಿತ್ ಚಕ್ರತೀರ್ಥ ಗಡಿಪಾರು ಮಾಡಬೇಕೆಂಬ ಒತ್ತಾಯಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ತಿರುಗೇಟು ನೀಡಿದ್ದಾರೆ.
ಕೆಡಿಪಿ ಸಭೆ ಗೂ ಮುನ್ನ ಸುದ್ದಿಗಾರ ಮಾತನಾಡಿದ ಅವರು, ಗಡಿಪಾರು ಮಾಡಬೇಕಾದರೆ ಹಲವು ನಿಮಯಗಳಿವೆ. ಯಾರನ್ನಾದರೂ ಗಡಿಪಾರು ಮಾಡಿ ನಾವು ಚೆಂದ ನೋಡುವುದಕ್ಕೆ ಆಗುವುದಿಲ್ಲ.ಅಲ್ಲದೆ ರೋಹಿತ್ ಚಕ್ರ ತೀರ್ಥ ಗಡಿಪಾರು ಮಾಡುವಂತ ಯಾವುದೇ ಕೃತ್ಯ ಎಸಗಿರುವ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ, ಎಂದು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರ ಬೆನ್ನಿಗೆ ನಿಂತಿದ್ದಾರೆ.
ಈಗಾಗಲೇ ಪಠ್ಯ ವಿವಾದದ ಬಗ್ಗೆ ಸಚಿವ ಬಿ.ಸಿ ನಾಗೇಶ್ ಅವರು ಸ್ಪಷ್ಟನೆ ನೀಡಿದಾರೆ. ಆದಿ ಚುಂಚನಗಿರಿ ಶ್ರೀಗಳನ್ನ ಭೇಟಿ ಮಾಡಿದ್ದಾರೆ.ಈ ಬಗ್ಗೆ ಅನಗತ್ಯವಾಗಿ ಚರ್ಚೆ ಎಬ್ಬಿಸುತಿದ್ದಾರೆ. ಅಸಹಿಷ್ಣುತೆ ಎಲ್ಲೆ ಮೀರಿ ಪ್ರಕರಣ ನಡೆಯುತ್ತಿದೆ. 2017ರಲ್ಲಿ ನಡೆದ ಪ್ರಕರಣ ಈಗಾಗಲೇ ಬಿ ರಿಪೋರ್ಟ್ ಆಗಿದೆ. ಈವರೆಗೂ ಯಾವುದೇ ಪ್ರಕರಣವಿಲ್ಲ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ವಿವಾದಕ್ಕೆ ತೆರೆ ಎಳೆಯುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಜಾಗತಿಕ ಪ್ರಭಾವವನ್ನು ವಿಸ್ತರಿಸುವಲ್ಲಿ ಪ್ರಧಾನಿ ಮೋದಿ ಕೊಡುಗೆ ಇದೆ: ಅಕ್ಷಯ್ ಕುಮಾರ್
ಇನ್ನೂ ಸದಾ ಕೇಂದ್ರ ಸಕಾರದ ಮುಂದೆ ಜಿಎಸ್ ಟಿ ಹಣಕ್ಕೆ ಎದುರು ನೋಡುತಿದ್ದ ಸಂದರ್ಭದಲ್ಲಿ, ಈಗ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ಪ್ರತಿಕ್ರಿಯಿಸುವುದಾಗಿ ತಿಳಿಸಿದರು.